More

    ಬೈಪಾಸ್ ನಿರ್ಮಾಣಕ್ಕೆ ವಿರೋಧ

    ತುರುವೇಕೆರೆ: ಪಟ್ಟಣದ ಹೊರವಲಯದಲ್ಲಿ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150ಎ ಬೈಪಾಸ್ ರಸ್ತೆ ವಿರೋಧಿಸಿ ಅರಳಿಕೆರೆ ಸೇರಿ ಹಲವು ಗ್ರಾಮಗಳ ನೂರಾರು ರೈತರು ಭಾನುವಾರ ಅರಳಿಕೆರೆ ಗೇಟ್ ಸಮೀಪ ಪ್ರತಿಭಟನೆ ನಡೆಸಿದರು.
    ರೈತ ಹಿತ ರಕ್ಷಣ ವೇದಿಕೆಯ ಅರಳಿಕೆರೆ ಶಿವಯ್ಯ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯು ಕೆ.ಬಿ.ಕ್ರಾಸ್​​ನಿಂದ ಚುಂಚನಹಳ್ಳಿ ಜಂಕ್ಷನ್‌ವರೆಗಿನ ರಸ್ತೆ ನಿರ್ಮಾಣ, ಅಗಲಿಕರಣ ಮಾಡುವ ಸಲುವಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದಾರೆ. ಅರಳಿಕೆರೆ ಸಮೀಪದಲ್ಲಿ ರೈತರ ಭೂಮಿಗಳಲ್ಲಿ ಬೈಪಾಸ್ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಟ್ಟಣದಿಂದ ಕೇವಲ ಒಂದು ಕಿ.ಮೀ ಅಂತರದಲ್ಲಿ ಅವೈಜ್ಞಾನಿಕವಾಗಿ ಬೈಪಾಸ್ ರಸ್ತೆ ಮಾಡಲು ಹೊರಟಿದೆ ಎಂದರು.
    ಬೈಪಾಸ್ ರಸ್ತೆ ನಿರ್ಮಾಣದಿಂದ ನೂರಾರು ರೈತರ ಫಲವತ್ತಾದ ತೆಂಗು, ಅಡಕೆ ತೋಟಗಳು ಸೇರಿ ನೂರಾರು ಎಕರೆ ಕೃಷಿ ಭೂಮಿ ಹೋಗಲಿದೆ. ನೂರಾರು ಕುಟುಂಬಗಳು ಬೀದಿಗೆ ಬೀಳುವಂತಾಗಲಿದೆ. ಬಹುತೇಕ ರೈತರು ಸಣ್ಣ ಹಿಡುವಳಿದಾರರಾಗಿದ್ದು ಕೃಷಿ ಜಮೀನು ಕಳೆದುಕೊಂಡು ನಿರ್ಗತಿಕರಾಗಿ ಬದುಕಬೇಕಾಗುತ್ತದೆ. ಭೂಮಿಯನ್ನು ನಂಬಿರುವ ರೈತರು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದು ರಸ್ತೆ ಅಭಿವೃದ್ಧಿಯ ನೆಪದಲ್ಲಿ ರೈತರಿಗೆ ತೊಂದರೆ ನೀಡಬಾರದು ಎಂದು ಒತ್ತಾಯಿಸಿದರು. ನೀರಾವರಿ, ಫಲವತ್ತಾದ ಭೂಮಿಯ ಜತೆ ಮಲ್ಲಾಘಟ್ಟ ಕೆರೆಯ ಅಚ್ಚುಕಟ್ಟು ಪ್ರದೇಶವಾಗಿದ್ದರಿಂದ ನೂರಾರು ಎಕರೆಯಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದೆ. ಗದ್ದೆ ಬಯಲಿನ ಪ್ರದೇಶದಲ್ಲಿ ದೊಡ್ಡದಾದ ಹಳ್ಳ, ತಗ್ಗು ಪ್ರದೇಶವಾಗಿದೆ. ಮಲ್ಲಾಘಟ್ಟ, ತುರುವೇಕೆರೆ ಕೆರೆ ನೀರು ಮಾಕೋನಹಳ್ಳಿ ಡ್ಯಾಮ್‌ಗೆ ಹರಿಯಲಿದೆ. ಬೈಪಾಸ್ ರಸ್ತೆಗೆ ಸೂಕ್ತವಾದ ಪ್ರದೇಶವಾಗಿಲ್ಲ. ಇಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ನೂರಾರು ಕೋಟಿ ಹಣ ವ್ಯಹಿಸಬೇಕಾಗುತ್ತದೆ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಅರಳಿಕೆರೆ ಶಿವಯ್ಯ ಹೇಳಿದರು.

    ಸರ್ಕಾರದ ರದ್ದುಪಡಿಸಲಿ: ಕೃಷಿ ಭೂಮಿಯ ಬೆಲೆ ಗಗನಕ್ಕೆರಿದ್ದು ರೈತರಿಗೂ ನೂರಾರು ಕೋಟಿ ಪರಿಹಾರ ನೀಡಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮತ್ತೊಮ್ಮೆ ಸರ್ವೇ ಮಾಡಿ ಪಟ್ಟಣದ ರಸ್ತೆಯನ್ನೆ ವೈಡನ್ ಮಾಡಿ ರೈತರಿಗೆ ಮಾರಕವಾಗಿರುವ ಬೈಪಾಸ್ ರಸ್ತೆಯನ್ನು ಸರ್ಕಾರ ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಶಾಸಕರಿಗೂ, ಸಂಸದರಿಗೂ ರಾಜ್ಯದ ಮಂತ್ರಿಗಳಿಗೂ ಮನವಿ ಸಲ್ಲಿಸಲಾಗುವುದು. ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಮುಂದುವರಿದರೆ ಸಾವಿರಾರು ರೈತರು ಸೇರಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಅರಳಿಕೆರೆ ಶಿವಯ್ಯ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts