More

    ಬೀದಿ ದೀಪಗಳಿಗೆ ದುರಸ್ತಿ ಭಾಗ್ಯ!

    ಬೆಳಗಾವಿ: ಮಹಾನಗರದ ಬಹಳಷ್ಟು ಪ್ರದೇಶಗಳಲ್ಲಿ ರಾತ್ರಿ ವೇಳೆ ಬೀದಿ ದೀಪಗಳು ಉರಿಯದಿರುವುದಕ್ಕೆ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪಾಲಿಕೆ ಹಾಗೂ ಹೆಸ್ಕಾಂ ಅಧಿಕಾರಿಗಳು ಬೀದಿ ದೀಪಗಳನ್ನು ದುರಸ್ತಿಗೊಳಿಸುವುದಕ್ಕೆ ಆರಂಭಿಸಿದ್ದಾರೆ.

    ನಗರದ ಪ್ರಮುಖ ಪ್ರದೇಶಗಳಲ್ಲಿ ಬೀದಿ ದೀಪಗಳು ಬೆಳ ಗುತ್ತಿರಲಿಲ್ಲ. ದುರಸ್ತಿ ಗೊಳಿಸುವಂತೆ ಸಾರ್ವ ಜನಿಕರು ಪಾಲಿಕೆಗೆ ಕರೆ ಮಾಡಿದರೂ ತ್ವರಿತವಾಗಿ ದುರಸ್ತಿ ಕಾರ್ಯ ನಡೆಸುತ್ತಿರಲಿಲ್ಲ. ವಿಜಯವಾಣಿ ಪತ್ರಿ ಕೆಯು “ಸ್ಮಾರ್ಟ್​ ಸಿಟಿಯಲ್ಲೇ ಬೀದಿ ದೀಪ ಆಫ್​!’ ಎಂಬ ಶೀರ್ಷಿಕೆಯಡಿ ಸಮಸ್ಯೆ ಕುರಿತು ಭಾನುವಾರ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಬೀದಿ ದೀಪಗಳನ್ನು ದುರಸ್ತಿಗೊಳಿಸುವುದಕ್ಕೆ ಆರಂಭಿಸಿದ್ದಾರೆ.

    ಹೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಜಂಟಿಯಾಗಿ ಸೋಮವಾರ ನಗರದ ಕಾಕತಿ ವೇಸ್​, ಗಣಪತಿ ಗಲ್ಲಿ, ರಾಮದೇವ ಗಲ್ಲಿ, ಮಾರುತಿ ಗಲ್ಲಿ, ರಾಮಲಿಂಗಕಿಂಡ ಗಲ್ಲಿ, ಕಪಿಲೇಶ್ವರ ಕಾಲನಿ, ಎಸ್​ಪಿಎಂ ರಸ್ತೆಯಲ್ಲಿ ಬಂದ್​ ಆಗಿದ್ದ ಬೀದಿ ದೀಪಗಳನ್ನು ಪಾಲಿಕೆ ಅಧಿಕಾರಿಗಳು ಸ್ವತ@ ಮುಂದೆ ನಿಂತು ದುರಸ್ತಿ ಮಾಡಿಸಿದರು. ನಗರದಲ್ಲಿ 8 ಹಂತದಲ್ಲಿ ಬೀದಿ ದೀಪ ದುರಸ್ತಿಗೊಳಿಸುವ ಕಾರ್ಯ ನಡೆದಿದೆ.

    ಸ್ಥಳದಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪಾಲಿಕೆ ಅಭಿಯಂತರೆ ಲಕ್ಷಿ$್ಮ ನಿಪ್ಪಾಣಿಕರ ಹಾಗೂ ಹೆಸ್ಕಾ ಅಧಿಕಾರಿಗಳು ಇದ್ದರು. ಬೀದಿ ದೀಪಗಳ ನಿರ್ವಹಣೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸಾರ್ವಜನಿಕರು ದೂರು ನೀಡಿದರೆ ತಕ್ಷಣ ಸ್ಪಂದಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts