More

    ಮಕ್ಕಳ ದತ್ತು ಸ್ವೀಕಾರ ವಿದೇಶಿಗರ ದೊಡ್ಡಗುಣ

    ಗದಗ: ವಿದೇಶಿಗರು ಭಾರತದ ವಿಶೇಷ ಅಗತ್ಯತೆವುಳ್ಳ ಮಕ್ಕಳ ಬಗೆಗೆ ವಿಶೇಷ ಕಾಳಜಿ ವಹಿಸುವ ಮೂಲಕ ಅಂತಹ ಮಕ್ಕಳನ್ನು ದತ್ತು ಪಡೆಯಲು ಮುಂದಾಗುತ್ತಿರುವುದು ಅವರ ದೊಡ್ಡ ಗುಣ ಎಂದು ಡಾ. ಶಿವನಗೌಡ ಜೋಳದರಾಶಿ ಹೇಳಿದರು.

    ಬೆಟಗೇರಿ ಹೆಲ್ತ್ ಕ್ಯಾಂಪ್​ನಲ್ಲಿರುವ ಸೇವಾಭಾರತಿ ಟ್ರಸ್ಟ್​ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೋಷಣೆಗೊಂಡ ಮಗುವನ್ನು ಅಮೆರಿಕದ ದಂಪತಿಗೆ ದತ್ತುಪೂರ್ವ ಪೋಷಕತ್ವದಡಿ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತ ನಾಡಿದರು. ವಿಶೇಷ ಅಗತ್ಯತೆವುಳ್ಳ ಮಕ್ಕಳನ್ನು ದತ್ತು ಪಡೆದು ಆ ಮಗುವಿಗೆ ಉತ್ತಮ ಭವಿಷ್ಯ ರೂಪಿಸಲು ಮುಂದಾಗಿರುವ ವಿದೇಶಿ ದಂಪತಿಯ ಸಂಕಲ್ಪ ಸ್ವಾಗತಾರ್ಹ. ಈ ಮಗುವಿಗೆ ಉತ್ತಮ ಆರೋಗ್ಯ ಭವಿಷ್ಯ ರೂಪುಗೊಳ್ಳುವಂತಾಗಬೇಕು ಎಂದರು.

    ಡಾ. ವೀರೇಶ ಹಂಚಿನಾಳ ಮಾತನಾಡಿ, ಭಾರತೀಯರಿಗೆ ಬೇಡವಾದ ವಿಶೇಷ ಅಗತ್ಯತೆವುಳ್ಳ ಮಗು ವಿದೇಶಿಗರು ಆದ್ಯತೆ ಮೇರೆಗೆ ಪಡೆದುಕೊಳ್ಳುತ್ತಿರುವುದು ಅಭಿನಂದನೀಯ. ಹೆತ್ತವರಿಗೆ ಬೇಡವಾಗುತ್ತಿರುವ ಮಕ್ಕಳ ಸಂಖ್ಯೆ ಇಳಿಮುಖವಾಗಬೇಕು ಎಂದರು.

    ಸೇವಾಭಾರತಿ ಟ್ರಸ್ಟ್​ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಅಲಕ್ಷಿತ ಮಕ್ಕಳನ್ನು ಸಂರಕ್ಷಿಸಿ ಪೋಷಣೆ ಮಾಡುವ ಮೂಲಕ ಮಕ್ಕಳಿಲ್ಲದ ದಂಪತಿಗಳಿಗೆ ಕಾನೂನು ಪ್ರಕಾರ ದತ್ತು ನೀಡುವ ಕಾರ್ಯ ಮಾಡುತ್ತಿರುವುದು ಪುಣ್ಯದ ಕೆಲಸ ಎಂದರು.

    ಅಧ್ಯಕ್ಷತೆ ವಹಿಸಿದ್ದ ಸೇವಾಭಾರತಿ: ಟ್ರಸ್ಟ್ ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಇಂತಹ ಮಕ್ಕಳ ಸಂಖ್ಯೆ ಶೂನ್ಯವಾಗಿ ಎಲ್ಲರೂ ಗೌರವದಿಂದ ಬಾಳುವಂತಾಗಬೇಕು ಎಂದರು.

    ಉಮಾ ಚನ್ನಪ್ಪನವರ ಪ್ರಾರ್ಥಿಸಿದರು. ನಾಗವೇಣಿ ಕಟ್ಟಿಮನಿ ಸ್ವಾಗತಿಸಿದರು. ಚನ್ನಯ್ಯ ಬೊಮ್ಮನಳ್ಳಿ ನಿರೂಪಿಸಿದರು. ಚನ್ನವೀರಪ್ಪ ಚನ್ನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಸ ಬಬಲಾದಿ ವಂದಿಸಿದರು.

    ಕಾರ್ಯಕ್ರಮದಲ್ಲಿ ಲಲಿತಾಬಾಯಿ ಮೇರವಾಡೆ, ಶ್ರೀಧರ ಉಡುಪಿ, ಪ್ರಲ್ಹಾದರಾಜ ಕಾರ್ಕಳ, ರಾಜೇಶ ಖಟವಟೆ, ಲುಕ್ಕಣಸಾ ರಾಜೋಳಿ, ಶೈಲೇಶ ಬಾಗಮಾರ, ಶಿವಾಚಾರ್ಯ ಹೊಸಳ್ಳಿಮಠ, ಉಮೇಶ ನಾಲವಾಡ, ಸಂಜಯ ಬಾಗಮಾರ, ಅಶ್ವಿನಿ ಜಗತಾಪ, ನಾಗೇಶರಾವ್, ಗುರುಸಿದ್ದಪ್ಪ ಕೊಣ್ಣೂರ, ರಾಘವೇಂದ್ರ ಹಬೀಬ, ಮಹಾಂತೇಶ ಮಡಿವಾಳರ, ಶರಣಪ್ಪ ಫೀರಂಗಿ, ಗಣೇಶ ಕಡ್ಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts