More

    ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕೊಡಿಸಿ


    ಯಾದಗಿರಿ: ತಾಯಂದಿರು ಮಕ್ಕಳಿಗೆ ಧಾಮರ್ಿಕ ಸಂಸ್ಕಾರದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ ಎಂದು ಪಂ.ನರಸಿಂಹಾಚಾರ್ ಪುರಾಣಿಕ ಸಲಹೆ ಸಲಹೆ ನೀಡಿದರು.
    ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಮಕ್ಕಳ ಬೇಸಿಗೆ ಧಾಮರ್ಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶಿರ್ವಚನ ನೀಡಿ, ಮಕ್ಕಳಿಗೆ ಇಂದು ಸಾಮಾಜಿಕ ಹಾಗೂ ಸಾಂಪ್ರಾದಾಯಿಕ ಶಿಕ್ಷಣದ ಜತೆಗೆ ಧಾಮರ್ಿಕ ಸಂಸ್ಕಾರದ ಬಗ್ಗೆ ಅರಿವು ನೀಡುವುದು ಹೆಚ್ಚು ಅಗತ್ಯವಿದೆ. ಆ ಕೆಲಸ ಬೇರಾರಿಂದಲೂ ಸಾಧ್ಯವಿಲ್ಲ. ತಾಯಂದಿರಿಂದ ಮಾತ್ರ ಅದು ಸಾಧ್ಯ. ಮಕ್ಕಳಿಗೆ ಉತ್ತಮ ಧಾಮರ್ಿಕ ಸಂಸ್ಕಾರದ ಬಗ್ಗೆ ಅರಿವು ಮೂಡಿಸಿದರೆ ದೇಶದ ಪ್ರಗತಿಯೂ ಸಾಧ್ಯ ಎಂದರು.
    ದಾಸ ಸಂಸ್ಕೃತಿಯ ಸಂಸ್ಕಾರ ಮಕ್ಕಳಿಗೆ ಇಂದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಭಕ್ತಿಗೀತೆಗಳು ನಮ್ಮ ವ್ಯಕ್ತಿತ್ವದ ವಿಕಾಸವನ್ನು ಮಾಡಬಲ್ಲವು. ದೇವರ ನಾಮಸ್ಮರಣೆಯ ಸಂದೇಶಗಳು ನಮ್ಮ ಜೀವನದ ಅವಿಭಾಜ್ಯ ಅಂಶಗಳಾಗಿವೆ ಎಂದು ಹೇಳಿದರು.
    ಉತ್ತರಾದಿ ಮಠಾಶ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಆದೇಶದಂತೆ ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಒಂದು ವಾರ ಮಕ್ಕಳಿಗೆ ಧಾಮರ್ಿಕ ಶಿಬಿರ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಬಾಲಕರಿಗೆ ಸಂಧ್ಯಾವಂದನೆ, ದೇವತಾ ಸ್ತೋತ್ರ, ಭಗವದ್ಗೀತಾ ಶ್ರವಣ, ಬಾಲಕೀಯರಿಗೆ ಹರಿನಾಮ ಸ್ಮರಣೆ, ಹರಿಕಥಾಮೃತಸಾರ, ಸುಳಾಗಳನ್ನು ಕಲಿಸಿಕೊಡಲಾಗಿದೆ ಎಂದು ಹೇಳಿದರು.

    ಇದೇ ವೇಳೆ ಸುಮಾರು 70ಕ್ಕೂ ಹೆಚ್ಚು ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು ಪಂ.ರಾಘವೇಂದ್ರಾಚಾರ ಬಳಿಚಕ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts