More

    ಬೆಡ್​ಗಳೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

    ಕಲಬುರಗಿ: ಬಿಜೆಪಿ ಸರ್ಕಾರ ಕರೊನಾ ನಿಯಂತ್ರಿಸಲು ವಿಲವಾಗಿದ್ದರಿಂದ ಸೋಂಕಿತರ ಚಿಕಿತ್ಸೆ ಅನುವು ಮಾಡಿಕೊಡಲು ಕಾಂಗ್ರೆಸ್ನಿಂದ ಕೊಡುಗೆಯಾಗಿ ನೀಡುವ 450 ಪರಿಸರ ಸ್ನೇಹಿ ಬೆಡ್ಗಳನ್ನು ಜಿಲ್ಲಾಡಳಿತ ಸ್ವೀಕರಿಸದೆ ಇಲ್ಲದ ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿ ಮತ್ತು ಅವನ್ನು ಸ್ವೀಕರಿಸಿ ರೋಗಿಗಳಿಗೆ ಬಳಸಿಕೊಳ್ಳುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
    ಜಗತ್ ವೃತ್ತದಲ್ಲಿ ಕೆಲ ಬೆಡ್ಗಳನ್ನು ಹಾಕಿ ಅವುಗಳ ಮೇಲೆ ಮಲಗಿಕೊಂಡು ಪ್ರತಿಭಟಿಸುವ ಮೂಲಕ ಉತ್ತಮ ದರ್ಜೆ ಹಾಸಿಗೆಗಳನ್ನು ನೀಡಲು ಬೆಂಗಳೂರಿನಿಂದ ಕಳುಹಿಸಿಕೊಟ್ಟರು ಸ್ವೀಕರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
    ಕೋವಿಡ್ ಕೇರ್ ಸೆಂಟರ್ ಆರಂಭಿಸಿ ಈ ಬೆಡ್ಗಳನ್ನು ಬಳಸಿಕೊಳ್ಳಲಿ ಎಂಬ ಉದ್ದೇಶದಿಂದ ನೀಡಲಾಗಿದೆ. ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳ ಒತ್ತಡದಿಂದಾಗಿ ಇವನ್ನು ಇನ್ನೂ ಸ್ವೀಕರಿಸಿದೆ ರಾಜಕೀಯ ಮಾಡಲಾಗುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
    ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಿದೆ. ಜನರು ತೊಂದರೆ ಅನುಭವಿಸುತ್ತಿರುವುದು ಅರಿತು 650 ಬೆಡ್ ಖರೀದಿಸಿ ರಾಯಚೂರಿಗೆ 100 ಬೆಡ್ ರವಾನಿಸಲಾಗಿದೆ. ಕಲಬುರಗಿಗೆ 550 ಬೆಡ್ ಕಳುಹಿಸಲಾಗಿತ್ತು. ಅದರಲ್ಲಿ 100 ಬೆಡ್ಗಳನ್ನು ಬಳಸಿಕೊಂಡು ಚಿತ್ತಾಪುರದ ನಾಗಾವಿ ಬಳಿ ಕೋವಿಡ್ ಕೇರ್ ಕೇಂದ್ರವನ್ನು ಸ್ಥಾಪಿಸಿ, ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 450 ಬೆಡ್ಗಳನ್ನು ಜಿಲ್ಲಾಡಳಿತ ಸ್ವೀಕರಿಸಿಲ್ಲ ಎಂದು ಆರೋಪಿಸಿದರು.
    ತಕ್ಷಣವೇ ಉಸ್ತುವಾರಿ ಸಚಿವರು ನಾವು ನೀಡಿರುವ ಬೆಡ್ಗಳನ್ನು ಸ್ವೀಕರಿಸಲು ದೊಡ್ಡ ಮನಸ್ಸು ಮಾಡಬೇಕು. ಈ ಬೆಡ್ಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಿ, ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಬೇಕೆಂದು ಖರ್ಗೆ ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ನೆಲೋಗಿ, ಜಿಪಂ ಸದಸ್ಯರಾದ ಸಂತೋಷ ಪಾಟೀಲ್ ದಣ್ಣೂರ, ದಿಲೀಪ್ ಪಾಟೀಲ್, ಶಿವಾನಂದ ಪಾಟೀಲ್, ಅರುಣಕುಮಾರ ಪಾಟೀಲ್, ಯುವ ಕಾಂಗ್ರೆಸ್ ರಾಜ್ಯ ವಕ್ತಾರ ಚೇತನಕುಮಾರ ಗೋನಾಯಕ, ಜಿಲ್ಲಾಧ್ಯಕ್ಷ ಈರಣ್ಣ ಝಳಕಿ, ಪ್ರಚಾರ ಸಮಿತಿ ಅಧ್ಯಕ್ಷ ಜಗನ್ನಾಥ ಗೋಧಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾ ರಾಠೋಡ್, ಮುಖಂಡರಾದ ಸುಭಾಷ ರಾಠೋಡ, ಮಜರ್ ಖಾನ್, ಕಿರಣ ದೇಶಮುಖ, ಪ್ರವೀಣ ಹರವಾಳ, ಮಲ್ಲಿಕಾರ್ಜುನ ಹಲಕರ್ಟಿ , ರಾಜೀವ್ ಜಾನೆ, ವಾಣಿಶ್ರೀ ಸಗರಕರ್, ಪ್ರಕಾಶ ಪಾಟೀಲ್ ಅನೇಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts