More

    ಬೆಂಗಳೂರಲ್ಲಿ ಪಿಂಚಣಿ ವಂಚಿತರ ಧರಣಿ 14ಕ್ಕೆ

    ದಾವಣಗೆರೆ: ಹಳೆಯ ಪಿಂಚಣಿ ಯೋಜನೆ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ನಡೆಸುತ್ತಿರುವ ಪಾದಯಾತ್ರೆ ನೂರನೇ ದಿನವಾದ ಜ.14ರಂದು ಬೆಂಗಳೂರು ತಲುಪಲಿದ್ದು, ಎರಡು ದಿನವೂ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದೆ.
    ಅ.7ರಿಂದ ತುಮಕೂರು ಸಿದ್ಧಗಂಗಾ ಮಠದಿಂದ ಪಾದಯಾತ್ರೆ ಆರಂಭವಾಗಿದ್ದು, ಇದುವರೆಗೆ ಸಿಎಂ, ಸಚಿವರು ಹಾಗೂ ಎಂಎಲ್ಸಿ ಅವರಿಗೆ ಮನವಿ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಎಲ್ಲ ನೌಕರರು ಕುಟುಂಬ ಸದಸ್ಯರ ಜತೆಗೆ ಧರಣಿ ನಡೆಸಲು ನಿಶ್ಚಯಿಸಲಾಗಿದೆ ಎಂದು ತಾಲೂಕು ಗೌರವಾಧ್ಯಕ್ಷ ಹನುಮಂತರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರಾಜ್ಯದ 60 ಸಾವಿರ ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗೆ ಹಳೆಯ ಪಿಂಚಣಿ ಯೋಜನೆ ಹಾಗೂ ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಜಾರಿಗೊಳಿಸಬೇಕು. ಕಾಲ್ಪನಿಕ ವೇತನ ನೀಡಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ ನಮ್ಮ ನಡೆ ಬೆಂಗಳೂರು ಫ್ರೀಡಂ ಪಾರ್ಕ್ ಕಡೆ ಎಂಬ ಶೀರ್ಷಿಕೆಯಡಿ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ ಎಂದರು.
    2006ರ ಏ.1ರ ನಂತರ ನೇಮಕಗೊಂಡು ವೇತನ ಪಡೆಯುತ್ತ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಅದಕ್ಕೂ ಪೂರ್ವದಲ್ಲಿ ನೇಮಕಾತಿ ಹೊಂದಿ ನಂತರ ಅನುದಾನಕ್ಕೊಳಪಟ್ಟು ವೇತನ ಪಡೆಯುತ್ತಿರುವ ವೇಳೆ ಅಕಾಲಿಕ ನಿಧನರಾದಲ್ಲಿ ಹಾಗೂ ಸೇವಾ ನಿವೃತ್ತಿಯಾದಲ್ಲಿ ಪಿಂಚಣಿ ಸೌಲಭ್ಯ ಇಲ್ಲ. ಇದರಿಂದ ಅನೇಕ ಕುಟುಂಬಗಳಿಗೆ ಆರ್ಥಿಕ ಸೌಲಭ್ಯ ನಿಲುಕುತ್ತಿಲ್ಲ ಎಂದು ವಿಷಾದಿಸಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ದೊಡ್ಮನಿ ಕೆಂಚಪ್ಪ, ತಮ್ಮನಗೌಡ ಕೆರೂರು, ಎನ್. ಸಿದ್ಸದಪ್ಪ, ಸೌಭಾಗ್ಯಮ್ಮ, ದಾದಾಪೀರ್ ನವಿಲೇಹಾಳ್, ರುದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts