More

    ಬೇಡಿಕೆ ಈಡೇರಿಸದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ

    ಸವದತ್ತಿ: ರೈತರ ಶೋಷಣೆ ಹಾಗೂ ವಿವಿಧ ಬೇಡಿಕೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರವೇ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಡಿ.15 ರಂದು ನೇಸರಗಿ ಗ್ರಾಮದ ಹತ್ತಿರ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಬಿ.ವೈ.ಬಿಜ್ಜೂರ ಎಚ್ಚರಿಕೆ ನೀಡಿದರು.

    ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖಾಸಗಿ ಬ್ಯಾಂಕ್ ಮತ್ತು ಫೈನಾನ್ಸ್‌ಗಳಿಂದ ಖಾಲಿ ಚೆಕ್ ಸಂಗ್ರಹಿಸಿ ರೈತನ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ ಹಿಂಸಿಸುವ ಪ್ರವೃತ್ತಿ ನಡೆದಿದೆ. ಇದು ರೈತರನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತಿದೆ. ಕಾರಣ ರೈತರ ಮೇಲಿರುವ ದಾವೆ ಹಿಂಪಡೆದು ಚೆಕ್‌ಬೌನ್ಸ್ ಪ್ರಕರಣ ದಾಖಲಿಸದಂತೆ ಕ್ರಮವಹಿಸಬೇಕು. ಖಾಲಿ ಚೆಕ್‌ಗಳ ಮೇಲೆ ಸಹಿ ಹಾಕುವ ವ್ಯವಸ್ಥೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆ ಹಿಂಪಡೆಯಬೇಕು. ಗಾಯರಾಣ ಜಾಗದಲ್ಲಿ ನಿರ್ಮಿಸಿರುವ ನಿವೇಶನಗಳನ್ನು ಸರ್ಕಾರ ಸಕ್ರಮಗೊಳಿಸಿ ಹಕ್ಕು ಪತ್ರ ವಿತರಿಸಬೇಕು. ಜತೆಗೆ ಮೂಲ ಸೌಕರ್ಯ ಒದಗಿಸಬೇಕು. ರೈತರ ಅಲ್ಪಾವಧಿ, ದೀರ್ಘಾವಧಿ ಟ್ರ್ಯಾಕ್ಟರ್ ಮತ್ತು ವಿವಿಧ ಯಂತ್ರೋಪಕರಣಗಳ ಸಾಲವನ್ನು ಷರತ್ತು ವಿಧಿಸದೆ ಮನ್ನಾ ಮಾಡಬೇಕು. ಘಟಪ್ರಭಾ ರೈಲು ನಿಲ್ದಾಣದಿಂದ ಯಲ್ಲಮ್ಮ ದೇವಸ್ಥಾನದ ಮಾರ್ಗವಾಗಿ ಹುಬ್ಬಳ್ಳಿಗೆ ರೈಲು ಮಾರ್ಗ ಮಂಜೂರು ಮಾಡಬೇಕು ಹಾಗೂ ಮಹದಾಯಿ, ಕಳಸಾ ಬಂಡೂರಿ ತಿರುವು ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು. ಸುಜಾತಾ ಗೊಡಚಿ, ಕಾಳಮ್ಮ ಪತ್ತಾರ, ಸಿದ್ದಪ್ಪ ಪಟ್ಟದಕಲ್ಲ, ಸಿದ್ದಪ್ಪ ಚಂದರಿಗಿ, ಮಹಾಂತೇಶ ಮುತವಾಡ, ಕಸ್ತೂರೆವ್ವ ಕಿತ್ತೂರ, ಪಾರ್ವತಿ ಯಮನೂರ, ಹಣಮಂತ ಹಾಸಟ್ಟಿ, ಇಂದ್ರವ್ವ ತಳವಾರ, ಶಂಕರ ಬಗನಾಳ, ಾತಿಮಾ ಕೊಂದನ್ನವರ್, ನೀಲವ್ವ ದೂಳವ್ವಗೋಳ, ಪ್ರಕಾಶ ನರಗುಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts