More

    ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಅಡ್ಡಿಪಡಿಸಿದ ದಟ್ಟ ಮಂಜು

    ಧರ್ಮಶಾಲಾ: ಸಾಮಾನ್ಯವಾಗಿ ಮಳೆ, ಒದ್ದೆ ಮೈದಾನ, ಅತಿಯಾದ ಬಿಸಿಲು, ಜೋರಾದ ಗಾಳಿ, ಜೇನುನೊಣಗಳ ದಾಳಿ ಅಥವಾ ಮಂದ ಬೆಳಕು ಅಡ್ಡಿ ಪಡಿಸಿದಾಗ ಕ್ರಿಕೆಟ್ ಪಂದ್ಯವನ್ನು ನಿಲ್ಲಿಸಲಾಗುತ್ತದೆ. ಆದರೆ ಧರ್ಮಶಾಲಾದಲ್ಲಿ ಭಾರತ-ನ್ಯೂಜಿಲೆಂಡ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ದಟ್ಟ ಮಂಜು ಆವರಿಸಿದ ಕಾರಣ ಆಟವನ್ನು ಸುಮಾರು 20 ನಿಮಿಷ ಸ್ಥಗಿತಗೊಳಿಸಲಾಯಿತು. ನ್ಯೂಜಿಲೆಂಡ್ ಫೀಲ್ಡರ್‌ಗಳಿಗೆ ಚೆಂಡು ಕಾಣಿಸದ ಪರಿಸ್ಥಿತಿ ಎದುರಾದಾಗ ಅಂಪೈರ್ ಆಟ ನಿಲ್ಲಿಸಿ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‌ಗೆ ಕಳುಹಿಸಿದರು. ಆಗ ಭಾರತ 15.4 ಓವರ್‌ಗಳಲ್ಲಿ 2 ವಿಕೆಟ್‌ಗೆ 100 ರನ್ ಪೇರಿಸಿತ್ತು. ಬಳಿಕ ಯಾವುದೇ ಓವರ್ ಕಡಿತವಿಲ್ಲದೆ ಆಟ ಮುಂದುವರಿಸಲಾಯಿತು.

    ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಸೂಪರ್ ಸಂಡೇಯ ಬಲಿಷ್ಠರ ಕದನದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಡೆರಿಲ್ ಮಿಚೆಲ್ (130 ರನ್, 127 ಎಸೆತ, 9 ಬೌಂಡರಿ, 5 ಸಿಕ್ಸರ್) ಆಕರ್ಷಕ ಶತಕ ಹಾಗೂ ರಚಿನ್ ರವೀಂದ್ರ (75 ರನ್, 87 ಎಸೆತ, 6 ಬೌಂಡರಿ,1 ಸಿಕ್ಸರ್) ಒದಗಿಸಿದ ಬೆಂಬಲದ ಬಳಿಕ ಮೊಹಮದ್ ಶಮಿ ದಾಳಿಗೆ ತತ್ತರಿಸಿದ ಕಿವೀಸ್ ಭರ್ತಿ 50 ಓವರ್‌ಗಳಲ್ಲಿ 273 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಉತ್ತಮ ಆರಂಭದ ಬಳಿಕ ಹಿನ್ನಡೆ ಅನುಭವಿಸಿದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ (39*) ಜತೆಯಾಟದ ಬಲದಿಂದ 48 ಓವರ್‌ಗಳಲ್ಲಿ 6 ವಿಕೆಟ್‌ಗೆ 274 ರನ್‌ಗಳಿಸಿ ಸತತ 5ನೇ ಪಂದ್ಯದಲ್ಲಿ ಯಶಸ್ವಿ ಚೇಸಿಂಗ್ ಸಾಧಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts