More

    ಭಾವೈಕ್ಯದ ಗ್ರಾಮ ಬೇನಾಳ Bhavaikya village Benal

    ಆಲಮಟ್ಟಿ : ನನ್ನ ಮತಕ್ಷೇತ್ರದ ಸರ್ವ ಗ್ರಾಮಗಳನ್ನು ಭಾವೈಕ್ಯದ ಗ್ರಾಮಗಳನ್ನಾಗಿ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ. ಅದರಲ್ಲೂ ಭಾವೈಕ್ಯವನ್ನೇ ತನ್ನ ಉಸಿರನ್ನಾಗಿ ಜೀವಿಸುತ್ತಿರುವ ಪ್ರಗತಿಪರ ಗ್ರಾಮವೆಂದರೆ ಅದು ಬೇನಾಳ ಆಗಿದೆ.

    ಆ ಗ್ರಾಮ ನನ್ನ ವ್ಯಾಪ್ತಿಗೆ ಬಂದಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದು ಜವಳಿ, ಎಪಿಎಂಸಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

    ಸಮೀಪದ ಬೇನಾಳ ಆರ್‌ಎಸ್ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಎರಡು ಹೆಚ್ಚುವರಿ ಕೊಠಡಿಗಳ ಉದ್ಘಾಟನೆ ಹಾಗೂ ಟಿಪ್ಪು ಸುಲ್ತಾನ್ ಮತ್ತು ಭಕ್ತ ಕನಕದಾಸ ಜಯಂತಿ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 55 ಕೆಜಿಯೊಳಗಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

    ಇದನ್ನೂ ಓದಿ: ಸೇವೆಯಲ್ಲಿ ಭಗವಂತನನ್ನು ಕಾಣಿ

    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಬೇನಾಳ ಗ್ರಾಮ ಹಲವು ಸಂಸ್ಕೃತಿಗಳ ತಾಣವಾಗಿದೆ. ಗ್ರಾಮದ ಅಭಿವೃದ್ಧಿಗಾಗಿ ಗ್ರಾಮಸ್ಥರೆಲ್ಲ ಪ್ರಯತ್ನಿಸಿ ವಿವಿಧ ಕಾಮಗಾರಿಗಳನ್ನು ಮಂಜೂರು ಮಾಡಿಸಿಕೊಂಡ ಮಾದರಿ ಗ್ರಾಮವಾಗಿದೆ.

    ಶಾಲೆಯ ಶ್ರೇಯೋಭಿವೃದ್ಧಿಗೆ ಗ್ರಾಮಸ್ಥರು ಕೈಜೋಡಿಸಬೇಕು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ದಾಸರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರತಿವರ್ಷ ರಾಜ್ಯಮಟ್ಟದವರೆಗೂ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

    ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಡಗುಂದಿ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮುಕಾರ್ತಿಹಾಳ ಹಾಗೂ ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ ಅವರ ಮನವಿಗೆ ಸ್ಪಂದಿಸಿ ಬೇನಾಳ ಗ್ರಾಮದ ಶಾಲೆಗೆ ಶೀಘ್ರದಲ್ಲಿಯೇ ಸ್ಮಾರ್ಟ್‌ಕ್ಲಾಸ್ ಅಳವಡಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಸ್ಪಷ್ಟ ಭರವಸೆ ನೀಡಿದರು. ಬಸವರಾಜ ಹಂಚಲಿ ಉಪನ್ಯಾಸ ನೀಡಿದರು.

    ಸಚಿವ ಶಿವಾನಂದ ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ ಹಾಗೂ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತೃತ್ವದ ಶಿಕ್ಷಕರ ತಂಡದ ಮಧ್ಯೆ 15 ನಿಮಿಷ ಕಬಡ್ಡಿ ಆಟ ಗಮನ ಸೆಳೆಯಿತು.

    ಕೆಎಂಎಫ್ ನಿರ್ದೇಶಕ ಗುರು ಚಲವಾದಿ, ನಿಡಗುಂದಿ ತಹಸೀಲ್ದಾರ್ ಎ.ಡಿ.ಅಮರವಾಡಗಿ, ಬಿಇಒ ವಸಂತ ರಾಠೋಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ವಂದಾಲ, ಜಿ.ಸಿ.ಮುತ್ತಲದಿನ್ನಿ, ಗ್ಯಾನಪ್ಪಗೌಡ ಬಿರಾದಾರ, ಬಿ.ಎಚ್.ಗಣಿ, ಬುಡ್ಡೇಸಾಬ್ ಬಾಗವಾನ, ಎಂ.ಡಿ.ಫತ್ತೇಪುರ, ಟಿ.ಎಸ್. ಬಿರಾದಾರ, ಜಬ್ಬಾರ್ ಕೋಟ್ಯಾಳ, ಸಿ.ಬಿ. ಕಲ್ಲೋಲ, ಮುತ್ತು ಬಡಿಗೇರ, ಮಹೇಶ ಗಾಳಪ್ಪಗೋಳ, ಟಿಪ್ಪು ಸುಲ್ತಾನ ಯುವಕ ಸಂಘದ ಅಧ್ಯಕ್ಷ ಮಹಮ್ಮದ್ ಬೇದ್ರೇಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts