More

    ಬೆಳೆ ವಿಮೆ ಪರಿಹಾರ: ಶೀಘ್ರ ಇತ್ಯರ್ಥಕ್ಕೆ ಡಿಸಿ ತಾಕೀತು

    ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಜಿಲ್ಲೆಯಲ್ಲಾದ ಅಕಾಲಿಕ ಮಳೆಯಿಂದ ಶೇ.75 ಅಧಿಕ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು,ತ್ವರಿತ ಗತಿಯಲ್ಲಿ ಬೆಳೆ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಶೀಘ್ರಬೆಳೆ ವಿಮೆ ಪರಿಹಾರವನ್ನು ಕೊಡಿಸುವಂತೆ ರೈತರು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರನ್ನು ಒತ್ತಾ ಯಿಸಿದರು. ಡಿಸಿ ಕಚೇರಿಯಲ್ಲಿ ಕರೆದಿದ್ದ ಕೃಷಿ ಮತ್ತಿತರ ಇಲಾಖೆಗಳು ಹಾಗೂ ವಿಮೆ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಬೆಳೆ ವಿಮೆ ಇತ್ಯರ್ಥ ಕುರಿತಂತೆ ಚರ್ಚೆ ನಡೆಯಿತು.
    2016ರಿಂದ ಈವರೆಗೂ ಸರಿಯಾದ ರೀತಿಯಲ್ಲಿ ವಿಮಾ ಕಂಪನಿಗಳು ಪರಿಹಾರ ನೀಡಿಲ್ಲ. ಆಧಾರ್ ಕಾರ್ಡ,ಬ್ಯಾಂಕ್ ಖಾತೆ ಸರಿಯಿ ಲ್ಲವೆಂದು ವಿಮಾ ಕಂಪನಿಗಳು ಸಬೂಬು ಹೇಳಿ ಅಲೆದಾಡಿಸುತ್ತಿದ್ದಾರೆ. ಬೆಳೆ ವಿಮೆ ಕಟ್ಟಲು ದಿನಾಂಕ ನಿಗದಿ ಮಾಡುತ್ತಾರೆ ವಿನಾ,ಪರಿ ಹಾರ ವಿತರಣೆಗೆ ಮಾತ್ರ ಯಾಕೆ ದಿನಾಂಕವನ್ನು ನಿಗದಿ ಮಾಡುತ್ತಿವಿಲ್ಲವೆಂದು ಪ್ರಶ್ನಿಸಿದ ರೈತರು, ಪರಿಹಾರ ವಿತರಣೆಗೂ ನಿರ್ದಿಷ್ಟ ದಿನಾಂಕವನ್ನು ವಿಮಾ ಕಂಪನಿಗಳು ನಿಗದಿಪಡಿಸಬೇಕೆಂದು ಆಗ್ರಹಿಸಿದರು.
    ರೈತರ ಅಭಿಪ್ರಾಯವನ್ನು ಆಲಿಸಿದ ಡಿಸಿ,ತಾಳ್ಮೆಯಿಂದ ರೈತರಿಗೆ ಸರಿಯಾದ ಮಾಹಿತಿ ನೀಡ ಬೇಕೆಂದು ವಿಮಾ ಕಂಪನಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಶೀಘ್ರದಲ್ಲಿಯೇ ವಿಮಾ ಪರಿಹಾರ ವಿತರಣೆಗೆ ಅಗತ್ಯ ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು.
    ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮಾತನಾಡಿ,2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 76538 ಜನ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೋಂದಾಯಿಸಿದ್ದಾರೆ. ಚಳ್ಳಕೆರೆ ತಾಲೂಕಿನಲ್ಲಿ 39 ಗ್ರಾಪಂಗಳಿಗೆ, ಹಿರಿಯೂ ರು-33,ಚಿತ್ರದುರ್ಗ-28,ಮೊಳಕಾಲ್ಮೂರು-11 ಹಾಗೂ ಹೊಸದುರ್ಗ ತಾಲೂಕಿನ 4 ಹೋಬಳಿಗಳ ಸಹಿತ 50577 ಫಲಾನುಭವಿಗಳಿಗೆ 7123.08 ಲಕ್ಷ ರೂ.ವಿಮಾ ಪರಿಹಾರ ಪಾವತಿಯಾಗಿದೆ.
    ಇಳುವರಿ ಆಧಾರದಡಿ 459 ಫಲಾನುಭವಿಗಳಿಗೆ 61.12 ಲಕ್ಷ ರೂ.ವಿಮಾ ಪರಿಹಾರ ನೀಡಲಾಗಿದೆ. 2019-20ನೇ ಸಾಲಿನ ಹಿಂಗಾರು ಹಂಗಾಮಿಗೆ 16385 ರೈತರು ಹಾಗೂ ಬೇಸಿಗೆ ಹಂಗಾಮಿಗೆ 39 ರೈತರು ನೋಂದಾಯಿಸಿದ್ದು,ಪರಿಹಾರ ಘೋಷಣೆಯಾ ಗಬೇಕಿದೆ. ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ 85912 ರೈತರು ನೋಂದಾಯಿಸಿದ್ದಾರೆಂದರು.
    ಬಿತ್ತನೆ ಸಮಯದಲ್ಲಿ ಕಳಪೆ ಈರುಳ್ಳಿ ಬಿತ್ತನೆ ಬೀಜ ದೂರುಗಳಿಗೆ ಸ ಂಬಂಧಿಸಿದಂತೆ ಸ್ಯಾಂಪಲ್ಸ್‌ಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದ ಬಳಿಕ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ ಹೇಳಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ,ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ, ಜಿಲ್ಲಾ ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಜು,ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಓಂಕಾರಪ್ಪ ಹಾಗೂ ಲೀಡ್‌ಬ್ಯಾಂಕ್ ಮತ್ತಿತರ ಅಧಿಕಾರಿಗಳು, ರೈತರ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts