More

    ಮಕ್ಕಳಲ್ಲಿ ಶಿವಾಜಿ ತತ್ತಾವದರ್ಶ ಅಳವಡಿಸಿ

    ನಿಪ್ಪಾಣಿ: ಬಾಲ ಶಿವಾಜಿಗೆ ಸಂಸತಿ, ಸಂಸ್ಕಾರ ನೀಡುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರನ್ನಾಗಿ ಮಾಡಿದ ಅವರ ತಾಯಿಯ ಆದರ್ಶಗಳನ್ನು ಎಲ್ಲ ತಾಯಂದಿರು ಅಳವಡಿಸಿಕೊಳ್ಳಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಕಿವಿಮಾತು ಹೇಳಿದರು.

    ಸ್ಥಳಿಯ ಬಸವಜ್ಯೋತಿ ಗಾರ್ಮೆಂಟ್ಸ್​ನಲ್ಲಿ ಮಹಿಳಾ ಮೋರ್ಚಾದಿಂದ ದತ್ತು ಪಡೆದ ನಗರದ ಎರಡು ಅಂಗನವಾಡಿಗಳ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿ, ೇತ್ರದಲ್ಲಿ 50ಕ್ಕೂ ಅಧಿಕ ಅಂಗನವಾಡಿಗಳಿಗೆ ಹೊಸ ಕಟ್ಟಡಗಳನ್ನು ಕಲ್ಪಿಸಲಾಗಿದೆ. ಬಿಜೆಪಿ ಮಹಿಳಾ ಮೋರ್ಚಾ ದೇಶದಲ್ಲಿ ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆದು ಸರ್ಕಾರದ ಅನುದಾನ ಜತೆಗೆ ಅಗತ್ಯ ಬಿದ್ದಲ್ಲಿ ತಾವೇ ಅನುದಾನ ಹಾಕಿ ಅವುಗಳನ್ನು ಪೋಷಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

    ಮಹಿಳಾ ಮೋರ್ಚಾ ನಗರ ಟಕದ ಅಧ್ಯೆ ವಿಭಾವರಿ ಖಾಂಡಕೆ ಮಾತನಾಡಿ, ಬಿಜೆಪಿ ಮಹಿಳಾ ಮೋರ್ಚಾದಿಂದ ರಾಜ್ಯದ 224 ೇತ್ರಗಳಲ್ಲಿ ತಲಾ ಎರಡು ಅಂಗನವಾಡಿಯಂತೆ 448 ಅಂಗನವಾಡಿಗಳನ್ನು ದತ್ತು ಪಡೆದು ಸರ್ಕಾರದೊಂದಿಗೆ ಕೈಜೋಡಿಸಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು. ಅಂಗನವಾಡಿಯ 120 ಮಕ್ಕಳಿಗೆ ಸಚಿವೆ ಜೊಲ್ಲೆ ಪೌಷ್ಟಿಕ ಆಹಾರ ವಿತರಿಸಿದರು. ಸಿಡಿಪಿಒ ಸುಮಿತ್ರಾ ಡಿ.ಬಿ., ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್​ ರಾಜೇಂದ್ರ ಗುಂಡೇಶಾ, ಸದಸ್ಯೆ ಅರುಣಾ ಮುದುಕುಡೆ, ಆಶಾ ಟವಳೆ, ದೀಪಾಲಿ ಗಿರಿ, ಕಾವೇರಿ ಮಿರ್ಜೆ, ಸೋನಾಲಿ ಉಪಾಧ್ಯೆ, ಬಿಜೆಪಿ ನಗರ ಟಕದ ಅಧ್ಯಕ್ಷ ಪ್ರಣವ ಮಾನವಿ, ಕಲ್ಪನಾ ಬೋಂಗಾಳೆ, ಸುಜಾತಾ ಹೋಗಲೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts