More

    ಬೊಮ್ಮಾಯಿ ಬಜೆಟ್ ಮೇಲೆ ನಿರೀಕ್ಷೆ ಅಪಾರ

    ರೇವಣಸಿದ್ದಪ್ಪ ಪಾಟೀಲ್ ಬೀದರ್
    ಉತ್ತರ ಕರ್ನಾಟಕದವರೇ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಚೊಚ್ಚಲ ಬಜೆಟ್​ನಲ್ಲಿ ಗಡಿ ಜಿಲ್ಲೆ ಬೀದರ್​ಗೆ ಬಂಪರ್ ಕೊಡುಗೆ ಸಿಗುತ್ತಾ ಎಂಬ ನಿರೀಕ್ಷೆ ಹೆಚ್ಚಾಗಿದೆ. ಪ್ರವಾಸೋದ್ಯಮ, ಕೈಗಾರಿಕೆ ಜತೆಗೆ ಮೂಲಸೌಕರ್ಯ, ಹೊಸ ಯೋಜನೆಗಳಿಗೆ ಆದ್ಯತೆ ಕೊಡಬೇಕು ಎಂಬುದು ಸ್ಥಳೀಯರ ಬೇಡಿಕೆ.

    ಕಳೆದ ಬಜೆಟ್ನಲ್ಲಿ ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣದ ಬೃಹತ್ ಯೋಜನೆ ಸಿಕ್ಕಿತ್ತು. ಸ್ವಲ್ಪ ಸಹಿ, ಸ್ವಲ್ಪ ಕಹಿ ಬಜೆಟ್ ಎನಿಸಿದರೂ ಈ ಬಾರಿ ರಾಜ್ಯ ಮತ್ತು ಕೇಂದ್ರದಲ್ಲಿ ಇಬ್ಬರು ಸಚಿವರು ಹಾಗೂ ಉತ್ತರ ಕರ್ನಾಟಕದವರು ಸಿಎಂ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ಯಾಕೇಜ್ ಸಿಗಬಹುದೆಂಬ ಹೊಸ ಭರವಸೆ ಮೂಡಿದೆ.

    ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಇದೆ. ಬಜೆಟ್ ಮಂಡನೆಗೆ ಮುನ್ನ ಕೆಲ ಸಂಘ-ಸಂಸ್ಥೆಗಳು ಸಕರ್ಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಜನಪ್ರತಿನಿಧಿಗಳು ಕಿವಿಗೂಡುತ್ತಿಲ್ಲ. ಸರ್ಕಾರವೂ ಜಿಲ್ಲೆ ಪ್ರವಾಸೋದ್ಯಮದ ಪ್ರಗತಿಗೆ ಆಸಕ್ತಿ ತೋರಿಸಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಸ್ಮಾರಕ, ಐತಿಹಾಸಿಕ ಕೋಟೆಗಳು ಹಾಗೂ ಪವಿತ್ರ ಯಾತ್ರಾ ಸ್ಥಳಗಳಿದ್ದು, ನೆರೆ ರಾಜ್ಯಗಳಿಂದ ಅಸಂಖ್ಯ ಪ್ರವಾಸಿಗರು ಬರುತ್ತಾರೆ. ಕರೊನಾಕ್ಕೂ ಮೊದಲು ವಿದೇಶಿಯರು ಬೀದರ್ಗೆ ಬರುತ್ತಿದ್ದರು. ಆದರೀಗ ಮೂಲಸೌಕರ್ಯ ಕೊರತೆಯಿಂದಾಗಿ ಪ್ರವಾಸಿಗರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗಡಿ ಜಿಲ್ಲೆ ಪ್ರವಾಸೋದ್ಯಮಕ್ಕೆ ರಾಜ್ಯ ಸರ್ಕಾರ ಈ ಬಾರಿಯಾದರೂ ಬಜೆಟ್ನಲ್ಲಿ ಅನುದಾನ ಒದಗಿಸಿದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ.

    ಹಲವು ವರ್ಷಗಳಿಂದ ಜಿಲ್ಲೆಗೆ ದೊಡ್ಡ ಯೋಜನೆಗಳು ಬಂದಿಲ್ಲ. ಈ ಹಿಂದೆ ಬಜೆಟ್ನಲ್ಲಿ ಘೋಷಿಸಿದರೂ ಅನುಷ್ಠಾನಗೊಂಡಿಲ್ಲ. ಜಿಲ್ಲೆಯಲ್ಲಿ ಗುರುನಾನಕ ಝೀರಾ, ನರಸಿಂಹ ಸ್ವಾಮಿ ಝರಣಾ, ಪಾಪನಾಶ ಮಂದಿರ ಸೇರಿ ಹಲವು ಪ್ರಮುಖ ಧಾರ್ಮಿಕ ತಾಣಗಳಿವೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ಕೋಟೆಗಳಿವೆ. ಇವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರದ ಅಭಯ ಬೇಕಾಗಿದೆ.

    ರಾಜ್ಯದಲ್ಲಿ ಅತಿ ಹೆಚ್ಚು ಸೋಯಾಬೀನ್ ಬೆಳೆಯುವ ಜಿಲ್ಲೆ ಬೀದರ್. ಸೋಯಾ ಆಧಾರಿತ ಕಾರ್ಖಾನೆ ಆರಂಭಿಸುವ ಅಗತ್ಯವಿದೆ. ಇದರಿಂದ ರೈತರ ಜತೆಗೆ ಉದ್ಯೋಗ ನಿರೀಕ್ಷೆಯಲ್ಲಿರುವ ಯುವಕರಿಗೂ ಲಾಭ ಆಗಲಿದೆ. ಬಚಾವತ್ ನ್ಯಾಯ ಮಂಡಳಿಯಂತೆ ಗೋದಾವರಿ ಜಲಾನಯನ ಪ್ರದೇಶದಲ್ಲಿ ಜಿಲ್ಲೆಗೆ ಹಂಚಿಕೆ ಮಾಡಿದ 22.37 ಟಿಎಂಸಿ ನೀರು ಬಳಸಿಕೊಳ್ಳುವಲ್ಲಿ ಸಕರ್ಾರ ವಿಲವಾಗಿದೆ. ನೀರಾವರಿ ಯೋಜನೆಗಳು ಇಲ್ಲದ ಕಾರಣ ಪ್ರತಿವರ್ಷ 17-18 ಟಿಎಂಸಿ ನೀರು ನೆರೆಯ ತೆಲಂಗಾಣಕ್ಕೆ ಹರಿದು ಹೋಗುತ್ತಿದೆ. ಹಂಚಿಕೆಯಾದ ನೀರಿನ ಸಂಪೂರ್ಣ ಬಳಕೆಗೆ ಪೂರಕ ಯೋಜನೆ ಜಾರಿಗೆ ತರುವ ಅಗತ್ಯವಿದೆ. ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

    ಬಿಎಸ್ಸೆಸ್ಕೆಗೆ ಬೇಕಿದೆ ಆರ್ಥಿಕ ಸಹಾಯ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ರೈತರ ಜೀವನಾಡಿಯಾದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ)ಗೆ ಸರ್ಕಾರದ ಸಹಾಯಹಸ್ತ ಬೇಕಿದೆ. ಐದು ದಶಕದ ಹಳೇ ಕಾರ್ಖಾನೆ ಪುನಶ್ಚೇತನಕ್ಕೆ ಆದ್ಯತೆ ನೀಡಿ, ಪೂರಕ ಅನುದಾನ ಕಲ್ಪಿಸುವ ಅಗತ್ಯವಿದೆ. ಕಬ್ಬು ಬೆಳೆಗಾರರ, ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಇತ್ತೀಚೆಗೆ ಸಕ್ಕರೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ನೇತೃತ್ವದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಿಎಂ ಗಮನ ಸೆಳೆಯಲು ನಿರ್ಧರಿಸಿದ್ದರಿಂದ ಕಾರ್ಖಾನೆ ಅಭಿವೃದ್ಧಿಗೆ ಒತ್ತು ಸಿಗಬಹುದೆಂಬ ಆಶಾಭಾವ ಮೂಡಿಸಿದೆ.

    ನನೆಗುದಿಗೆ ಬಿದ್ದ ಕೃಷಿ ಕಾಲೇಜು: ಕೃಷಿ ಪ್ರಧಾನ ಜಿಲ್ಲೆಯಾದ ಬೀದರ್ ರೈತರ ಮಕ್ಕಳ ಹಿತ ಗಮನದಲ್ಲಿಟ್ಟುಕೊಂಡು ಬಜೆಟ್ನಲ್ಲಿ ಕೃಷಿ ಕಾಲೇಜು ಮಂಜೂರು ಮಾಡಬೇಕೆಂಬ ಬೇಡಿಕೆ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಕರ್ಾರ, ರಾಜ್ಯದಲ್ಲಿ 10 ಕೃಷಿ ವಲಯಗಳಿದ್ದು, ಬೀದರ್ ವಲಯ-1 (ಅರೆ ಮಲೆನಾಡು)ರಲ್ಲಿದೆ. ಈಗಾಗಲೇ ವಲಯ-2ರಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಡಿ ಮೂರು ಕೃಷಿ ಕಾಲೇಜು ಮತ್ತು ಒಂದು ಕೃಷಿ ಇಂಜಿನಿಯರಿಂಗ್ ಕಾಲೇಜಿದೆ. ಆದರೆ ಬೀದರ್ನಿಂದ ದೂರ ಇರುವುದರಿಂದ ಬಡ ಕೃಷಿಕರ ಮಕ್ಕಳ ಅಧ್ಯಯನಕ್ಕೆ ತೊಡಕಾಗಿದೆ. ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರಗಳಿದ್ದು, ಕೃಷಿಯಲ್ಲಿನ ಆಧುನಿಕ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸಲು ಕಾಲೇಜಿನ ಅಗತ್ಯವಿದೆ. ಅಲ್ಲದೆ ರಾಯಚೂರು ಕೃಷಿ ವಿವಿ ಅಧಿಕಾರಿಗಳ ತಂಡ ಬೀದರ್ನಲ್ಲಿ ಕೃಷಿ ಕಾಲೇಜು ಆರಂಭಿಸುವ ಕುರಿತು ಸಕರ್ಾರಕ್ಕೆ ವರದಿ ಸಲ್ಲಿಸಿದ್ದು, ಬಜೆಟ್ನಲ್ಲಿ ಸಕಾರಾತ್ಮಕ ಸ್ಪಂದನೆ ಸಿಗಬೇಕೆಂಬುದು ರೈತರ ಒಕ್ಕೊರಲ ಒತ್ತಾಯವಾಗಿದೆ.

    ಹಿಂದುಳಿದ ಬೀದರ್ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ನಲ್ಲಿ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಗಮನಕ್ಕೆ ತರಲಾಗಿದೆ. ಬಿಎಸ್ಸೆಸ್ಕೆಗೆ ಆರ್ಥಿಕ ನೆರವು, ಕೃಷಿ ಕಾಲೇಜು ಮಂಜೂರು ಸೇರಿ ವಿವಿಧ ಬೇಡಿಕೆಗಳನ್ನು ಬಜೆಟ್ನಲ್ಲಿ ಸ್ಪಂದಿಸುವಂತೆ ಮನವಿ ಮಾಡಲಾಗಿದೆ.
    | ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ

    ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬೀದರ್ ಸಹಕಾರ ಸಕ್ಕರೆ ಕಾಖರ್ಾನೆ ಪುನಶ್ಚೇತನಕ್ಕೆ ಅನುದಾನ ನೀಡಲಾಗುವುದು ಎಂದು ಹಿಂದಿನ ವಿಧಾನಸಭೆ ಚುನಾವಣೆ ಪ್ರಚಾರ ವೇಳೆ ಬಿಜೆಪಿ ನಾಯಕರು ನೀಡಿದ ಹೇಳಿಕೆ ಹುಸಿಯಾಗಿದೆ. ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ನಯಾಪೈಸೆ ಕೊಟ್ಟಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಖಾನೆ ಪುನಶ್ಚೇತನಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು.
    | ರಾಜಶೇಖರ ಪಾಟೀಲ್, ಶಾಸಕ

    ಗಡಿ ಜಿಲ್ಲೆ ಬೀದರ್ಗೆ ಕೃಷಿ ಕಾಲೇಜು ಮಂಜೂರು ಮಾಡಿ ಬಜೆಟ್ನಲ್ಲಿ ಘೋಷಿಸುವಂತೆ ಇತ್ತೀಚೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಬಹುದಿನಗಳ ಕನಸು ಈ ಬಾರಿ ಈಡೇರುವ ಸಾಧ್ಯತೆ ಇದೆ.
    | ಸೂರ್ಯಕಾಂತ ನಾಗಮಾರಪಳ್ಳಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts