More

    ಭೂಸ್ವಾಧೀನಕ್ಕೆ ಸಿಗದ ಪರಿಹಾರ

    ರಾಣೆಬೆನ್ನೂರ: ‘ಅಧಿಕಾರಿಗಳು, ಜನಪ್ರತಿನಿಧಿಗಳು ಕೊಟ್ಟ ಮಾತನ್ನು ತಪ್ಪಿದ್ದಾರೆ’ ಎಂದು ಆರೋಪಿಸಿ ಇಲ್ಲಿಯ ಯುಟಿಪಿ ಕಚೇರಿ ಎದುರು ಹಿರೇಕೆರೂರ ಹಾಗೂ ರಾಣೆಬೆನ್ನೂರ ತಾಲೂಕಿನ ವಿವಿಧ ಗ್ರಾಮಸ್ಥರು ಮಂಗಳವಾರದಿಂದ ಮತ್ತೇ ಧರಣಿ ಆರಂಭಿಸಿದ್ದಾರೆ.

    ಯುಟಿಪಿ ಭೂ ಸ್ವಾಧೀನಾಧಿಕಾರಿ ಕಾರ್ಯಾಲಯ, ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಗೆ ಬೀಗ ಜಡಿದು ಪರಿಹಾರದ ಚೆಕ್ ನೀಡುವವರೆಗೂ ಕಚೇರಿ ಕೆಲಸಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಪಟ್ಟುಹಿಡಿದರು.

    ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆ ನಿರ್ವಣಕ್ಕೆ ಭೂ ಸ್ವಾಧೀನಪಡಿಸಿಕೊಂಡ ಜಮೀ ನುಗಳ ರೈತರಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಧರಣಿ ನಡೆಸಿದ್ದರು. 15 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಅಧಿಕಾರಿಗಳು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಕೃಷಿ ಸಚಿವ, ನೀರಾವರಿ ಇಲಾಖೆ ಧಾರವಾಡ ಸಿಇಒ, ಹಾವೇರಿ ಜಿಲ್ಲಾಧಿಕಾರಿ ಹಾಗೂ ಯುಟಿಪಿ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು.

    ಪ್ರತಿಭಟನೆ ನೇತೃತ್ವದ ವಹಿಸಿದ್ದ ವಕೀಲ ಎಸ್.ಡಿ. ಹಿರೇಮಠ ಮಾತನಾಡಿ, ಕಳೆದ ಜನೆವರಿಯಲ್ಲಿ ವಾರಗಳ ಕಾಲ ಧರಣಿ ನಡೆಸಿದಾಗ ಸ್ಥಳಕ್ಕೆ ಭೇಟಿ ನೀಡಿದ ನೀರಾವರಿ ಇಲಾಖೆ ಧಾರವಾಡ ಸಿಇಒ ಶಶಿಧರ ಬಗಲಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ‘ರೈತರಿಗೆ ಪರಿಹಾರ ನೀಡುವ ವಿಚಾರವಾಗಿ 850ಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ಅದಕ್ಕಾಗಿ 52 ಕೋಟಿ ರೂ. ಬಿಡುಗಡೆ ಮಾಡಲಾಗುವುದು. 36 ರೈತರ ಪ್ರಕರಣಕ್ಕೆ ಸಂಬಂಧಿಸಿ 3.62 ಕೋಟಿ ರೂ.ಗಳನ್ನು ಹದಿನೈದು ದಿನದೊಳಗೆ ಬಿಡುಗಡೆ ಮಾಡಲಾಗುವುದು. ಧರಣಿ ಕೈಬಿಡಿ’ ಎಂದು ಮನವಿ ಮಾಡಿಕೊಂಡಿದ್ದರು. ಇದರಿಂದಾಗಿ ಧರಣಿ ಹಿಂತೆಗೆದುಕೊಂಡಿದ್ದೆವು. ಆದರೆ, ಈಗ ಪರಿಹಾರ ಕೇಳಲು ಹೋದರೆ, ಇಲಾಖೆ ಖಾತೆಯಲ್ಲಿ ಹಣವಿಲ್ಲ ಎಂಬ ಸಬೂಬು ನೀಡುತ್ತಿದ್ದಾರೆ. ಆದ್ದರಿಂದ ಪರಿಹಾರದ ಚೆಕ್ ನೀಡುವವರೆಗೂ ಧರಣಿ ಹಿಂತೆಗೆದುಕೊಳ್ಳುವುದಿಲ್ಲ. ಅಗತ್ಯ ಬಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

    ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಪ್ರಭುಗೌಡ ಸೊರಟೂರ, ಶರಣಪ್ಪ ಕಾಗೇರ, ಬಸಪ್ಪ ಮಾಳಗಿ, ಬೋಜರಾಜ ಆರೇರ, ನಾಂಗಪ್ಪ ವೆಂಕಣ್ಣನವರ, ಕರಬಸಪ್ಪ ಬನ್ನಿಕೋಡ, ನಿಂಗನಗೌಡ ಸೊರಟೂರ, ಕರೇಗೌಡ ಮತ್ತೂರ, ತುಕಾರಾಮ ನವಲೆ, ಕರಿಯಪ್ಪ ಸೂರಣಗಿ, ಯಲ್ಲಪ್ಪ ಕೋಡಿಹಳ್ಳಿ ಹಾಗೂ ಹಿರೇಕೆರೂರ ತಾಲೂಕಿನ ಶಿರಗಂಬಿ, ಮೇದೂರ ಸೇರಿ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts