More

    ಭರವಸೆ ಬೇಡ, ಪರಿಹಾರ ನೀಡಿ

    ಭಟ್ಕಳ: ಪುರಸಭೆ ಘನತ್ಯಾಜ್ಯ ಘಟಕದಲ್ಲಿನ ನಿರ್ವಹಣೆ ಸೂಕ್ತ ರೀತಿಯಿಂದ ಆಗುತ್ತಿಲ್ಲ. ಅನೈರ್ಮಲ್ಯ ಮೀತಿ ಮಿರಿದ್ದು ಇದರಿಂದ ಸ್ಥಳೀಯರಿಗೆ ಉಸಿರು ಬೀಡುವುದು ಕಷ್ಟವಾಗಿದೆ ಎಂದು ಕಡಸಲಗದ್ದೆ, ಬೆಳಲಖಂಡ, ಗುಳ್ಮಿ ಸೇರಿ ಸುತ್ತಲಿನ ಸಾರ್ವಜನಿಕರು ಸಾಗರ ರಸ್ತೆಯ ಘನತಾಜ್ಯ ಘಟಕದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಈಗಾಗಲೇ ಹಲವು ಬಾರಿ ಸಮಸ್ಯೆ ಕುರಿತು ಮನವಿ ನೀಡಲಾಗಿದೆ. ತಹಸೀಲ್ದಾರ್ ಸೇರಿ ಪುರಸಭೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಎಲ್ಲರೂ ಭರವಸೆ ನೀಡಿ ತೆರಳುತ್ತಾರೆ ವಿನಃ ಕ್ರಮಕ್ಕೆ ಯಾರೂ ಮುಂದಾಗುತ್ತಿಲ್ಲ. ಈಗ ನಮಗೆ ಭರವಸೆ ಬೇಡ, ಪರಿಹಾರ ಬೇಕು ಎಂದು ಬೆಳಗ್ಗೆಯಿಂದಲೇ ಟೆಂಟ್ ಹಾಕಿ ಪ್ರತಿಭಟನೆ ಆರಂಭಿಸಿದ್ದರು.

    ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಲಕ್ಷಣ ಗೋಚರಿಸುತ್ತಿದ್ದಂತೆ ಸ್ಥಳಕ್ಕೆ ಶಾಸಕ ಸುನೀಲ ನಾಯ್ಕ, ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ, ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ, ಪುರಸಭೆ ಮುಖ್ಯಾಧಿಕಾರಿ ಟಿ. ದೇವರಾಜು ದೌಡಾಯಿಸಿದರು.

    ಪುರಸಭೆಗೆ ನಿಗದಿಯಾದ ಬೆಳಲಖಂಡ ಸ್ಥಳದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಡೆಸಲು ಎಸ್​ಇಐಎಎ ಅವರಿಂದ ಅನುಮತಿ ಇಲ್ಲ. ಪುರಸಭೆ ಘನ ತ್ಯಾಜ್ಯ ಘಟಕದಿಂದ ಹೊರ ಬಿಟ್ಟ ಕಲುಷಿತ ನೀರು ಕಡಸಲಗದ್ದೆ, ಬೆಳಲಖಂಡ, ಗುಳ್ಮಿ ಗ್ರಾಮದ ಮನೆಗಳ ಬಾವಿ, ತೋಟಕ್ಕೆ ಸೇರುತ್ತಿದೆ. ಇದರಿಂದ ಪರಿಸರವೆಲ್ಲ ವಾಸನೆಯಿಂದ ಕೂಡಿದ್ದು, ಉಸಿರು ಬಿಡಲು ಕಷ್ಟ ಪಡಬೇಕಾದ ಸ್ಥಿತಿ ನಿರ್ವಣವಾಗಿದೆ ಎಂದು ಸಾರ್ವಜನಿಕರು ದೂರಿದರು.

    ಘನತ್ಯಾಜ್ಯ ಘಟಕ ಬೇರೆಡೆ ಸ್ಥಳಾಂತರಿಸಿ, ಬೇಕಿದ್ದರೆ ಪುರಸಭೆ ವ್ಯಾಪ್ತಿಯ ಜಾಗದಲ್ಲಿಯೇ ಘನತ್ಯಾಜ್ಯ ಘಟಕ ನಿರ್ವಿುಸಿಕೊಳ್ಳಿ ಎಂದು ಶಾಸಕ ಹಾಗೂ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಆಗ್ರಹಿಸಿದರು.

    ಶಾಸಕ ಸುನೀಲ ನಾಯ್ಕ ಮಾತನಾಡಿ, ಘನತ್ಯಾಜ್ಯ ಘಟಕದೊಳಗಿನ ಕಸವನ್ನು ಸಂಗ್ರಹಿಸಿ ಒಂದು ಪಿಟ್ ( ಕಸ ಶೇಖರಣೆ ಹೊಂಡ) ನಿರ್ವಿುಸಿ ಮಣ್ಣು ಮುಚ್ಚುವುದು. ಕಸ ಸಂಸ್ಕರಣೆಯ ಮಧ್ಯದಲ್ಲಿ ಕಡಸಲಗದ್ದೆ, ಬೆಳಲಖಂಡ, ಗುಳ್ಮಿ ಗ್ರಾಮದಲ್ಲಿ ನೀರು ಹೋಗಲು ನಿರ್ವಿುಸಿದ್ದ ಕಾಲುವೆಯಲ್ಲಿ ಕಲುಷಿತ ನೀರು ಹೋಗದಂತೆ ಮಣ್ಣು ಹಾಕಿ ಸ್ಥಳೀಯರಿಗೆ ತೋರಿಸಬೇಕು. ಒಂದು ವಾರದಲ್ಲಿ ಇವೆಲ್ಲಾ ಕೆಲಸ ಮುಗಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲವಾದಲ್ಲಿ ನಾನೇ ನಿಂತು ಘಟಕಕ್ಕೆ ಬೀಗ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts