More

    ಬೇಡಿಕೆ ಸಲ್ಲಿಸಿದವರಿಗೆಲ್ಲ ಜಾಬ್ ಕಾರ್ಡ್​

    ಕಲಬುರಗಿ: ಚುನಾಯಿತ ಪ್ರತಿನಿಧಿ, ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಬೇಡಿಕೆ ಸಲ್ಲಿಸಿದ ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ವಾರದಲ್ಲೇ ಜಾಬ್ ಕಾರ್ಡ್​ ವಿತರಿಸಲಾಗುವುದು, ಜತೆಗೆ ಕೂಲಿ ಮೊತ್ತವನ್ನು ಅವರ ಖಾತೆಗೆ ಜಮೆ ಮಾಡಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
    ಹೊನ್ನಕಿರಣಗಿ ಮತ್ತು ತಿಳಗೂಳ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿಯಡಿ ಕೈಗೆತ್ತಿಕೊಂಡಿರುವ ಗೋಕಟ್ಟಾ, ಹೊಲದ ಬದು ಮೊದಲಾದ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಕಿ ಇದ್ದ 1861 ಕೋಟಿ ರೂ. ಚುಕ್ತಾ ಮಾಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಹಣ ಬರಲಿದೆ ಎಂದರು.
    ಕರೊನಾ ಲಾಕ್ಡೌನ್ನಿಂದಾಗಿ ಬೇರೆ ರಾಜ್ಯಗಳಿಗೆ ಹೋಗಿ ತಮ್ಮ ತಮ್ಮ ಊರುಗಳಿಗೆ ವಾಪಸಾದ ಎಲ್ಲರಿಗೂ ಕೆಲಸ ನೀಡುವುದು. ಜತೆಗೆ ದಿನದ ಕೂಲಿ ದರವನ್ನು 275 ರೂ.ಗೆ ಹೆಚ್ಚಿಸಲಾಗಿದೆ. ಇನ್ನಷ್ಟು ಹೆಚ್ಚಿಸಲು ಚಿಂತನೆ ನಡೆದಿದೆ. ನರೇಗಾ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮಾದರಿ ಕೆಲಸ ನಡೆದಿದೆ. ಹೆಚ್ಚಿನವರಿಗೆ ಕೆಲಸ ನೀಡಿದ್ದರಲ್ಲಿ ಕಲಬುರಗಿ ಮತ್ತು ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಜನರು ಖಾತ್ರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

    ಕಾಂಗ್ರೆಸ್ ಬೇಸ್ ಎಲ್ಲಿದೆ ನೋಡಿಕೊಳ್ಳಲಿ
    ಗ್ರಾಪಂಗಳಿಗೆ ಆಡಳಿತ ಸಮಿತಿಗಳನ್ನು ರಚಿಸಿ ಬಿಜೆಪಿ ತನ್ನ ಪಕ್ಷಕ್ಕೆ ಬೇಸ್ ಮಟ್ಟದ ಕಾರ್ಯಕರ್ತರನ್ನು ರೂಪಿಸಲು ರಾಜಕೀಯ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ, ನಮ್ಮ ಬೇಸ್ ಇರುವುದರಿಂದಲೇ ಅಧಿಕಾರದಲ್ಲಿದ್ದೇವೆ. 25 ಸಂಸದರಿದ್ದಾರೆ. ಕಾಂಗ್ರೆಸ್ನವರು ತಮ್ಮ ಬೇಸ್ ಎಲ್ಲಿದೆ ಎಂದು ಹುಡುಕಿಕೊಳ್ಳಿ ಎಂದು ಕಿಚಾಯಿಸಿದರು. ಗ್ರಾಪಂಗಳ ಅವಧಿ ಮುಗಿದಿದ್ದರೂ ಕರೊನಾ ಗದ್ದಲ ಇರುವುದರಿಂದ ಚುನಾವಣೆ ಬೇಡವೆಂದು ಆಯೋಗ ನಿರ್ಧರಿಸಿದೆ. ಹೀಗಾಗಿ ಸದ್ಯಕ್ಕಿರುವ ಸದಸ್ಯರನ್ನು ಮುಂದುವರಿಸಬೇಕೇ? ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕೇ? ಅಥವಾ ಗ್ರಾಮ ಸಮಿತಿಗಳನ್ನು ರಚಿಸಬೇಕೇ ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು. ಸಿಎಂ ಪುತ್ರ ವಿಜಯೇಂದ್ರ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪುತ್ರ ಯತೀಂದ್ರ ಮೈಸೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈಗಲೂ ಕಾಂಗ್ರೆಸಿಗರು ಯತೀಂದ್ರ ಅನ್ನುವ ಬದಲಿಗೆ ವಿಜಯೇಂದ್ರ ಎಂದಿರಬಹುದು ಎಂದು ಟಾಂಗ್ ನೀಡಿದರು.

    ಬಿಜೆಪಿಯವರು ಒಂದೆಡೆ ಸೇರಿ ಊಟ ಮಾಡಿದ್ದೇ ದೊಡ್ಡ ಸುದ್ದಿಯಾಗಿದೆ. ಕಾಂಗ್ರೆಸ್ನಲ್ಲಿ ಬಡಿದಾಡಿಕೊಂಡರೂ ಸುದ್ದಿಯಾಗಲ್ಲ ಎನ್ನುವ ಮೂಲಕ ಅದನ್ನು ಯಾಕೆ ಅಷ್ಟೊಂದು ದೊಡ್ಡದು ಮಾಡುತ್ತೀರಿ? ಬಿಜೆಪಿ ಶಾಸಕರು ಸೇರಿ ಊಟ ಮಾಡಿರುವುದು ಮತ್ತು ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ.
    | ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts