More

    ಭ್ರಷ್ಟಾಚಾರ ಆರೋಪ ಪ್ರಕರಣಗಳ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

    ಚಿತ್ರದುರ್ಗ: ಕಾರ್ಮಿಕ ಇಲಾಖೆಯ ಫಲಾನುಭವಿ ಕಾರ್ಡ್ ನವೀಕರಣಕ್ಕೆ ವೇತನ ಚೀಟಿ,ಹಾಜರಾತಿ ಪಟ್ಟಿ ಕಡ್ಡಾಯದ ಆದೇಶ ಹಿಪಡೆಯುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿ ಸದ ಸ್ಯರು ಹಾಗೂ ಸಿಐಟಿಯು ಕಾರ‌್ಯಕರ್ತರು ನಗರದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಪ್ರತಿಭಟಿಸಿದರು.
    ಹಿಂದಿನ ಕಾರ್ಮಿಕ ಸಚಿವ ಶಿವರಾಂಹೆಬ್ಬಾರ್ ಅವರ ಅವಧಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇದ್ದ 12 ಸಾವಿರ ಕೋಟಿ ರೂ.ಮೊತ್ತವೀಗ ಈಗ 6 ಸಾವಿರ ಕೋಟಿ ರೂ.ಗೆ ಕುಸಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು,ಭ್ರಷ್ಟಾಚಾರ ಆ ರೋಪಗಳ ತನಿಖೆಯೂ ಗ್ಯಾರೆಂಟಿ ಎಂದು ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
    ನಕಲಿಕಾರ್ಡ್‌ಗಳ ನಿಯಂತ್ರಣ,ಪಿಂಚಣಿ ಸಮಸ್ಯೆಗಳ ನಿವಾರಣೆ ಸಹಿತ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಸಿಐಟಿಯು ರಾಜ್ಯಉಪಾಧ್ಯಕ್ಷ ಸಿ.ಕೆ.ಗೌಸ್‌ಪೀರ್,ಕಟ್ಟಡ ಕಾರ್ಮಿಕರ ಸಮಿತಿ ಜಿಲ್ಲಾಧ್ಯಕ್ಷ ಬಿ.ಸಿ.ನಾಗರಾಜಚಾರಿ,ಸಣ್ಣಮ್ಮ,ಮಹಮದ್‌ಜಿಕ್ರಿಯಾ ವುಲ್ಲಾ,ಉಮೇಶ್,ಭಾಸ್ಕರಾಚಾರಿ,ಕಲೀಲ್‌ಉಲ್ಲಾ,ಕಂಪಳಪ್ಪ,ಧರ್ಮಣ್ಣ, ಅ ಬ್ದುಲ್ಲ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.
    (ಸಿಟಿಡಿ 24 ಸ್ಟ್ರೈಕ್)
    ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಸಿಐಟಿಯು ಕಾರ‌್ಯಕರ್ತರು ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟಿಸಿದರು. ಸಿ.ಕೆ.ಗೌಸ್‌ಪೀರ್,ಬಿ.ಸಿ.ನಾಗರಾಜಚಾರಿ,ಸಣ್ಣಮ್ಮ, ಮಹಮದ್ ಜಿಕ್ರಿಯಾವುಲ್ಲಾ,ಉಮೇಶ್,ಭಾಸ್ಕರಾಚಾರಿ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts