More

    ಭೀಮಾ ನದಿ ನೀರು ಸಂರಕ್ಷಣೆಗೆ ಕ್ರಮ

    ಧೂಳಖೇಡ: ವಿಜಯಪುರ ಜಿಲ್ಲೆಯ ಇಂಡಿ, ಚಡಚಣ ತಾಲೂಕಿನ ಭೀಮಾ ನದಿಯ ದಡದಲ್ಲಿನ ನೀರು ಸಂರಕ್ಷಣೆಯ ಸಲುವಾಗಿ ಭೀಮಾ ನದಿಗೆ ಜೋಡಣೆಯಿರುವ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಪೂರೈಕೆ ಕಡಿತಗೊಳಿಸಿ ಜನ ಜಾನುವಾರುಗಳಿಗೆ ನೀರಿಗಾಗಿ ದಿನಕ್ಕೆ ಎರಡು ತಾಸು ಮಾತ್ರ ವಿದ್ಯುತ್ ಪೂರೈಸಲು ಕಲಂ 144 ಜಾರಿ ಮಾಡಲಾಗಿದೆ ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು.

    ಶಿರನಾಳ ಭೀಮಾ ನದಿ ಬ್ಯಾರೇಜ್‌ಗೆ ಶುಕ್ರವಾರ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ಚಡಚಣ ತಾಲೂಕಿನ ದಸೂರ ಗ್ರಾಮದಿಂದ ಚಿಂಚಪುರ ಬ್ಯಾರೇಜ್‌ವರೆಗೆ ನದಿಯ ದಡದ ನೀರಿನ ಮೇಲೆ ಅವಲಂಬಿತವಾಗಿರುವ ಇಂಡಿ ಮತ್ತು ಚಡಚಣ ತಾಲೂಕಿನ 4 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳು ಹಾಗೂ ಇಂಚಗೇರಿ ಮತ್ತು 41 ಗ್ರಾಮಗಳು ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ಇವೆ. ಈ ಹಿನ್ನಲೆ ಸದ್ಯದ ಪರಿಸ್ಥಿತಿಯಲ್ಲಿ ಮಳೆ ಕಡಿಮೆಯಾಗಿರುವುದರಿಂದ ಭೀಮಾ ನದಿಯಲ್ಲಿ ನೀರಿನ ತೀವ್ರ ಕೊರತೆ ಇರುವ ಕಾರಣ ಈ ಯೋಜನೆಗಳು ಸ್ಥಗಿತಗೊಳ್ಳುವ ಸಂಭವವಿದೆ. ಈ ಯೋಜನೆಗಳು ಮುಂದುವರಿಯಲು ನೀರು ಸಂರಕ್ಷಣೆ ಮಾಡುವುದು ಅಗತ್ಯವಿದೆ ಎಂದರು.

    ಭೀಮಾ ನದಿಯ ಎರಡು ದಡೆಯ ಮೇಲೆ ಇರುವ ರೈತರ ಪಂಪ್‌ಸೆಟ್‌ಗಳು ನಿರಂತರವಾಗಿ ಚಾಲ್ತಿಯಿರುವುದರಿಂದ ನೀರಿನ ಪ್ರಮಾಣ ಕಡಿಮೆಯಾಗಿ ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ಅಭಾಗ ಪರಿಸ್ಥಿತಿ ಉಂಟಾಗುತ್ತದೆ. ಆದರಿಂದ ರೈತರ ವಿದ್ಯುತ್ ಪಂಪ್‌ಸೆಟ್‌ಗಳ ವಿದ್ಯುತ್ ಪೂರೈಕೆ ಕಡಿಮೆ ಮಾಡಲಾಗುವುದು ಎಂದರು.

    ಚಡಚಣ ತಹಸೀಲ್ದಾರ್ ಸಂಜಯ ಇಂಗಳೆ, ತಾಪಂ ಇಒ ಸಂಜಯ ಖಡಗೇಕರ, ಹೆಸ್ಕಾಂ ಎಇಇ ಕುಮಸಗಿ, ಕಂದಾಯ ನಿರೀಕ್ಷಕ ಪಿ.ಜೆ. ಕೊಡಹೊನ್ನ, ಗ್ರಾಮ ಆಡಳಿತ ಅಧಿಕಾರಿ ವಿಠ್ಠಲ ಕೋಳಿ, ಗ್ರಾಪಂ ಪಿಡಿಒ, ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts