More

    ಭಾಷೆ ಬೆಳವಣಿಗೆಗೆ ಶ್ರಮ ಅಗತ್ಯ

    ಅಳ್ನಾವರ: ವ್ಯಕ್ತಿಯ ಜೀವನದ ಸಾಧನೆಗೆ ಅವಶ್ಯವಿರುವ ಇತಿಹಾಸವನ್ನು ಅರಿಯಲು ನಾಡಿನ ಮಾತೃ ಭಾಷೆಯಾಗಿರುವ ಕನ್ನಡ ನುಡಿ ಹಾಗೂ ಸಂಸ್ಕೃತಿ ಬೆಳವಣಿಗೆಗೆ ಸರ್ವಜನಾಂಗ ಶ್ರಮಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಸ್.ಬಿ. ಪಾಟೀಲ ಹೇಳಿದರು.

    ಪಟ್ಟಣದ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

    1970ರ ದಶಕದಲ್ಲಿ ರಾಜಕೀಯ, ಸಾಮಾಜಿಕ ಪಲ್ಲಟಗಳ ಮೂಲಕ ಸಾಹಿತ್ಯದ ಮೇಲೆ ಪರಿಣಾಮ ಉಂಟಾಗಿ ಜನಸಾಮಾನ್ಯರು ಆತ್ಮವಿಶ್ವಾಸದಿಂದ ಮಾತನಾಡುವುದು ಆರಂಭಗೊಂಡಿತು. ನಂತರ ಕಿರು ಸಂಸ್ಕೃತಿಗಳಿಂದ ಸ್ತ್ರೀ ಸಂವೇದನೆಯ ಲಕ್ಷಣ ಒಳಗೊಂಡ ದಲಿತ, ಬಂಡಾಯ ಸಾಹಿತ್ಯ ಆರಂಭಗೊಂಡಿತು. ಅಲ್ಲದೆ, ಹಲವು ದಾಸ ಸಾಹಿತಿಗಳ ಮೂಲಕ ಬೆಳೆದು ಬಂದಿರುವ ಕನ್ನಡ ಸಾಹಿತ್ಯದ ಮೆರುಗನ್ನು ಇಂಗ್ಲಿಷ್ ವ್ಯಾಮೋಹದಿಂದ ತಪ್ಪಿಸಿ ಕನ್ನಡ ಬೆಳವಣಿಗೆಗೆ ಸಂಘಟಿತರಾಗಬೇಕಿದೆ. ಇತ್ತೀಚಿನ ಅತಿವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತರಿಗೆ ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾಡಳಿತ ಗಮನ ಹರಿಸಬೇಕು ಎಂದರು.

    ನಿಕಟಪೂರ್ವ ಅಧ್ಯಕ್ಷ ಐ.ಬಿ. ಶೀಲವಂತರ ಮಾತನಾಡಿ, ಅಳ್ನಾವರ ಪಟ್ಟಣ ಕುರಿತು ಯುವ ಸಾಹಿತಿಗಳಿಂದ ಹೊಸ ಸಂಶೋಧನೆಗಳು ಹೊರಬರುವ ಮೂಲಕ ಹಳಗನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ನಡೆಯುವಂತಾಗಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ಧ ಧಾರವಾಡದ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ನಾಗರಿಕತೆ ಬೆಳವಣಿಗೆಗೆ ಪೂರಕವಾಗಿರುವ ಕನ್ನಡ ಮಾತೃಭಾಷೆಯಿಂದ ನಮ್ಮ ಧರ್ಮ ಹಾಗೂ ಸಂಸ್ಕೃತಿಯನ್ನು ರಕ್ಷಿಸಲು ಸಾಧ್ಯವಿದೆ. ಕ್ಷಿಣಿಸುತ್ತಿರುವ ಗುರು ಹಿರಿಯರ ಗೌರವಕ್ಕೆ ಮಾತ್ರ ಭಾಷೆಯ ಬೆಳವಣಿಗೆಗೆ ಮುಂದಾಗಬೇಕು ಎಂದರು.

    ಹುಬ್ಬಳ್ಳಿಯ ಸಾಹಿತಿ, ಸಂಶೋಧಕ ಡಾ. ಜಿ.ಎಂ. ನಾಗಯ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ತಾಲೂಕು ಅಧ್ಯಕ್ಷ ಡಾ.ಬಿ.ಬಿ. ಮುಡಬಾಗಿಲ ಮಾತನಾಡಿದರು. ನಿವೃತ್ತ ನ್ಯಾಯಮೂರ್ತಿ ಪ್ರಕಾಶ ನಾಡಗೇರ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎ.ಆರ್. ಬಡಿಗೇರ, ತಹಸೀಲ್ದಾರ್ ಅಮರೇಶ ಪಮ್ಮಾರ, ಮುಖ್ಯಾಧಿಕಾರಿ ವೈ. ಜಿ. ಗದ್ದಿಗೌಡರ, ಎಸ್.ವಿ. ಹೊಸಕೆರಿ, ಬಿ.ವಿ. ಹಟ್ಟಿಹೊಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts