More

    ಬೆಳೆ ವಿಮೆ ಲಾಭ ಪಡೆಯಿರಿ

    ನೇಸರಗಿ: ರೈತರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಬೆಳೆ ವಿಮೆ ಸೌಲಭ್ಯ ಆರಂಭಿಸಿದೆ. ಲಾಭ ಪಡೆಯಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಕರೆ ನೀಡಿದರು.

    ಕೃಷಿ ಇಲಾಖೆಯಿಂದ ಹಮ್ಮಿಕೊಂಡಿರುವ 2021 ನೇ ಸಾಲಿನ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯ ಬೆಳೆ ವಿಮೆ ಜಾಗೃತಿ ವಾಹನಕ್ಕೆ ಇತ್ತೀಚೆಗೆ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ಬೀಜ, ರಸಗೊಬ್ಬರ ಸರಿಯಾಗಿ ದೊರೆತರೂ ಸಹ, ಪ್ರಕೃತಿವಿಕೋಪ, ಕೀಟ ರೋಗಬಾಧೆ ಸಮಸ್ಯೆಯಾದಲ್ಲಿ ರೈತರಿಗೆ ಬೆಳೆ ವಿಮೆ ಆರ್ಥಿಕವಾಗಿ ನೆರವಾಗುತ್ತದೆ ಎಂದರು.

    ತಾಲೂಕು ಕೃಷಿ ಸಹಾಯಕ ನಿರ್ದೇಶಕ ಬಸವರಾಜ ದಳವಾಯಿ ಮಾತನಾಡಿ, ಬ್ಯಾಂಕ್, ಸಹಕಾರಿ ಸಂಘ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರು ಪ್ರಸಕ್ತ ಸಾಲಿನಿಂದ ವಿಮೆ ಯೋಜನೆಗೆ ಒಳಪಡುತ್ತಾರೆ ಎಂದರು. ಬಿಜೆಪಿ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಬಿ.ಎಫ್.ಕೊಳದೂರ, ಶಂಕರ ತಿಗಡಿ, ಅಶೋಕ ವಕ್ಕುಂದ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆರ್.ವೈ.ಕುಂಬಾರ, ಬಿ.ಎಸ್.ಚಿಕ್ಕಮಠ, ಸಹಾಯಕ ಕೃಷಿ ಅಧಿಕಾರಿ ಸಿ.ಬಿ.ಬಂದಕನವರ, ಎಂ.ಜಿ.ಕಳಸಪ್ಪನವರ, ಪಿಕೆಪಿಎಸ್ ನಿರ್ದೇಶಕ ಅಡಿವೆಪ್ಪ ಹೊಸಮನಿ, ಮಹಾಂತೇಶ ಮೊಹರೆ, ಶಂಕರ ಹುಣಶ್ಯಾಳ, ಗದಗಯ್ಯ ಹಿರೇಮಠ, ಈರಪ್ಪ ಕುಂಟಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts