More

    ಮಂಗಗಳ ಹಸಿವು ನೀಗಿಸುತ್ತಿರುವ ಅರ್ಚಕ

    ಸಂಶಿ: ಕರೊನಾ ವೈರಸ್ ಮನುಷ್ಯರ ಬದುಕನ್ನಷ್ಟೇ ಕಸಿದುಕೊಂಡಿಲ್ಲ. ಪ್ರಾಣಿಗಳ ಮೂಕ ರೋದನೆಗೂ ಸಾಕ್ಷಿಯಾಗಿದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಇಲ್ಲಿಯ ಪ್ರಾಣಿಪ್ರಿಯರೊಬ್ಬರು ಮಂಗಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

    ಮನೆ ಮತ್ತು ಹೋಟೆಲ್​ಗಳಿಂದ ಬಿಸಾಕುತ್ತಿದ್ದ ಆಹಾರ ಆಯ್ದಕೊಂಡು ತಿನ್ನುತ್ತಿದ್ದ ಮಂಗಗಳಿಗೆ ಈಗ ಆಹಾರದ ಬರ ಉಂಟಾಗಿದೆ. ಆಹಾರ- ನೀರು ಇಲ್ಲದೇ ಬಿಸಿಲಿನ ತಾಪದಲ್ಲಿ ನೂರಾರು ಮಂಗಗಳು ಬಸವಳಿದಿವೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ಅರ್ಚಕ ಬಸಯ್ಯ ಹಿರೇಮಠ ಅವರು ನಿತ್ಯವೂ ಬಾಳೆಹಣ್ಣು, ಉತ್ತತ್ತಿ, ಬಿಸ್ಕತ್, ಬನ್, ತರಕಾರಿ ಮತ್ತು ರೊಟ್ಟಿಯನ್ನು ನೀಡುವ ಮೂಲಕ ಮಂಗಗಳ ಹಸಿವು ನೀಗಿಸುತ್ತಿದ್ದಾರೆ.

    ನಿತ್ಯವೂ ಮಂಗಗಳು ಆಹಾರ ಅರಸಿ ಶಂಕರಲಿಂಗೇಶ್ವರ ದೇವಸ್ಥಾನದ ಬಳಿ ಬರುತ್ತವೆ. ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಭಾವನಾತ್ಮಕ ಎಂಬುದಕ್ಕೆ ಇದು ನಿದರ್ಶನವಾಗಿದೆ. ಲಾಕ್​ಡೌನ್ ಆರಂಭವಾದಾಗಿನಿಂದಲೂ ಈ ಕೆಲಸವನ್ನು ಬಸಯ್ಯ ಅವರು ಮಾಡುತ್ತಿದ್ದಾರೆ.

    ಮಂಗಗಳು ಹಸಿವಿನಿಂದ ಕಂಗೆಟ್ಟು ಮರಿಗಳೊಂದಿಗೆ ಓಡಿ ಬರುವ ದೃಶ್ಯ ಮನಕಲಕುತ್ತದೆ. ಆಹಾರ ನೀಡಿದ ತಕ್ಷಣವೇ ದೂರ ಹೋಗಿ ಕುಳಿತು ತಿನ್ನುತ್ತವೆ. ಮನುಷ್ಯರಾದರೆ ಬಾಯಿಬಿಟ್ಟು ಕೇಳಿ ಆಹಾರ ಮತ್ತು ನೀರನ್ನು ಪಡೆಯುತ್ತಾರೆ. ಆದರೆ, ಮೂಕ ಪ್ರಾಣಿ ಹೇಗೆ ಹಸಿವು ಹೇಳಿಕೊಳ್ಳಲು ಸಾಧ್ಯ. ಇದನ್ನರಿತು ಸ್ವಪ್ರೇರಣೆಯಿಂದ ಮಂಗಗಳಿಗೆ ಆಹಾರ ನೀಡುವ ಕೆಲಸಕ್ಕೆ ಮುಂದಾಗಿದ್ದೇನೆ ಎನ್ನುತ್ತಾರೆ ಬಸಯ್ಯ.

    ದೇವಸ್ಥಾನಕ್ಕೆ ಹೋಗಿ ಕಲ್ಲಿನ ಮೂರ್ತಿಗೆ ಎಣ್ಣೆ, ಸಕ್ಕರೆ ಹಾಕಿ ಕೈ ಮುಗಿಯುತ್ತೇನೆ. ಆದರೆ, ಲಾಕ್​ಡೌನ್ ಆರಂಭವಾದಾಗಿನಿಂದ ನಿಜವಾದ ಆಂಜನೇಯ ಸ್ವರೂಪಿ ಮಂಗಗಳು ನೀರು ಮತ್ತು ಆಹಾರಕ್ಕಾಗಿ ಪರಿತಪಿಸುತ್ತಿವೆ. ಹಾಗಾಗಿ ನನ್ನ ಕೈಲಾದ ಮಟ್ಟಿಗೆ ಅವುಗಳಿಗೆ ಆಹಾರ ನೀಡುತ್ತಿದ್ದೇನೆ.
    | ಬಸಯ್ಯ ಹಿರೇಮಠ ಅರ್ಚಕ, ಸಂಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts