More

    ಭಕ್ತರಿಗಾಗಿ ಯಾತ್ರಿ ನಿವಾಸ ನಿರ್ಮಾಣ

    ಚಿಕ್ಕೋಡಿ ಗ್ರಾಮೀಣ: ಭಕ್ತರ ಅನುಕೂಲಕ್ಕಾಗಿ ಯಕ್ಸಂಬಾ ಪಟ್ಟಣದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಮಂದಿರದ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಬೀರೇಶ್ವರ ಯಾತ್ರಿ ನಿವಾಸ ಕಟ್ಟಡ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

    ಮುಜರಾಯಿ ಇಲಾಖೆಯಿಂದ ಬೀರೇಶ್ವರ ಯಾತ್ರಿ ನಿವಾಸ ನಿರ್ಮಿಸಲು 25 ಲಕ್ಷ ರೂ. ಅನುದಾನ ಮಂಜೂರಾಗಿದೆ. ಎರಡನೇ ಹಂತದಲ್ಲಿ ಹೆಚ್ಚುವರಿ ಅನುದಾನ ನೀಡಲಾಗುತ್ತದೆ. ಬೀರೇಶ್ವರನ ದರ್ಶನ ಪಡೆಯಲು ಪ್ರತಿ ಭಾನುವಾರ ಮತ್ತು ಅಮಾವಾಸ್ಯೆ ದಿನದಂದು ಹಾಗೂ ಜಾತ್ರೆಯ ಸಂದರ್ಭದಲ್ಲಿ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರ ಅನುಕೂಲಕ್ಕೆ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಯಕ್ಸಂಬಾದ ಬೀರೇಶ್ವರ ಮಂದಿರ ಅನೇಕ ವರ್ಷಗಳ ಇತಿಹಾಸ ಹೊಂದಿದ್ದು, ಬೀರೇಶ್ವರ ಕಪೆಯಿಂದ ನಮ್ಮ ಏಳಿಗೆ ಸಾಧ್ಯವಾಗಿದೆ. ಬೀರೇಶ್ವರ ಎಂಬ ಪದವೇ ನಮಗೆ ದಾರಿದೀಪವಾಗಿದೆ ಎಂದರು.

    ಜಯಾನಂದ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಮಾರುತಿ ಪೂಜಾರಿ, ದಿಲೀಪ ದೇಸಾಯಿ, ಕಷ್ಣ ಮಾಳಿ, ಮಂಜುಶ್ರೀ ಕಟ್ಟಿಕರ, ರಾಜು ಮಗದುಮ್ಮ, ಚಿದಾನಂದ ಮೋಪಗಾರ, ರಾಜು ಕಟ್ಟಿಕರ, ಅಣ್ಣಪ್ಪ ಪೂಜಾರಿ, ವೈಶಾಲಿ ಮಗದುಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts