More

    ಭಾರತೀಯ ತತ್ತ್ವಶಾಸ್ತ್ರ ಪ್ರಿಯ ಉಗಾಂಡಾ ಪ್ರಜೆ

    ಧಾರವಾಡ: ಲಾಕ್​ಡೌನ್ ಜಾರಿಯಾದಾಗಿನಿಂದ ಪೂರ್ವ ಆಫ್ರಿಕಾದ ಉಗಾಂಡಾ ದೇಶದ ಪ್ರಜೆಯೊಬ್ಬ ನಗರದಲ್ಲಿ ವಾಸವಾಗಿದ್ದಾನೆ. ಭಾರತೀಯ ತತ್ತ್ವಶಾಸ್ತ್ರ ಅಧ್ಯಯನಕ್ಕಾಗಿ ಇಲ್ಲಿಗೆ ಬಂದಿರುವ ಈತ, 3 ತಿಂಗಳಿಂದ ಹಾಸ್ಟೆಲ್​ವೊಂದರಲ್ಲಿ ಏಕಾಂಗಿಯಾಗಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ಆತ್ಮಸ್ಥೈರ್ಯ ತುಂಬಿದ್ದು ತತ್ತ್ವಶಾಸ್ತ್ರ ಓದು!

    ಉಗಾಂಡಾದ ಜಿಯಾಲ್ ಎಂಬಾತ ಕರ್ನಾಟಕ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಇಲ್ಲೇ ಸ್ನಾತಕೋತ್ತರ ಪದವಿ ಪೂರೈಸಿದ್ದು, ತತ್ತ್ವಶಾಸ್ತ್ರದಲ್ಲಿ ಪಿ.ಎಚ್​ಡಿ ಮಾಡುತ್ತಿದ್ದಾನೆ. ಮಾರ್ಚ್​ನಲ್ಲಿ ಲಾಕ್​ಡೌನ್ ಜಾರಿಯಾಗುತ್ತಿದ್ದಂತೆ ಈತನ ಸಹಪಾಠಿಗಳೆಲ್ಲ ಊರುಗಳಿಗೆ ಹೋಗಿದ್ದಾರೆ. ಈತ ಕರ್ನಾಟಕ ವಿಶ್ವವಿದ್ಯಾಲಯದ ಭೀಮಾ ಹಾಸ್ಟೆಲ್​ನಲ್ಲಿ ಏಕಾಂಗಿಯಾಗಿ ಉಳಿಯಬೇಕಾಯಿತು. ಸ್ವಯಂಪ್ರೇರಿತ ಕ್ವಾರಂಟೈನ್ ವಿಧಿಸಿಕೊಂಡ ಜಿಯಾಲ್, ಅಗತ್ಯ ದಿನಸಿ ಖರೀದಿಸಿ ಹಾಸ್ಟೆಲ್​ನಲ್ಲೇ ಅಡುಗೆ ಮಾಡಿಕೊಂಡು ಉಳಿದಿದ್ದಾನೆ.

    ಸುದೀರ್ಘ 3 ತಿಂಗಳ ಕಾಲ ಏಕಾಂಗಿಯಾಗಿರುವ ಈತ ಒಂಟಿತನ ಕಳೆಯಲು ಭಾರತೀಯ ತತ್ತ್ವಶಾಸ್ತ್ರ ಓದಿಗೆ ಮೊರೆ ಹೋಗಿದ್ದಾನೆ. ಪುಸ್ತಕಗಳನ್ನು ಓದುತ್ತ ದಿನ ಕಳೆದ ಜಿಯಾಲ್​ಗೆ ಬಸವೇಶ್ವರ ಮತ್ತು ರಾಮಾನುಜಾಚಾರ್ಯರು ಎಂದರೆ ಅಚ್ಚುಮೆಚ್ಚು.

    ಒಟ್ಟಾರೆ ಕರೊನಾದಿಂದ ಅದೆಷ್ಟೋ ಜನ ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಅಂಥವರಿಗೆ ಭಾರತೀಯ ತತ್ತ್ವಶಾಸ್ತ್ರ ಓದಿನಲ್ಲಿ ನಿರತನಾಗಿರುವ ಉಗಾಂಡಾದ ಜಿಯಾಲ್ ಮಾದರಿಯಾಗಿದ್ದಾನೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts