More

    ಮಂಡುವಂಡ ತಂಡಕ್ಕೆ 56 ರನ್‌ಗಳ ಜಯ

    ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಶನಿವಾರದ ಪಂದ್ಯಗಳಲ್ಲಿ ಮಾಳೇಟಿರ, ಮಾಳೆಯಂಡ, ಪಟ್ರಪಂಡ, ಬಳ್ಳಚಂಡ, ಚೋನಿರ ಸೇರಿದಂತೆ ಹಲವು ತಂಡಗಳು ಮುನ್ನಡೆ ಸಾಧಿಸಿದವು.


    ಮೈದಾನ ಒಂದರಲ್ಲಿ ಮಾಳೇಟಿರ ವಿರುದ್ಧ ನಂದೇಟಿರ ತಂಡವು 7 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿತು, ಮಾಳೇಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ 31ರನ್ ಗಳಿಸಿ 9 ವಿಕೆಟ್‌ಗಳ ಗೆಲುವು ಸಾಧಿಸಿತು. ಮಾಳೆಯಂಡ ಮತ್ತು ತಾತಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ಮುಂದಿನ ಸೂಪರ್ ಓವರ್ ಮ್ಯಾಚ್ ನಲ್ಲಿ ತಾತಪಂಡ ತಂಡ 4 ರನ್ ಗಳಿಸಿದರೆ ಮಾಳೆಯಂಡ ಐದು ರನ್ ಗಳಿಸಿ 10 ವಿಕೆಟ್‌ಗಳ ಜಯ ಸಾಧಿಸಿತು.


    ಮುಂದಿನ ಪಂದ್ಯದಲ್ಲಿ ಪಟ್ರಪಂಡ ತಂಡ ಮುಕ್ಕಾಟಿರ ತಂಡದ ವಿರುದ್ಧ ಎರಡು ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿತು. ಮುಕ್ಕಾಟಿರ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿ ಸೋಲನ್ನು ಅನುಭವಿಸಿತು. ಈ ಪಂದ್ಯದಲ್ಲಿ ಪಟ್ರಪಂಡ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಮುಕ್ಕಾಟಿರ (ಮಾದಾಪುರ )ತಂಡವು ಬಲ್ಲಚಂಡ ವಿರುದ್ಧ ನಾಲ್ಕು ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿತು.ಉತ್ತರವಾಗಿ ಆಡಿದ ಬಲ್ಲಚಂಡ ತಂಡ ಮೂರು ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿ ಗೆಲುವು ಸಾಧಿಸಿತು.


    ಪಳಂಗಂಡ ತಂಡವು ಮೂರು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿತು. ಉತ್ತರವಾಗಿ ಆಡಿದ ಚೋನಿರ ತಂಡ ಎರಡು ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿ ಗೆಲುವು ಸಾಧಿಸಿತು. ಮೈದಾನ ಎರಡರಲ್ಲಿ ಕೋಣಿಯಂಡ ತಂಡವು ಪಾರುವಂಗಡ ತಂಡದ ವಿರುದ್ಧ ಮೂರು ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತು. ಪಾರುವಂಗಡ ನಾಲ್ಕು ವಿಕೆಟ್ ನಷ್ಟಕ್ಕೆ ಕೇವಲ 39 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಕೋಣಿಯಂಡ 42 ರನ್‌ಗಳ ಜಯ ಸಾಧಿಸಿತು.


    ಮುಂದಿನ ಪಂದ್ಯದಲ್ಲಿ ಮಂಡುವಂಡ ತಂಡ ಮಡ್ಲಂಡ ವಿರುದ್ಧ ಎರಡು ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು. ಮಡ್ಲಂಡ ಮೂರು ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿ ಸೋಲು ಅನುಭವಿಸಿತು. ಮಂಡುವಂಡ ತಂಡ 56 ರನ್‌ಗಳ ಜಯ ಸಾಧಿಸಿತು. ಮುಕ್ಕಾಟಿರ ವಿರುದ್ಧ ಚಿರಿಯಪಂಡ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತು. ಉತ್ತರವಾಗಿ ಆಡಿದ ಮುಕ್ಕಾಟಿರ ತಂಡ ಒಂದು ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿ ಜಯ ಸಾಧಿಸಿತು.


    ಮಾಳೆಟ್ಟಿರ ತಂಡದ ವಿರುದ್ಧ ಅಮ್ಮಾಟಂಡ ತಂಡವು ಸ್ಪರ್ಧಿಸಿತು. ಅಮ್ಮಾಟಂಡ ನಾಲ್ಕು ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದರೆ ಮಾಳೇಟಿರ 5 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿ ಸೋಲನ್ನು ಅನುಭವಿಸಿತು. ಪಾರುವಂಡ ಮತ್ತು ಮೂಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂಕಂಡ ನಾಲ್ಕು ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿತು. ಪಾರುವಂಡಯಾವುದೇ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿ ಗೆಲುವು ಸಾಧಿಸಿತು. ಮುಂದಿನ ಪಂದ್ಯದಲ್ಲಿ ಮುಂಡ ಚಾಡಿರ ಐದು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿತು. ಮಲ್ಲೇಂಗಡ ಕೇವಲ 28 ರನ್ ಗಳಿಸಿ ಸೋಲನ್ನು ಅನುಭವಿಸಿತು. ಪಟ್ಟಡ ವಿರುದ್ದ ಕರಿನೆರವಂಡ 5 ವಿಕೆಟ್ ನಷ್ಟಕ್ಕೆ 40 ರನ್‌ಗಳಿಸಿತು. ಉತ್ತರವಾಗಿ ಆಡಿದ ಪಟ್ಟಡ ತಂಡ ಐದು ವಿಕೆಟ್ ನಷ್ಟಕ್ಕೆ ಕೇವಲ 27 ರನ್ ಗಳಿಸಿತು. ಕರಿನೆರವಂಡ ತಂಡ ತಂಡಕ್ಕೆ 13 ರನ್‌ಗಳ ಜಯ ಲಭಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts