More

    ಭೂಪರಿವರ್ತನೆಗೆ ನಿರಾಕ್ಷೇಪಣೆ ಪತ್ರ ನೀಡುವಂತೆ ಆಗ್ರಹ; ರೈತರಿಂದ ಒಂದು ವಾರ ಗಡುವು

    ಸಾಗರ: ಇಲ್ಲಿನ ಚಂದ್ರಮಾವಿನಕೊಪ್ಪಲಿನ ಸರ್ವೇ ನಂ.7ರಿಂದ 13ರ ವರೆಗಿನ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಪರಿವರ್ತನೆ ಮಾಡಲು ನಿರಾಪೇಕ್ಷಣಾಪತ್ರ ನೀಡುವಂತೆ ಒತ್ತಾಯಿಸಿ ರೈತರು ಉಪವಿಭಾಗಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
    ಚಂದ್ರಮಾವಿನಕೊಪ್ಪಲು ಗ್ರಾಮದ ಸರ್ವೇ ನಂ.7ರಿಂದ 13ರವರೆಗಿನ ಜಮೀನಿನಲ್ಲಿ ಅನೇಕ ವರ್ಷಗಳಿಂದ 19 ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. 2018ರಲ್ಲಿ ನಗರಸಭೆಯಲ್ಲಿ ರೈತರ ಪರವಾಗಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅನುಮೋದನೆಗೊಂಡಿದ್ದು ಭೂಪರಿವರ್ತನೆ ಮಾಡಿ ನಿರಾಪೇಕ್ಷಣಾ ಪತ್ರ ಕೊಡಲು ಒಪ್ಪಿಗೆ ಪಡೆಯಲಾಗಿದೆ. ಅಂದಿನಿಂದ ಇಂದಿನವರೆಗೆ ನಾಲ್ಕೂವರೆ ವರ್ಷಗಳಿಂದ ರೈತರು ನಗರಸಭೆಗೆ ಭೂಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದ್ದರೂ ನಿರಾಪೇಕ್ಷಣೆ ಪತ್ರವನ್ನು ನೀಡದೆ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ವರದಾ ನದಿ ದಡದಲ್ಲಿರುವ ಸಣ್ಣಮನೆ ಬಡಾವಣೆ, ಮಂಕೋಡು ಬಡಾವಣೆ, ವಿನೋಬನಗರ ಬಡಾವಣೆ ಸೇರಿದಂತೆ ಬೇರೆ ಬೇರೆ ಕಡೆ ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದವರಿಗೆ ನಿರಾಪೇಕ್ಷಣಾ ಪತ್ರವನ್ನು ನೀಡಲಾಗಿದೆ. ಆದರೆ ನಮಗೆ ಸತಾಯಿಸುತ್ತಿರುವುದರ ಹಿಂದಿನ ಕಾರಣ ನಿಗೂಢವಾಗಿದೆ. ಮುಂದಿನ ಒಂದು ವಾರದಲ್ಲಿ ಭೂಪರಿವರ್ತನೆ ಮಾಡಿಸಲು ನಿರಾಪೇಕ್ಷಣಾಪತ್ರ ನೀಡದೆ ಹೋದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತರು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts