More

    ಬೈಕ್ ಕೊಡಿಸಲಿಲ್ಲವೆಂದು ಯುವಕ ಆತ್ಮಹತ್ಯೆ

    ಕೊಳ್ಳೇಗಾಲ: ಬೈಕ್ ತೆಗೆದುಕೊಟ್ಟಿಲ್ಲ ಎಂಬ ಕಾರಣಕ್ಕೆ ಮನನೊಂದು ಯುವಕ ತಾಲೂಕಿನ ಗುಂಡಾಲ್ ಜಲಾಶಯದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಹನೂರು ತಾಲೂಕು ಕಣ್ಣೂರು ಗ್ರಾಮದ ಅರುಳಪ್ಪ ಎಂಬುವರ ಮಗ ಪ್ರಸಾದ್(27) ಆತ್ಮಹತ್ಯೆ ಮಾಡಿಕೊಂಡವನು. ಈತ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಗ್ರಾಮದಲ್ಲಿ ನಡೆದ ಗ್ರಾಮ ದೇವತೆ ಹಬ್ಬಕ್ಕೆ ಬಂದಿದ್ದನು. ಈ ವೇಳೆ ಪೋಷಕರಿಗೆ ಬೈಕ್ ಕೊಡಿಸುವಂತೆ ಒತ್ತಾಯಿಸಿದ್ದಾನೆ. ಮನೆಯವರು ಬೈಕ್ ಕೊಡಿಸಲು ಸಮ್ಮತಿಸಿದ ಕಾರಣ ಬೇಸತ್ತು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
    ಈ ಸಂಬಂಧ ಮೃತನ ತಂದೆ ಅರುಳಪ್ಪ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತದೇಹವನ್ನು ಜಲಾಶಯದ ನೀರಿನಿಂದ ಹೊರತೆಗೆದು ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts