More

    ಬೆಳೆ ವಿಮೆ ಪರಿಹಾರ ದುರುಪಯೋಗ,ಡಿಸಿಯಿಂದ ತನಿಖಾ ವರದಿ

    ಚಿತ್ರದುರ್ಗ: ಚಳ್ಳಕೆರೆ ತಾಲೂಕು ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಆಗಿರುವ ಅವ್ಯವಹಾರ ಕುರಿತ ಶಾಸಕ ಟಿ.ರಘುಮೂರ್ತಿ ಅವರ ಪ್ರಶ್ನೆಗೆ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಬುಧವಾರ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉತ್ತರಿಸಿದ್ದಾರೆ.
    ಪಿ.ಮಹದೇವಪುರ ಗ್ರಾಪಂ ವ್ಯಾಪ್ತಿಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂ ದಾಯಿತ ಖಾತೆದಾರರಿಗೆ ಪರಿಹಾರ ವಿತರಣೆ ಆದ ವ್ಯತ್ಯಾಸದ ಬಗ್ಗೆ ರೈತರು ದೂರು ನೀಡಿದ್ದರು.
    ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಚಳ್ಳಕೆರೆ ತಾಲೂಕಿನಲ್ಲಿ 68717 ಹೆಕ್ಟೇರ್‌ನ 14 ವಿವಿಧ ಅ ಧಿಸೂಚಿತ ಬೆಳೆಗಳಿಗೆ 44852 ರೈತರು ನೋಂದಾಯಿಸಿದ್ದರು. ಆದರೆ ತಾಲೂಕಿನ ಬೀಳು ಭೂಮಿ ಹಾಗೂ ಅಧಿಸೂಚಿತವಲ್ಲದ ಇತರೆ ಬೆ ಳೆಗಳ 80 ಪ್ರಕರಣಗಳಲ್ಲಿ 67 ಲಕ್ಷ ರೂ.ಅಧಿಕ ಪರಿಹಾರ ಹಣ ದುರುಪಯೋಗವಾಗಿದೆ.
    ಮೂಲ ಖಾತೆದಾರರ ಬದಲಿಗೆ ಬೇರೆ ನೋಂದಣಿ ಮಾಡಿಸಿದ 2 ಪ್ರಕರಣಗಳಲ್ಲಿ 1.90 ಲಕ್ಷ ರೂ.ಪರಿಹಾರ ವಿತರಿಸಲಾಗಿದ್ದು, ಈ ಕು ರಿತಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ತನಿಖಾ ವರದಿ ನೀಡಿದ್ದಾರೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
    ಠಾಣೆ ಮೇಲ್ದರ್ಜೆಗೇರಿಸಲು ಒತ್ತಾಯ
    ಚಳ್ಳಕೆರೆ ತಾಲೂಕು ಪರುಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿ ಜಾಜೂರು ಉಪ ಪೊಲೀಸ್ ಠಾಣೆಯನ್ನು ಮೇಲದ್ದರ್ಜೆಗೇರಿಸುವ ಕುರಿತಂತೆ ಟಿ.ರಘಮೂರ್ತಿ ಅವರು ಒತ್ತಾಯಿಸಿದ್ದಾರೆ. ಈ ಕುರಿತ ಅವರ ಪ್ರಶ್ನೆಗೆ, ಉಪಠಾಣೆಯಲ್ಲಿರುವ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸುವುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಭರವಸೆ ನೀಡಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts