More

    ಭಾರತದ ಸಂಸ್ಕೃತಿ ರಕ್ಷಿಸಿದವರು ಶಿವಾಜಿ

    ಅಥಣಿ ಗ್ರಾಮೀಣ: ವಿದೇಶಿ ಆಕ್ರಮಣಕಾರ ದಾಳಿಯಿಂದ ಭಾರತದ ಸಂಸ್ಕೃತಿ, ಪರಂಪರೆ, ವಿನಾಶದ ಅಂಚಿಗೆ ತಲುಪಿದಾಗ ಶಿವಾಜಿ ಮಹಾರಾಜರು ಪ್ರಬಲ ತಡೆಗೋಡೆಯಾಗಿ ರಕ್ಷಿಸಿದರು ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.
    ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಜೈ ಶಿವಾಜಿ ಯುವಕ ಸಂಘದ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವ ಹಾಗೂ ಸಿದ್ಧೇಶ್ವರ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿವಾಜಿ ಯಾವುದೇ ಹಿನ್ನಲೆಯಿಲ್ಲದೇ ದೇಶ ಕಟ್ಟಿದ ಯೋಧ. ಇದಕ್ಕೆಲ್ಲ ತಾಯಿ ಜೀಜಾಬಾಯಿಯವರೆ ಪ್ರೇರಣೆ. ಮಕ್ಕಳಿಗೆ ಧೈರ್ಯ, ಸಾಹಸ, ಮನೋಬಲ ತುಂಬುವ ಕೆಲಸ ಮಾಡಬೇಕು ಎಂದರು. ಮೈಗೂರ ಶಿವಾನಂದಮಠದ ಗುರುಪ್ರಸಾದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳು ಅಧ್ಯಾತ್ಮ ಪರ್ವವಾದರೆ, ಶಿವಾಜಿ ಮಹಾರಾಜರು ಶೌರ್ಯದ ಪ್ರತೀಕವಾಗಿದ್ದಾರೆ. ಹಿಂದೂಗಳು ನಿಶ್ಚಿಂತೆಯಾಗಿರಲು ಹಲವರ ತ್ಯಾಗ ಬಲಿದಾನವೇ ಕಾರಣವಾಗಿದೆ ಎಂದರು. ಬಾಲ ವಾಗ್ಮಿ ಭಾಗ್ಯಾಗೌಡ ಚಡಚಣ, ರಾಜ್ಯ ಕ್ಷತ್ರಿಯ ಮರಾಠ ಉಪಾಧ್ಯಕ್ಷ ಬಾಹುಸಾಹೇಬ ಜಾಧವ, ಚಿಕ್ಕೋಡಿ ಜಿಲ್ಲಾ ಕ್ಷತ್ರಿಯ ಮರಾಠ ಅಧ್ಯಕ್ಷ ವಿನಾಯಕ ದೇಸಾಯಿ ಹಾಗೂ ಕೆಎಂಎಂ ನಿರ್ದೇಶಕ ಅಪ್ಪಾಸಾಬ ಅವತಾಡೆ ಮಾತನಾಡಿದರು.

    ಸಿದ್ದು ಪಾಟೀಲ, ಜಗದೀಶ ಅವಟಿ, ನಾರಾಯಣ ಅಂಬಾಜಿ, ನಾಮದೇವ ಆಸಂಗಿ, ಮಂಜುನಾಥ ಅಂಬಾಜಿ, ಮುತ್ತಪ್ಪ ಕರ್ಜಗಿ, ಸಚಿನ ಚವಾಣ, ಸಾಬು ಮಾಳಿ, ಸಂಬಾಜಿ ಗುರ್ಲಾಪುರ, ಅಶೋಕ ಅಂಬಾಜಿ ಇತರರು ಇದ್ದರು.

    ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮವನ್ನು ವಾಗ್ಮಿ ಚೈತ್ರಾ ಕುಂದಾಪುರ ಉದ್ಘಾಟಿಸಿದರು. ಗುರುಪ್ರಸಾದ ಸ್ವಾಮೀಜಿ, ಭಾಗ್ಯಾಗೌಡ ಚಡಚಣ, ಬಾಹುಸಾಹೇಬ ಜಾಧವ, ವಿನಾಯಕ ದೇಸಾಯಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts