More

    ಭದ್ರಾವತಿಯಲ್ಲಿ ಮೂರು ಬಡಾವಣೆ ಜಲಾವೃತ

    ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರವೂ ವರ್ಷಧಾರೆ ಮುಂದುವರಿದಿದ್ದು ಭದ್ರಾ ಮತ್ತು ತುಂಗಾ ನದಿಗಳು ಉಕ್ಕಿ ಹರಿದ ಪರಿಣಾಮ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ನಗರದ ಇಮಾಮ್ಾಡಾ, ಸೀಗೆಹಟ್ಟಿ ಭಾಗದಲ್ಲಿ ನೆರೆ ಭೀತಿ ಎದುರಾಗಿದ್ದರೆ ಭದ್ರಾವತಿಯಲ್ಲಿ ಮೂರು ಬಡಾವಣೆ ಬಹುತೇಕ ಮುಳುಗಡೆ ಆಗಿದ್ದವು.

    ಭದ್ರಾ ಜಲಾಶಯದಿಂದ 60 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದ್ದು ಭದ್ರಾವತಿಯ ಕವಲಗುಂದಿ, ಅಂಬೇಡ್ಕರ್​ನಗರ ಹಾಗೂ ಗುಂಡೂರಾವ್ ಬಡಾವಣೆಗೆ ನೀರು ನುಗ್ಗಿತ್ತು. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಅಲ್ಲಿನ 30ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಿದ ತಾಲೂಕು ಆಡಳಿತ ಒಕ್ಕಲಿಗರ ಸಭಾಭವನಲ್ಲಿ ಆರೈಕೆ ಕೇಂದ್ರ ತೆರೆದಿದೆ.

    ಸ್ಥಳಕ್ಕೆ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಹಾಗೂ ಪ್ರಭಾರ ತಹಸೀಲ್ದಾರ್ ಡಾ. ಎನ್.ಜೆ.ನಾಗರಾಜ್ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾನುವಾರ ರಾತ್ರಿ ಭದ್ರಾ ಜಲಾಶಯದಿಂದ 72 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು. ಇದರಿಂದ ನದಿ ಪಾತ್ರದ ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ ಜಲಾಶಯಕ್ಕೆ ಒಳಹರಿವು 42 ಸಾವಿರ ಕ್ಯೂಸೆಕ್​ಗೆ ಇಳಿದಿದ್ದು ಸೋಮವಾರ ಬೆಳಗ್ಗೆಯಿಂದ 60 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು.

    ಗಾಜನೂರು ಡ್ಯಾಂಗೆ 65 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಅಷ್ಟೇ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿರುವುದರಿಂದ ಶಿವಮೊಗ್ಗದಲ್ಲಿ ತುಂಗೆ ಮೈದುಂಬಿ ಹರಿಯುತ್ತಿದ್ದಾಳೆ. ಕೋರ್ಪಲಯ್ಯ ಛತ್ರದ ಬಳಿ ಮಂಟಪ ಮತ್ತೆ ಮುಳುಗಡೆಯಾಗಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಒಳಹರಿವಿನಲ್ಲೂ ಏರಿಕೆ ಕಂಡಿದ್ದು 34 ಸಾವಿರ ಕ್ಯೂಸೆಕ್ ನೀರು ಹರಿದುಬಂದಿತು. ಉಳಿದಂತೆ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಭಾರಿ ಬಿರುಗಾಳಿ ಸಹಿತಿ ಮಳೆಯಾಗಿದ್ದು ಹಲವೆಡೆ ಮರಗಳು ಉರá-ಳಿ ಬಿದ್ದಿವೆ. ಅಡಕೆ ತೋಟ, ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಕೆಲ ಮನೆಗಳ ಶೀಟ್ ಹಾರಿ ಹೋಗಿದ್ದು ಗೋಡೆ ಕಸಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts