More

    ಬೆಣಕಲ್ ಗ್ರಾಮದಲ್ಲಿ ಹಳೆ ಮೂರ್ತಿ ಸ್ಥಾಪಿಸಿ

    ಬಳ್ಳಾರಿ: ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಶ್ರೀ ದುರುಗಮ್ಮ ಹಾಗೂ ಶ್ರೀ ಮರಿಗಮ್ಮ ದೇವಿಯವರ ಹಳೆ ಮೂರ್ತಿಗಳನ್ನು ಯಥಾರೀತಿ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಇದಕ್ಕೂ ಮುನ್ನ ಗ್ರಾಮದಿಂದ ಬೃಹತ್ ರ್ಯಾಲಿ ಮೂಲಕ ಡಿಸಿ ಕಚೇರಿಗೆ ಆಗಮಿಸಿ ಎಡಿಸಿ ಮಂಜುನಾಥಗೆ ಮನವಿ ಸಲ್ಲಿಸಿದರು. ಗ್ರಾಮದ ವಿವಿಧ ಮುಖಂಡರು ಮಾತನಾಡಿ, ೧೨ವರ್ಷದ ಹಿಂದೆ ದೇವಸ್ಥಾನದ ಮೂರ್ತಿಗಳನ್ನು ನೆಲಸಮ ಮಾಡಲಾಗಿದ್ದು, ಇದೀಗ ನೂತನ ಮೂರ್ತಿಗಳೊಂದಿಗೆ ದೇವಸ್ಥಾನ ಉದ್ಘಾಟನೆಗೆ ಸಿದ್ಧತೆ ನಡೆದಿದೆ.

    ಗ್ರಾಮದ ಕೆಲವರು ಹಳೆ ಮೂರ್ತಿ ಪ್ರತಿಷ್ಠಾಪಿಸದೇ ಕಲ್ಲಿನ ಮೂರ್ತಿಗಳನ್ನು ಪ್ರತಿಷ್ಢಾಪಿಸಲು ಮುಂದಾಗಿದ್ದಾರೆ. ಹಳೆ ಮೂರ್ತಿಗಳು ಸಂಡೂರು ರಾಜವಂಶಸ್ಥರು ರಕ್ತಚಂದನದಿಂದ ತಯಾರಿಸಿದ ಮೂರ್ತಿಗಳಾಗಿದ್ದು, ಹಳೆ ಪರಂಪರೆ ಉಳಿಸುವುದಕ್ಕಾಗಿ ಹಳೆ ಮೂರ್ತಿಗಳನ್ನು ಮರಳಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.

    ಗ್ರಾಮಸ್ಥರಾದ ಟಿ.ಸುರೇಶ, ದುರುಗಣ್ಣ, ನಾಗಪ್ಪ, ರಾಮಜನೇಯಪ್ಪ, ಕೆ.ಮಲ್ಲಿ, ಚಂದ್ರಶೇಖರ ಸೇರಿ ಇತರರು ಇದ್ದರು. ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಶ್ರೀ ದುರುಗಮ್ಮ ಹಾಗೂ ಶ್ರೀ ಮರಿಗಮ್ಮ ದೇವಿಯವರ ಹಳೆ ಮೂರ್ತಿಗಳನ್ನು ಯಥಾರೀತಿ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಬಳ್ಳಾರಿ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts