More

    ಬ್ರೈನೋಬ್ರೈನ್ ಸಂಸ್ಥೆ ಪದವಿ ಪ್ರದಾನ

    ಮಡಿಕೇರಿ:

    ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ವತಿಯಿಂದ ಇತ್ತೀಚೆಗೆ ಅಬಾಕಸ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರೈನೋಬ್ರೈನ್ ಕೇಂದ್ರದ ಇಪ್ಪತ್ತನೇ ಬ್ಯಾಚ್‌ನ ಒಟ್ಟು ೨೦ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಎರಡೂವರೆ ವ?ರ್ ೧೦ ಹಂತಗಳಿರುವ ಅಬಾಕಸ್ ಕೋರ್ಸ್ ಅನ್ನು ಈ ವಿದ್ಯಾರ್ಥಿಗಳು ಯಶಸ್ವಿಯಾಗಿ ಪೂರೈಸಿದ್ದಾರೆ.

    ಅಂತರರಾಷ್ಟ್ರೀಯ ಬ್ರೈನೋಬ್ರೈನ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಹ್ಮಣ್ಯಂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ ಇಲ್ಲಿಯವರೆಗೆ ಮಡಿಕೇರಿ ಕೇಂದ್ರದಿಂದ ಒಟ್ಟು ೫೪೦ ವಿದ್ಯಾರ್ಥಿಗಳು ಪದವಿ ಸ್ವೀಕಾರ ಮಾಡಿದ್ದಾರೆ. ಇದು ರಾಜ್ಯದ ಇತರ ಬ್ರೈನೋಬ್ರೈನ್ ಕೇಂದ್ರಗಳಲ್ಲೆ ಅತ್ಯಧಿಕ ಮತ್ತು ಎಲ್ಲಾ ಕೇಂದ್ರಗಳಿಗೆ ಮಾದರಿಯಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋ?ಕರು ಮಾತನಾಡಿ ಮಕ್ಕಳಲ್ಲಿ ಸ್ಮರಣ ಶಕ್ತಿ, ಕಲ್ಪನಾ ಶಕ್ತಿ, ಆತ್ಮವಿಶ್ವಾಸ, ಚುರುಕುತನ, ಬಹುಕಾರ್ಯ ಕೌಶಲ್ಯ, ಛಾಯಾಗ್ರಹಣ ಶಕ್ತಿ ಸೇರಿದಂತೆ ಮಕ್ಕಳ ಕನಸಿಗೆ ರಕ್ಕೆ ಸಿಕ್ಕಂತಾಗಿದೆ ಎಂದರು. ವಿದ್ಯಾರ್ಥಿಗಳು ಕೂಡ ಅಬಾಕಸ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

    ಕೊಡಗಿನ ಸಾಂಪ್ರದಾಯಿಕ ಒಡಿ ಕತ್ತಿಯನ್ನು ಮಾಪಂಗಡ ಮೋಹನ್ ಕರುಂಬಯ್ಯ ಅವರು ನೆನಪಿನ ಕಾಣಿಕೆಯಾಗಿ ಅರುಲ್ ಸುಬ್ರಮಣ್ಯಂ ಅವರಿಗೆ ನೀಡಿದರು. ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ಮುಖ್ಯಸ್ಥೆ ಹಾಗೂ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಇದ್ದರು
    ಕೇಂದ್ರದ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ವರ್ಣರಂಜಿತವಾಗಿ ನಡೆದವು. ಪೋ?ಕರ ಉಮ್ಮತ್ ಆಟ್ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts