More

    ಭೂಮಾಪನ ಕಚೇರಿಗಿಲ್ಲ ಸ್ವಂತ ಸೂರು

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ
    ಕಳೆದ 58 ವರ್ಷಗಳಿಂದಲೂ ಪಟ್ಟಣದಲ್ಲಿ ನಗರ ಭೂಮಾಪನ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಈ ಕಚೇರಿಗೆ ಸ್ವಂತ ಕಟ್ಟಡ ಭಾಗ್ಯ ಲಭಿಸದ್ದರಿಂದ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸಲಾಗುತ್ತಿದೆ. 1964 ರಲ್ಲಿಯೇ ಪಟ್ಟಣದ ಹಿರಿಯರಾದ ಮುರಿಗೆಪ್ಪ ಮೆಕ್ಕಿ, ಪಂಚಪ್ಪ ಮಾನ್ವಿ, ಮುರಿಗೆಪ್ಪ ಕೊಟಗಿ ಮುಂತಾದವರ ಇಚ್ಛಾಶಕ್ತಿಯಿಂದ ನಗರ ಭೂಮಾಪನ ಕಚೇರಿ ಪಟ್ಟಣದಲ್ಲಿ ಕಾರ್ಯಾರಂಭ ಗೊಂಡಿತ್ತು. ಆದರೆ, ಈವರೆಗೂ ಈ ಕಚೇರಿಗೆ ಸ್ವಂತ ಕಟ್ಟಡದ ಭಾಗ್ಯ ಸಿಕ್ಕಿಲ್ಲ. ಪಟ್ಟಣದ ಅಲ್ಲಲ್ಲಿ ಬಾಡಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಾ ಸಾಗಿದೆ.
    ಪಟ್ಟಣದ ಬಸ್ತಿಬಣ, ದೇಸಾಯಿಬಣ, ಹಿರೇಬಣ, ಪೇಠಬಣ ಮತ್ತು ಹುಲಗೇರಿ ಬಣ ಹೀಗೆ 5 ಬಣಗಳಲ್ಲಿ 5646 ಅಧಿಕೃತ ಆಸ್ತಿಗಳು ಭೂಮಾಪನ ಕಚೇರಿ ವ್ಯಾಪ್ತಿಗೆ ಒಳಪಡುತ್ತವೆ. ಕಳೆದ 20 ವರ್ಷಗಳಿಂದ ಹಳೇ ಬಸ್ ನಿಲ್ದಾಣದ ಹತ್ತಿರದ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಯುತ್ತಿದೆ.
    ಈ ಕಚೇರಿಗೆ 1964 ರಲ್ಲಿಯೇ ಪಂಪ ವೃತ್ತದ ಸರ್ಕಾರಿ ಸಹಾಯಕ ಅಭಿಯೋಜಕರ ನಿವಾಸಕ್ಕೆ ಹೊಂದಿಕೊಂಡಂತೆ ಸುಮಾರು 8 ಗುಂಟೆ ನಿವೇಶನವನ್ನು ಕಾಯ್ದಿರಿಸಲಾಗಿದೆ. ಕೋಟಿಗಟ್ಟಲೇ ಬೆಲೆ ಬಾಳುವ ಜಾಗವಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯಂದ ಭೂಮಾಪನ ಕಚೇರಿಗೆ ಸ್ವಂತ ಕಟ್ಟಡದ ಕನಸು ಈವರೆಗೂ ನನಸಾಗಿಲ್ಲ.
    ಸದ್ಯ ಕಾರ್ಯನಿರ್ವಹಿಸುತ್ತಿರುವ ಕಟ್ಟಡವು ಅತ್ಯಂತ ಕಿರಿದಾಗಿದ್ದು, ಮೇಲಂತಸ್ತಿನಲ್ಲಿದೆ. ಇದರಿಂದ ವಯೋವೃದ್ಧರು, ಅಂಗವಿಕಲರು ಕಚೇರಿಗೆ ಬರದಂತಾಗಿದೆ. ಅಲ್ಲದೆ, ಇರುವ ಸಾವಿರ ಸಂಖ್ಯೆಯ ದಾಖಲೆಗಳನ್ನು ಅಚ್ಚುಕಟ್ಟಾಗಿಡಲು ಸ್ಥಳಾವಕಾಶ ಇಲ್ಲದ್ದರಿಂದ ಸಿಬ್ಬಂದಿ ಹೆಣಗಾಡಬೇಕಾಗಿದೆ. ಈ ಕಟ್ಟಡದಲ್ಲಿ ಯಾವುದೇ ಮೂಲಭೂತ ಇಲ್ಲದ್ದರಿಂದ ಬರುವ ಜನರು ಮತ್ತು ಸಿಬ್ಬಂದಿ ಪರದಾಡುವ ಸ್ಥಿತಿಯಿದೆ.

    ಲಕ್ಷ್ಮೇಶ್ವರದ ಕಾರ್ಯಾಲಯದಿಂದ ಲಭ್ಯವಿರುವ 8 ಗುಂಟೆ ನಿವೇಶನದಲ್ಲಿ ಕಚೇರಿ ಕಟ್ಟಡ ಮತ್ತು ಸಿಬ್ಬಂದಿ ವಸತಿ ಗೃಹ ನಿಮಿಸಲು ಜಿಲ್ಲಾಧಿಕಾರಿ, ಜಿಲ್ಲಾ ಉಪ ನಿರ್ದೇಶಕರು, ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಕಚೇರಿ ನಿರ್ವಣಕ್ಕೆ 50 ಲಕ್ಷ ರೂ.ಗಳ ಅಂದಾಜು ಯೋಜನಾ ವರದಿ ತಯಾರಿಸಿ ಭೂಮಾಪನ ಇಲಾಖೆ ಆಯುಕ್ತರಿಗೆ ಸಲ್ಲಿಸಲಾಗಿದೆ. ಆಗಾಗ್ಗೆ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಆದರೆ, ಯಾವುದೇ ಪ್ರಯೋಜವಾಗಿಲ್ಲ.
    | ಪ್ರತಾಪ್ ಬಾಣದ ನಗರ ಭೂಮಾಪನ ಅಧಿಕಾರಿ

    ತಾಲೂಕು ಕೇಂದ್ರವಾದರೂ ಪಟ್ಟಣದಲ್ಲಿ ಯಾವುದೇ ಇಲಾಖೆ ಕಚೇರಿ ಕಾರ್ಯ ನಿರ್ವಹಿಸುತ್ತಿಲ್ಲ. ತಹಸೀಲ್ದಾರ್ ಕಚೇರಿಯೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಪಟ್ಟಣದ ಹಿರಿಯರ ಹೋರಾಟದ ಫಲವಾಗಿ 58 ವರ್ಷಗಳ ಹಿಂದೆಯೇ ಭೂಮಾಪನ ಕಚೇರಿ ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ. ಅಲ್ಲದೆ, ಅತ್ಯಂತ ಸೂಕ್ತವಾದ ಸ್ಥಳದಲ್ಲಿ 8 ಗುಂಟೆ ನಿವೇಶನವೂ ಇದೆ. ದುರ್ದೈವದ ಸಂಗತಿ ಎಂದರೆ ಕಟ್ಟಡ ನಿರ್ವಣವಾಗಬೇಕಿದ್ದ ಸ್ಥಳದಲ್ಲಿ ಜಾಲಿ ಬೆಳೆದು ಹಂದಿಗಳ ವಾಸಸ್ಥಳವಾಗಿದೆ.
    | ಪ್ರವೀಣ ಬಾಳಿಕಾಯಿ ಪುರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts