More

    ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ; ನಾಯಕನಹಟ್ಟಿ ಮುಖ್ಯ ಶಿಕ್ಷಕರ ಸಭೆಯಲ್ಲಿ ಬಿಇಒ ಸೂಚನೆ

    ನಾಯಕನಹಟ್ಟಿ: ಪ್ರಾಥಮಿಕ ಶಾಲೆ ಮಕ್ಕಳ ಆರೋಗ್ಯಕ್ಕಾಗಿ ಈ ತಿಂಗಳಿನಿಂದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸಲು ಸರ್ಕಾರ ಆದೇಶಿಸಿದೆ. ಈ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

    ಪಟ್ಟಣದ ವಿದ್ಯಾವಿಕಾಸ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಯಕನಹಟ್ಟಿ ಹೋಬಳಿ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ಸರ್ಕಾರದ ಸುತ್ತೋಲೆ ಪ್ರಕಾರವೇ ಇದಕ್ಕೆ ಕಾರ್ಯೋನ್ಮುಖರಾಗಬೇಕಿದೆ. ಪಾಲಕರು, ಎಸ್‌ಡಿಎಂಸಿ ಸಭೆ ಕರೆದು ತೀರ್ಮಾನಿಸಬೇಕು ಎಂದು ಹೇಳಿದರು.

    ಖರೀದಿ ಸಮಿತಿ ರಚಿಸಬೇಕು. ಸಮಿತಿಯ ಅಭಿಪ್ರಾಯದಂತೆ ಮಕ್ಕಳು ಯಾವುದನ್ನು ಇಚ್ಛಿಸುತ್ತಾರೋ ಅದನ್ನೇ ನೀಡಬೇಕು. ಯಾವುದೇ ಕಾರಣಕ್ಕೂ ಬಲವಂತ ಮಾಡಬಾರದು. ಮಕ್ಕಳ ದೈಹಿಕ ಆರೋಗ್ಯಕ್ಕೆ ಅಮತೋಲಿತ ಆಹಾರ ನೀಡುದರಿಂದ ಮಕ್ಕಳು ಸದೃಢರಾಗುತ್ತಾರೆ. ಅವರಲ್ಲಿನ ಉತ್ತಮ ಆರೋಗ್ಯ, ಕಲಿಕೆಗೆ ಪ್ರೋತ್ಸಾಹ, ಪ್ರೇರಣೆಯಾಗುತ್ತದೆ ಎಂದರು.

    ಪ್ರತಿ ದಿನ ಹಾರಿಸಿ ರಾಷ್ಟ್ರಧ್ವಜ:
    ಕೇಂದ್ರ ಸರ್ಕಾರವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹರ್‌ಘರ್ ತಿರಂಗ ಕಾರ್ಯಕ್ರಮ ಜಾರಿಗೊಳಿಸಿದೆ. ಅಂತೆಯೇ ಶಾಲೆಯಲ್ಲಿ ಪಾಲಕರ ಸಭೆ ಕರೆದು ಇದರ ಮಹತ್ವ ತಿಳಿಸಿರಿ. ಆ.11ರಿಂದ 17ರವರೆಗೆ ಪ್ರತಿ ದಿನ ರಾಷ್ಟ್ರಧ್ವಜ ಹಾರಿಸಬೇಕು. ಇದರಲ್ಲಿ ಯಾವುದೇ ಲೋಪವಾಗಬಾರದು ಎಂದು ಎಚ್ಚರಿಸಿದರು.
    ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸಲು 2022-23ರಲ್ಲಿ 46 ದಿನಗಳನ್ನು ನಿಗದಿ ಮಾಡಿ ಇಲಾಖೆ ಆದೇಶಿಸಿದೆ. ಪ್ರತಿ ಮಗುವಿಗೆ ಒಂದು ದಿನಕ್ಕೆ ಆರು ರೂಪಾಯಿಗಳನ್ನು ಖರ್ಚು ಭರಿಸಲು ತಿಳಿಸಿದೆ.
    – ತಿಪ್ಪೇಸ್ವಾಮಿ, ಪೋಷಣ ಶಕ್ತಿ ನಿರ್ಮಾಣ ಯೋಜನೆ ಸಹಾಯಕ ನಿರ್ದೇಶಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts