More

    ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

    ಚಿತ್ರದುರ್ಗ:ಹಿಂಗಾರು ಕಡಲೆ ಬೆಳೆ ವಿಮೆ ಪರಿಹಾರಕ್ಕೆ ಒತ್ತಾಯಿಸಿ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಮುಂದೆ ಬುಧವಾರ ಪ್ರತಿಭಟಿಸಿ ದ ರು. 2019-20ನೇ ಸಾಲಿನ ಹಿಂಗಾರು ಕಡೆಲೆ ಬೆಳೆಗಳು ಸಂಪೂರ್ಣ ಹಾಳಾಗಿದ್ದು,ಈವರೆಗೂ ಯಾವುದೇ ಬೆಳೆ ನಷ್ಟಕ್ಕೆ ವಿಮಾ ಪರಿಹಾರ ಬಾರದೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 2020-2021ನೇ ಸಾಲಿನ ಹಿಂಗಾರಲ್ಲಿ ಕಡಲೆ ಬಿತ್ತನೆಯಾಗಿದ್ದರೂ ವಿಮೆ ಕಂಪನಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಕಾಳಜಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಚಂಡಮಾರುತದಿಂದಾಗಿ ಈ ವರ್ಷದ ಹಿಂಗಾರಲ್ಲಿ ಕಡಲೆ,ಈರುಳ್ಳಿ ಇನ್ನು ಮುಂತಾದ ಬೆಳೆಗಳು ಹಾಳಾಗಿವೆ. ಆದರೂ ಕೃಷಿ,ತೋಟ ಗಾರಿಕೆ ಅಧಿಕಾರಿಗಳು ಸ್ಥಳ ಪರಿಶೀಲಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯರೈತ ಸಂಘ(ಹುಚ್ಚವ್ವನಹಳ್ಳಿ ಮಂಜುನಾಥ್)ಜಿಲ್ಲಾಧ್ಯಕ್ಷ ಇ.ಎನ್.ಲಕ್ಷ್ಮೀಕಾಂತ್,ಪ್ರಮುಖರಾದ ಜಿ.ಬಿ.ಪಾಪಣ್ಣ,ತಿಪ್ಪೇಸ್ವಾಮಿ,ರಾಜೇಂದ್ರ ರೆಡ್ಡಿ,ಲೋಕೇಶ್,ಎಸ್.ಬಿ ಸಜ್ಜನಕೆರೆ,ನಿಂಗಲ್ ಪಾಪಣ್ಣ,ಮಲ್ಲಿಕಾರ್ಜುನ್,ಸಾಗರ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts