More

    ಭತ್ತದ ಬೆಳೆಯತ್ತ ರೈತರ ಚಿತ್ತ

    ಶಶಿಧರ ಕುಲಕರ್ಣಿ ಮುಂಡಗೋಡ

    ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ರೈತರು ಈಗಾಗಲೇ ಭೂಮಿಯನ್ನು ಹದಗೊಳಿಸಿ ಶೇ. 80ರಷ್ಟು ಭತ್ತ ಬೀಜ ಬಿತ್ತನೆ ಮಾಡಿದ್ದಾರೆ. ಇನ್ನುಳಿದ ಶೇ. 20ರಷ್ಟು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

    ತಾಲೂಕಿನಲ್ಲಿ ಸುಮಾರು 6,500 ಹೆಕ್ಟೇರ್ ಭತ್ತ ಬೀಜ ಬಿತ್ತನೆ ಕ್ಷೇತ್ರವಿದ್ದು, ಸದ್ಯ ಬೀಳುತ್ತಿರುವ ಮಳೆಯಿಂದ ಭತ್ತ ಬಿತ್ತನೆಗೆ ಒಳ್ಳೆಯ ಹದ ಸಿಕ್ಕಿದೆ. ಈ ಮೊದಲು ಕೆಲ ರೈತರು ಒಣ ಮಣ್ಣಿನಲ್ಲಿ ಬಿತ್ತನೆ ಮಾಡಿದ್ದಾರೆ. ಬಿತ್ತಿದ ಬೀಜಗಳು ಈಗಾಗಲೇ ಮೊಳಕೆಯೊಡೆದು ಹಸಿರು ಸಾಲುಗಳು ಕಾಣುತ್ತಿವೆ. ಸಂಪೂರ್ಣವಾಗಿ ಮೊಳಕೆಯೊಡೆಯಲು ಇನ್ನೂ ಮಳೆಯಾಗಬೇಕು. ಕಳೆದ ವರ್ಷ ಈ ವೇಳೆಗೆ 277 ಮಿ.ಮೀ. ಮಳೆ ಬಿದ್ದಿತ್ತು. ಆದರೆ, ಈ ವರ್ಷ 317 ಮಿ.ಮೀ. ಮಳೆಯಾಗಿದೆ.

    ಹಿಂದೆ ಮುಂಡಗೋಡ ತಾಲೂಕು ಭತ್ತದ ಕಣಜವೆಂದೇ ಪ್ರಸಿದ್ಧಿಯಾಗಿತ್ತು. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಮಳೆಯ ಅಭಾವದಿಂದ ತಾಲೂಕಿನಲ್ಲಿ ಭತ್ತ ಬೆಳೆಯುವುದು ಕಡಿಮೆ ಆಗಿತ್ತು. ಹಾಗಾಗಿ ರೈತರು ಕಡಿಮೆ ಖರ್ಚಿನ ಮತ್ತು ಹೆಚ್ಚು ಆದಾಯದ ಗೋವಿನ ಜೋಳದ ಮೊರೆ ಹೋಗಿದ್ದರು. ಆದರೆ, ಕಳೆದ 2-3 ವರ್ಷದಿಂದ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯ ರೈತರು ಭತ್ತದ ಬೆಳೆಯತ್ತ ವಾಲಿದ್ದಾರೆ.

    ಕೂಲಿಯಾಳುಗಳ ಕೊರತೆ: ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಕೂಲಿಯಾಳುಗಳ ಕೊರತೆಯಾಗಿದೆ. ಬೇರೆ ಊರುಗಳಿಂದ ಕೂಲಿ ಅರಿಸಿ ಜನ ಬರುತ್ತಿದ್ದರು. ಆದರೆ, ಈ ವರ್ಷ ಕರೊನಾದಿಂದಾಗಿ ಊರು ಬಿಟು ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದೆಡೆ ಬರಲು ವಾಹನ ಸೌಲಭ್ಯವಿಲ್ಲದೆ ಇರುವುದು ಕೂಡ ಮತ್ತೊಂದು ಕಾರಣವಾಗಿದೆ.

    ಉತ್ತಮ ಮಳೆಯಾಗಿದ್ದು, ಭತ್ತ ಬೀಜ ಬಿತ್ತನೆಗೆ ಭೂಮಿ ಹದವಾಗಿದೆ. ಈ ವರ್ಷ ಮಳೆ ಆಗುತ್ತಿರುವುದನ್ನು ನೋಡಿದರೆ ಭತ್ತದ ಬೆಳೆ ಚೆನ್ನಾಗಿ ಬರುವ ಸಾಧ್ಯತೆ ಇದೆ. ಮುಂದೆ ಭತ್ತದ ಬೆಳೆಯನ್ನು ಕೊಯ್ಲು ಮಾಡುವ ವೇಳೆ ಮಳೆ ಸುರಿಯದಿದ್ದರೆ ಸಾಕು.
    | ವಿರೂಪಾಕ್ಷ ಸಾಗರ ನ್ಯಾಸರ್ಗಿ ರೈತ

    ಇನ್ನು ಮುಂದೆ ಬಿತ್ತನೆ ಮಾಡುವ ರೈತರು ಭೂಮಿ ತೇವಾಂಶ ನೋಡಿ ಬಿತ್ತನೆ ಹಾಗೂ ರಸಗೊಬ್ಬರ ಬಳಕೆ ಮಾಡಬೇಕು. ಈಗಾಗಲೇ ಬಿತ್ತನೆ ಮಾಡಿದ ರೈತರು ನೀರಿನ ಅವಶ್ಯಕತೆ ಇದ್ದಲ್ಲಿ ನೀರು ಪೂರೈಸಬೇಕು. ಮುಂಚಿತವಾಗಿ ಬಿತ್ತನೆ ಮಾಡಿದ ರೈತರು ಕಳೆ ನಿರ್ವಹಣೆ ಮಾಡಬೇಕು.
    | ಎಂ.ಎಸ್. ಕುಲಕರ್ಣಿ
    ಸಹಾಯಕ ಕೃಷಿ ನಿರ್ದೇಶಕ ಮುಂಡಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts