More

    ಭದ್ರಾವತಿಯಲ್ಲಿ ಸಾವಿರಾರು ಭಕ್ತರ ಜಯಘೋಷದ ನಡುವೆ ಗಣಪತಿ ವಿಸರ್ಜನೆ; ಹಿಂದು ಮಹಾಸಭಾ, ಹಿಂದು ರಾಷ್ಟ್ರಸೇನಾ ಸಮಿತಿಯಿಂದ ಭರ್ಜರಿ ಮೆರವಣಿಗೆ

    ಭದ್ರಾವತಿ: ನಗರದ ಹೊಸಮನೆಯಲ್ಲಿ ಹಿಂದು ಮಹಾಸಭಾ ಹಾಗೂ ಹಿಂದು ರಾಷ್ಟ್ರಸೇನಾ ಸಮಿತಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಗುರುವಾರ ಸಾವಿರಾರು ಭಕ್ತರ ಜಯಘೋಷದ ನಡುವೆ ನಗರಸಭೆ ಮುಂಭಾಗ ಭದ್ರಾನದಿಯಲ್ಲಿ ವಿಸರ್ಜಿಸಲಾಯಿತು.
    ಗುರುವಾರ ಬೆಳಗ್ಗೆ 11 ಗಂಟೆಗೆ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಬಿ.ಕೆ.ಸಂಗಮೇಶ್ವರ್ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜೆಡಿಎಸ್‌ನ ಶಾರದಾ ಅಪ್ಪಾಜಿ, ದತ್ತಾತ್ರಿ, ಎಸ್.ಕುಮಾರ್ ವಿವಿಧ ಪಕ್ಷಗಳ ಮುಖಂಡರು ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
    ಮೆರವಣಿಗೆಯು ಹೊಸಮನೆ ಶಿವಾಜಿ ಸರ್ಕಲ್‌ನಿಂದ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಡರ್ ಬ್ರಿಡ್ಜ್ ಮೂಲಕ ಅಪ್ಪರ್‌ಹುತ್ತಾ ಬಸ್ ನಿಲ್ದಾಣದವರೆಗೂ ಮೆರವಣಿಗೆ ಸಾಗಿ ನಂತರ ಹಿಂದಿರುಗಿ, ತರೀಕೆರೆ ರಸ್ತೆಗೆ ಆಗಮಿಸಿ ಗಾಂಧಿ ವೃತ್ತದ ಮೂಲಕ ನಗರಸಭೆ ಮುಂಭಾಗದ ಭದ್ರಾ ನದಿಯಲ್ಲಿ ಗಣಪತಿ ವಿಸರ್ಜನೆ ನಡೆಯಿತು. ಮೆರವಣಿಗೆಯು ತರೀಕೆರೆ ರಸ್ತೆಯಲ್ಲಿನ ಮಸೀದಿ ಮುಂದೆ ಆಗಮಿಸಿದಾಗ ಪ್ರತಿವರ್ಷದಂತೆ ಕರ್ಪೂರ ಹಚ್ಚಲಾಯಿತು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು.
    ಕಾಗದ ನಗರಿ ಕೇಸರಿಮಯ: ನಗರದ ಪ್ರಮುಖ ರಸ್ತೆಗಳು ಕೇಸರಿ ಬಂಟಿಂಗ್ಸ್ ಹಾಗೂ ಧ್ವಜಗಳಿಂದ ಅಲಂಕೃತಗೊಂಡಿದ್ದು, ನೋಡುಗರ ಕಣ್ಮನ ಸೆಳೆಯುತ್ತಿತ್ತು. ಭಜರಂಗ ದಳದ ಕಾರ್ಯಕರ್ತರು, ಕೇಸರಿಪಡೆ ಯುವಕರು ಮೆರವಣಿಗೆಯಲ್ಲಿ ದೊಡ್ಡ ದೊಡ್ಡ ಕೇಸರಿ ಧ್ವಜಗಳನ್ನು ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ಡೊಳ್ಳುಕುಣಿತ, ನಾದಸ್ವರ, ವೀರಗಾಸೆ, ಗೊಂಬೆಗಳು ಸೇರಿದಂತೆ ಹಲವು ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ರಂಗು ತುಂಬಿತು.
    ಜೈ ಶ್ರೀರಾಮ್… ಜೈ, ಜೈ, ಶ್ರೀರಾಮ್… ಗಣಪತಿ ಬಪ್ಪ ಮೋರಯಾ… ಎಂಬ ಘೋಷಣೆಗಳೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಹೊಸಮನೆಯಲ್ಲಿ ಕೆಲವರು ಓಕಳಿ ಎರಚಿ ಸಂಭ್ರಮಿಸಿದರು. ನಗರದ ಪ್ರಮುಖ ವೃತ್ತಗಳಲ್ಲಿ ಸಾವರ್ಕರ್, ಶಿವಾಜಿ, ಪುನೀತ್ ರಾಜ್‌ಕುಮಾರ್ ಫ್ಲೆಕ್ಸ್‌ಗಳು ರಾರಾಜಿಸಿದವು. ಕೊಲೆಯಾದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷನ ಫೋಟೊಗಳು ಕಂಡುಬಂದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts