More

    ಭಾಗಶಃ ಮನೆ ಬಿದ್ದರೂ 5 ಲಕ್ಷ

    ಶಿವಮೊಗ್ಗ: ಮಳೆಯಿಂದ ಹಾನಿಗೊಳಗಾದ ಮನೆ ಸಂತ್ರಸ್ತರಿಗೆ ತುರ್ತು ಕ್ರಮಕ್ಕೆ 10 ಸಾವಿರ ರೂ. ಪರಿಹಾರ, ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಮನೆಗೆ ಹಾನಿಯಾಗಿದ್ದರೆ ತಕ್ಷಣವೇ ಒಂದು ಲಕ್ಷ ರೂ. ಪರಿಹಾರವನ್ನು ಅಂದೇ ಸಂತ್ರಸ್ತರ ಖಾತೆಗೆ ಜಮಾ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ನಿರ್ದೇಶನ ನೀಡಿದ್ದಾರೆ.

    ಮಳೆ ಹಾನಿ ಹಾಗೂ ಕೈಗೊಂಡಿರುವ ತುರ್ತು ಪರಿಹಾರ ಹಾಗೂ ಕೈಗೊಳ್ಳಬೇಕಾಗಿರುವ ಕ್ರಮ ಕುರಿತು ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಮನೆ ಹಾನಿ ಸಮೀಕ್ಷೆ ವೇಳೆ ಮಾನವೀಯತೆ ಮರೆಯಬಾರದು. ಭಾಗಶಃ ಅಥವಾ ಪೂರ್ಣ ಹಾನಿಯಾದ ಮನೆಗಳಿಗೆ ಹಂತ ಹಂತವಾಗಿ 5 ಲಕ್ಷ ರೂ. ಬಿಡುಗಡೆ ಮಾಡಬೇಕು ಎಂದು ಹೇಳಿದರು.

    ಪರಿಹಾರ ವಿತರಣೆಯಲ್ಲಿ ವಿಳಂಬವಾಗಬಾರದು, ಯಾವೊಬ್ಬ ಸಂತ್ರಸ್ತರೂ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯ 35 ಕಾರ್ಪೆರೇಟರ್​ಗಳು ತಮ್ಮ ವಾರ್ಡ್​ಗಳಲ್ಲಿ ಬಿದ್ದಿರುವ ಮನೆಗಳ ಪಟ್ಟಿ ಮಾಡಿಕೊಡಬೇಕು ಎಂದರು.

    ಕಳೆದ ಸಾಲಿನಲ್ಲಿ ಮಳೆಯಿಂದ ಹಾನಿಗೀಡಾದ ಶಾಲೆಗಳ ದುರಸ್ತಿಗೆ ಬಿಡುಗಡೆಯಾಗಿದ್ದ 20 ಲಕ್ಷ ರೂ. ಅನುದಾನ ಬಳಕೆ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪೂರ್ಣಗೊಳಿಸಿದ ಕಾಮಗಾರಿ ಸರಿಯಾಗಿರುವ ಬಗ್ಗೆಯೂ ಪರಿಶೀಲಿಸಿ, ಪ್ರಸಕ್ತ ವರ್ಷದ ಶಾಲಾ ದುರಸ್ತಿ ಪಟ್ಟಿ ನೀಡಬೇಕು ಎಂದು ಡಿಡಿಪಿಐ ಎನ್.ಎಂ.ರಮೇಶ್​ಗೆ ಸೂಚಿಸಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಂಗನವಾಡಿ ಕೇಂದ್ರಗಳ ನಿರ್ವಣಕ್ಕೆ ಬಿಡುಗಡೆಯಾಗಿರುವ ಅನುದಾನ ಹಾಗೂ ಕಟ್ಟಡ ನಿರ್ವಣಗೊಂಡಿರುವ ಕುರಿತು ಮೂರ್ನಾಲ್ಕು ದಿನಗಳಲ್ಲಿ ವಿವರವಾದ ಮಾಹಿತಿ ಕೊಡಿ ಎಂದು ಮಹಿಳಾ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಚಂದ್ರಪ್ಪ ಅವರಿಗೆ ಹೇಳಿದರು.

    ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಎಸ್ಪಿ ಕೆ.ಎಂ.ಶಾಂತರಾಜು, ಜಿಪಂ ಸಿಇಓ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts