More

    ಭಾವೈಕ್ಯತೆಯ ಬದುಕಿನಿಂದ ಜೀವನ ಸಾರ್ಥಕ

    ಕೊಡೇಕಲ್: ಮನುಷ್ಯ ಜ್ಞಾನ ಸಂಪತ್ತು ಗ್ರಹಿಸಿಕೊಂಡು ಎಲ್ಲರೊಂದಿಗೆ ಭಾವೈಕ್ಯತೆಯ ಬದುಕು ಸಾಗಿಸುವ ಮೂಲಕ ತಮ್ಮ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಅಗಡಿ ಅಕ್ಕಿಮಠದ ಶ್ರೀ ಡಾ.ಗುರುಲಿಂಗ ಸ್ವಾಮೀಜಿ ನುಡಿದರು.

    ಗ್ರಾಮದ ಶ್ರೀ ವಿರಕ್ತ ಮಠದ ಶ್ರೀ ರಾಚೇಶ್ವರ ಶಿವಯೋಗಿಗಳ ೫೫೫ನೇ ವರ್ಷದ ಸ್ಮರಣೋತ್ಸವ ನಿಮಿತ್ತ ಬೂದಿಹಾಳದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರಾವಣ ಮಾಸ ಸಂಚಾರಿ ಶಿವಾನುಭವ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನೀಡಿದ ಶ್ರೀಗಳು, ಅಸತ್ಯದಿಂದ ಸತ್ಯದ ಕಡಗೆ ಹೋಗಿ ಮನುಷ್ಯ ಸಾರ್ಥಕ ಬದುಕು ಮಾಡಿಕೊಳ್ಳುವುದರ ಜತೆಗೆ ಇತರರಿಗೆ ಸಹಕಾರ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.

    ಶ್ರೀ ನೀಲಕಂಠ ಸ್ವಾಮೀಜಿ, ಶ್ರೀ ಗಾಂಗೇಯಪಿತ ಸ್ವಾಮೀಜಿ, ಮಲ್ಲಗೌಡ ಜೇವರ್ಗಿ, ಧರೆಪ್ಪ ಮೇಟಿ, ಬಸವರಾಜಗೌಡ ಜೇವರ್ಗಿ, ಬಿ.ಎನ್.ಪೊಲೀಸ್ ಪಾಟೀಲ್, ಶಂಕರಗೌಡ ಜೇವರ್ಗಿ, ಹಣಮಂತ್ರಾಯ ಮಡ್ಡಿ, ಶಿವಪುತ್ರಪ್ಪ ಚಳಗೇರಿ, ಭೀಮನಗೌಡ ಕಕ್ಕೇರಿ, ದೇವಣ್ಣ ಜೈನಾಪುರ, ಬಸನಗೌಡ ಧನ್ನೂರ, ಶರಣಗೌಡ ಬಿರಾದಾರ, ಬಸನಗೌಡ ಬಿರಾದಾರ, ಶರಣು ಧನ್ನೂರ, ಗುರಣ್ಣ ವಡಿಗೇರಿ, ಭೀಮಣ್ಣ ಪೂಜಾರಿ ಇತರರಿದ್ದರು. ಸಂಗಮೇಶ ಮತ್ತು ನಿಂಗಣ್ಣ ಸಂಗೀತ ಸೇವೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts