More

    ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಖ್ಯಮಂತ್ರಿ ಯಾಕಾಗಬಾರದು? ಶಿವಾನಂದ ಗುರೂಜಿ

    ಲಕ್ಷ್ಮೀ ಹೆಬ್ಬಾಳಕರ್ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ ಎಂದ ಗುರೂಜಿ

    ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಾಮಾಜಿಕ ಕಳಕಳಿಯಿದೆ. ಸಮಾಜಕ್ಕಾಗಿಯೇ ನಿರಂತರ ಕೆಲಸ ಮಾಡುವವರು. ಕಳೆದ 75 ವರ್ಷದಲ್ಲಿ ಆಗದ ಕೆಲಸವನ್ನು ಕ್ಷೇತ್ರದಲ್ಲಿ 5 ವರ್ಷದಲ್ಲಿ ಮಾಡಿ ತೋರಿಸಿದ್ದಾರೆ ಎಂದು ನಿಲಜಿಯ ಅಲೌಕಿಕ ಧ್ಯಾನಾಶ್ರಮದ ಶಿವಾನಂದ ಗುರೂಜಿ ಹೇಳಿದ್ದಾರೆ. ಶುಕ್ರವಾರ ಆಶ್ರಮಕ್ಕೆ ಭೇಟಿ ನೀಡಿದ್ದ ಸಚಿವರನ್ನು ಸತ್ಕರಿಸಿ ಗುರೂಜಿ ಆಶಿರ್ವಚನ ನೀಡಿದರು. ಬೆಳಗಾವಿ ಜಿಲ್ಲೆಯಲ್ಲಿ ಒಂದೂ ಗೋಶಾಲೆ ಇಲ್ಲದಿದ್ದ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮೊದಲ ಬಾರಿಗೆ ಗೋಶಾಲೆಗೆ ಅನುದಾನ ಕೋಟ್ಟರು. ಇದರಿಂದ ಇಲ್ಲಿ ಮೊದಲ ಗೋಶಾಲೆ ಆರಂಭವಾಯಿತು. ಈ ಆಶ್ರಮದ ಬೆಳವಣಿಗೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಶಾಸಕರಲ್ಲದ ಸಂದರ್ಭದಲ್ಲೂ ಆಶ್ರಮಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಗುರೂಜಿ ಪ್ರಶಂಸಿಸಿದರು. ನಮ್ಮ ಗುರುಗಳು ಈ ಆಶ್ರಮ ಉದ್ಘಾಟನೆ ವೇಳೆ ಇಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ಕರ್ನಾಟಕದ ಭಾವಿ ಮುಖ್ಯಮಂತ್ರಿ ಲಕ್ಷ್ಮೀ ಹೆಬ್ಬಾಳಕರ್ ಎಂದು ಹೇಳಿದ್ದರು. ಇಂದು ಮಂತ್ರಿಯಾಗಿದ್ದಾರೆ. ಅವರು ಮುಖ್ಯಮಂತ್ರಿ ಯಾಕಾಗಬಾರದು? ಅವರಿಗೆ ಗುರು ಆಶಿರ್ವಾದವಾಗಿದೆ ಎಂದು ಅವರು ಪ್ರಶ್ನಿಸಿದರು. ಸದಾ ನಾನು ನಿಮ್ಮ ಮನೆ ಮಗಳು ಎನ್ನುತ್ತಾರೆ. ನಮ್ಮ ಮನೆ ಮಗಳು ಮಂತ್ರಿಯಾಗಿದ್ದರಿಂದ ನಾವೆಲ್ಲ ಸಂತೋಷ ಪಡಬೇಕು. ರಾಜಕೀಯ ವ್ಯಕ್ತಿಯಾದರೂ ಅವರಲ್ಲಿ ತುಂಬಿರುವ ಭಕ್ತಿಗೆ ನಾವು ತಲೆಭಾಗಬೇಕು. ಈ ಆಶ್ರಮದಲ್ಲಿ ಏನೇ ಆದರೂ ಅವರಿಂದಲೇ ಆಗುತ್ತದೆ. ಈ ಆಶ್ರಮ ಅವರದ್ದೇ, ಇಲ್ಲಿನ ಎಲ್ಲ ಬೆಳವಣಿಗೆಗಳೂ ಅವರಿಗೇ ಸಲ್ಲಬೇಕು ಎಂದು ಗುರೂಜಿ ಹೇಳಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಆಶ್ರಮದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು. 

    Related articles

    Share article

    Latest articles