More

    ಬ್ಯಾಡಗಿ ಗ್ರಾಮದೇವತೆ ಜಾತ್ರೆ 29ರಿಂದ

    ಬ್ಯಾಡಗಿ: ಇಲ್ಲಿನ ಗ್ರಾಮದೇವತೆ ಜಾತ್ರಾ ಮಹೋತ್ಸವ ಫೆ. 29ರಿಂದ ಮಾ. 6ರವರೆಗೆ ಜರುಗಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ತಿಳಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 29ರಂದು ಬೆಳಗ್ಗೆ 11 ಗಂಟೆಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಧ್ವಜಾರೋಹಣ ನೆರವೇರಿಸುವರು. ಸಂಜೆ 6 ಗಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಾ. 1ರಂದು ದೇವಿಯ ಘಟಸ್ಥಾಪನೆ, ಸಂಜೆ 6 ಗಂಟೆಗೆ ಧಾರವಾಡದ ಪಂಡಿತ ವಿಜಯಕುಮಾರ ಪಾಟೀಲರಿಂದ ಸಂಗೀತ ಕಾರ್ಯಕ್ರಮ, ಮಾ. 2ರಂದು ಬೆಳಗ್ಗೆ 9 ಗಂಟೆಗೆ ಎಲ್ಲ ದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದರು.

    ಮಾ. 3ರಂದು ಸಂಜೆ 5ಕ್ಕೆ ದೇವಿಯ ಮೆರವಣಿಗೆ, 4ರಂದು ಬೆಳಗಿನ ಜಾವ 3 ಗಂಟೆಗೆ ರಾಣಗೇರ ಕಾರ್ಯಕ್ರಮ, ಸಂಜೆ 6ಕ್ಕೆ ದಕ್ಷಿಣ ಕನ್ನಡದ ಶ್ರೀನಾಥ ಅವರಿಂದ ಏಕಧಾರಿ ತತ್ತ್ವ ಪದಗಳ ಕಾರ್ಯಕ್ರಮ, 5ರಂದು ಮಧ್ಯಾಹ್ನ 3 ಗಂಟೆಗೆ ಗಡಿ ವಿಮೋಚನಾ ಕಾರ್ಯಕ್ರಮ, ಸಂಜೆ 6ಕ್ಕೆ ಬಸವರಾಜ ಜಕ್ಕಣ್ಣನವರ ಕಲಾ ತಂಡದಿಂದ ಜಾನಪದ ವೈವಿಧ್ಯ ನಡೆಯಲಿದೆ. 6ರಂದು ಬೆಳಗ್ಗೆ 8.30ಕ್ಕೆ ರುದ್ರಪಠಣ, ಸಂಜೆ 6ಕ್ಕೆ ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಹಾಗೂ ಮುಪ್ಪಿನಸ್ವಾಮಿ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ ಎಂದರು.

    ಜಾತ್ರಾ ಸಮಿತಿ ಸದಸ್ಯರಾದ ಪುಟ್ಟಪ್ಪ ಛತ್ರದ, ಚಿಕ್ಕಪ್ಪ ಛತ್ರದ, ಗಂಗಣ್ಣ ಎಲಿ, ಮಲ್ಲನಗೌಡ್ರ ಭದ್ರಗೌಡ್ರ, ಈರಣ್ಣ ಬಣಕಾರ, ಶಂಭು ಮಠದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts