More

    ಬಿ.ಎನ್.ಚಂದ್ರಪ್ಪ 14.33 ಕೋಟಿ ರೂ. ಆಸ್ತಿಗೆ ಅಧಿಪತಿ

    ಚಿತ್ರದುರ್ಗ: ಇಲ್ಲಿನ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು 14.33 ಕೋಟಿ ರೂ. ಆಸ್ತಿಗೆ ಅಧಿಪತಿಯಾಗಿದ್ದಾರೆ.

    ಚಂದ್ರಪ್ಪ, ಪತ್ನಿ ಕಾವ್ಯಾ, ಪುತ್ರ ಬಿ.ಸಿ.ಉತ್ಸವ್ ಚರಾಸ್ತಿ ಕ್ರಮವಾಗಿ 1.04 ಕೋಟಿ ರೂ., 84.90 ಲಕ್ಷ ರೂ., 35.47 ಲಕ್ಷ ರೂ., ಸ್ಥಿರಾಸ್ತಿ-9.55 ಕೋಟಿ ರೂ., ಇಲ್ಲ, 1.35 ಕೋಟಿ ರೂ., ನಗದು 28.85 ಲಕ್ಷ ರೂ., 1.22 ಲಕ್ಷ ರೂ., 1.1 ಲಕ್ಷ ರೂ., ಬ್ಯಾಂಕ್ ಖಾತೆಯಲ್ಲಿ 1.32 ಲಕ್ಷ ರೂ., 20.68 ಲಕ್ಷ ರೂ., 5.21 ಲಕ್ಷ ರೂ., ವಾಹನ-30 ಲಕ್ಷ ರೂ. ಮೌಲ್ಯದ ಕಾರು, ಇಲ್ಲ, 18 ಲಕ್ಷ ರೂ. ಮೌಲ್ಯದ ಕಾರು ಇದೆ.

    ಸಾಲ-89.71 ಲಕ್ಷ ರೂ., ಇಲ್ಲ, 9.48 ಲಕ್ಷ ರೂ. ಇದೆ. 210 ಗ್ರಾಂ, 940 ಗ್ರಾಂ, 180 ಗ್ರಾಂ ಸೇರಿ ಒಟ್ಟು 72.46 ಲಕ್ಷ ಮೌಲ್ಯದ 1,330 ಗ್ರಾಂ ಚಿನ್ನವಿದೆ. ಪತ್ನಿ ಹೆಸರಲ್ಲಿ 1.25 ಕೋಟಿ ರೂ. ಮೌಲ್ಯದ ಮನೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts