More

    ಬೆಳಗಾವಿಯಲ್ಲಿ ನ್ಯಾಯವಾದಿಗಳ ಗಲಾಟೆ?

    ಬೆಳಗಾವಿ: ಬ್ರಿಟಿಷರ ಕಾಲದಿಂದಲೂ ಚಾಲ್ತಿಯಲ್ಲಿರುವ ರಾಜ್ಯದ ಅತ್ಯಂತ ಪ್ರತಿಷ್ಠಿತ ಹಳೆಯ ಬೆಳಗಾವಿ ಜಿಲ್ಲಾ ವಕೀಲರ ಸಂಘಗಳಲ್ಲಿ ಒಂದಾಗಿರುವ ಸಂಘದ ಆವರಣದಲ್ಲಿ ನ್ಯಾಯವಾದಿಗಳು ಕುಳಿತು ಚರ್ಚೆ ನಡೆಸುವಾಗ, ಆಕಸ್ಮಿಕವಾಗಿ ನಡೆದ ಮಾತಿನ ಚಕಮಕಿ, ವಿಕೋಪಕ್ಕೆ ತಿರುಗಿ ಎಳೆದಾಟ, ಗಲಾಟೆ ಮಂಗಳವಾರ ನಡೆದಿದೆ ಎಂದು ಕೋರ್ಟ್ ಆವರಣದ ಮೂಲಗಳು ತಿಳಿಸಿವೆ.

    ಈ ಗಲಾಟೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ನ್ಯಾಯವಾದಿಗಳು ಬೇಸರ ವಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು. ಕಕ್ಷಿದಾರರಿಗೆ ನ್ಯಾಯಕೊಡಿಸಬೇಕಾದ ನಾವು ಹೀಗೆ ಜಗಳವಾಡುವುದು ಸರಿಯಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಷಯಕ್ಕಾಗಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.

    ಈ ಕುರಿತು ರಾಜ್ಯ ವಕೀಲರ ಸಂಘದ ಅಧ್ಯಕ್ಷ ವಿಶಾಲ ರಘು ಅವರನ್ನು ಮಾತನಾಡಿಸಿದಾಗ, ವಕೀಲ ವೃತ್ತಿಯೂ ಎಲ್ಲ ವೃತ್ತಿಗಳಲ್ಲಿ ಪ್ರಮುಖವಾಗಿದ್ದು, ನ್ಯಾಯಾಂಗ ಇಲಾಖೆ ವ್ಯಾಪ್ತಿಗೆ ಒಳಪಡುವ ನಮ್ಮ ವಕೀಲರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗಿಡಬೇಕು.

    ಕೋರ್ಟ್ ಆವರಣಕ್ಕೆ ಬಂದಾಗಲಾದರೂ ಸಹೋದರರಂತೆ ಕಾರ್ಯನಿರ್ವಹಿಸಬೇಕು. ಬಡ ಕಕ್ಷಿದಾರರಿಗೆ ನ್ಯಾಯ ಕೊಡಿಸುತ್ತ ವೃತ್ತಿ ಗೌರವ ಹೆಚ್ಚಿಸುವ ಕಾರ್ಯಗಳ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ವಿಚಾರಿಸಿದಾಗ ತಡರಾತ್ರಿಯವರೆಗೂ ನಮ್ಮಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts