More

    ಬಿಸಿಲೂರಿಗೆ ಕರೊನಾ ಮಹಾ ಕಂಟಕ

    ವಾದಿರಾಜ ವ್ಯಾಸಮುದ್ರ ಕಲಬುರಗಿ: ಕರೊನಾ `ಮಹಾ’ ಕಂಟಕದಿಂದ ಬಿಸಿಲು ನಾಡು ಕಲಬುರಗಿ ತತ್ತರಿಸಿದೆ. ಶುಕ್ರವಾರ 86 ಪ್ರಕರಣ ದಾಖಲಾಗಿದ್ದರೆ, ಮೂರೇ ದಿನಗಳಲ್ಲಿ ಶತಕ ದಾಟಿದೆ. ಮುಂಬೈ ಲಿಂಕ್ ಅಬ್ಬರಿಸುತ್ತಿದೆ. ಮುಂಬೈನಿಂದ ಬಂದವರು ತಮ್ಮೊಂದಿಗೆ ಕರೊನಾವನ್ನು ಉಡುಗೊರೆಯಾಗಿ ತಂದಿದ್ದಾರೆ. ಹೀಗಾಗಿ ಕಲಬುರಗಿ ಕರೊನಾ ಜಿಲ್ಲೆಯಾಗುವತ್ತ ಹೆಜ್ಜೆ ಇರಿಸಿದೆ.
    ಈ ಮಾರಿ ಮಕ್ಕಳಿಂದ ವೃದ್ಧರವರೆಗೆ ಎಲ್ಲರನ್ನೂ ಹಿಂಡುತ್ತಿದೆ. ಸೋಮವಾರ ದಾಖಲಾದ 11 ಪ್ರಕರಣಗಳಲ್ಲಿ ಆರು ತಿಂಗಳ ಹಸುಗೂಸು ಸೇರಿ ಐದು ಮಕ್ಕಳಿದ್ದಾರೆ. ಒಂದೆಡೆ ಬಿಗುವಿಲ್ಲದ ಲಾಕ್ಡೌನ್, ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಕಾಮರ್ಿಕರನ್ನು ಜಿಲ್ಲೆಗೆ ಕರೆತಂದಿರುವುದಾಗಿ ಹೇಳುತ್ತಿರುವ ಜನಪ್ರತಿನಿಧಿಗಳ ನಡೆಯಿಂದಾಗಿ ಜಿಲ್ಲೆ ಜನ ಭಯಭೀತರಾಗಿದ್ದಾರೆ.
    ಜಿಲ್ಲೆಯಲ್ಲಿ ಪರಸ್ಪರ ಅಂತರ ಕಾಣುತ್ತಿಲ್ಲ. ಮಾಸ್ಕ್ ಹಾಕಿಕೊಳ್ಳುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದರ ಅರಿವಿಲ್ಲದಂತೆ ಗುಂಪಾಗಿ ತಿರುಗುತ್ತಿದ್ದಾರೆ. ಜನರ ಮೇಲೆ ಅಧಿಕಾರಿಗಳ ಹಿಡಿತವೂ ತಪ್ಪಿದೆ. ಈಗಂತೂ ಲಾಕ್ಡೌನ್ ಮತ್ತಷ್ಟು ಸಡಿಲಗೊಳಿಸಿದ್ದರಿಂದ ಜನರಲ್ಲಿರುವ ಭಯ ಸಂಪೂರ್ಣ ಇಲ್ಲವಾಗಿದೆ.
    ಇನ್ನು ಮಹಾರಾಷ್ಟ್ರದಿಂದ ಬಂದವರನ್ನು ಇರಿಸಿರುವ ಕ್ವಾರಂಟೈನ್ ಕೇಂದ್ರಗಳು ಅವ್ಯವಸ್ಥೆ ಆಗರಗಳಾಗಿವೆ ಎನ್ನುತ್ತಾರೆ ಅಲ್ಲಿರುವವರು. ಸರಿಯಾಗಿ ಊಟ, ಕುಡಿಯಲು ನೀರು ಸಿಗುತ್ತಿಲ್ಲ. ಶೌಚಗೃಹ, ಸ್ನಾನಗೃಹ ಸರಿಯಾಗಿಲ್ಲ ಎಂದು ಗೋಳಿಡುತ್ತಿದ್ದಾರೆ.
    ಕರೊನಾ ಹಾಟ್ಸ್ಪಾಟ್ ಆಗಿದ್ದ ಜಿಲ್ಲೆ ಆರಂಭದಲ್ಲಿ ರೆಡ್ ಜೋನ್ನಲ್ಲಿತ್ತು. ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜಿಲ್ಲೆಯನ್ನು ಕಿತ್ತಳೆ ವಲಯಕ್ಕೆ ಇಳಿಸುವ ಮೂಲಕ ಸಕರ್ಾರ ರೋಗವನ್ನು ಇನ್ನಷ್ಟು ಬರಮಾಡಿಕೊಂಡಿತು. ಈಗ ಯಾವ ಜಿಲ್ಲೆಯನ್ನು ಯಾವ ಜೋನ್ ಎಂದು ಪರಿವತರ್ಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

    ನಿಜಾಮುದ್ದೀನ್ ಸಭೆ, ವಲಸಿಗರಿಂದ ಹೆಚ್ಚಳ
    ಜಿಲ್ಲೆಯಲ್ಲಿ ಕರೊನಾ ಹಿಡಿತಕ್ಕೆ ಬರದಿರಲು ನವದೆಹಲಿ ನಿಜಾಮುದ್ದಿನ್ ಮರ್ಕಜ್ನಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಬಂದವರು ಮತ್ತು ಅನ್ಯ ರಾಜ್ಯಗಳಿಂದ ವಲಸೆ ಬಂದವರು ಕಾರಣರಾಗಿದ್ದಾರೆ ಎಂಬುದು ಅಂಕಿ-ಅಂಶಗಳು ಹೇಳುತ್ತವೆ. ದೇಶದಲ್ಲಿ ಕರೊನಾದಿಂದ ಮೊದಲ ಸಾವು ಆಗಿದ್ದೇ ಕಲಬುರಗಿಯಲ್ಲಿ. ಇದುವರೆಗೆ 115 ಸೋಂಕಿತರಿದ್ದು, ಈ ಪೈಕಿ ಏಳು ಜನ ಮೃತಪಟ್ಟಿದ್ದಾರೆ. ಖುಷಿ ಸಂಗತಿ ಎಂದರೆ 53 ಜನ ಗುಣಮುಖರಾಗಿ ಮನೆಗಳಿಗೆ ತೆರಳಿರುವುದು. ಏನಾದರಾಗಲೀ, ಹಸಿವಿನಿಂದ ಬಳಲುತ್ತಿರುವ ಮತ್ತು ಉದ್ಯೋಗವಿಲ್ಲದೆ ಕಂಗಾಲಾಗಿರುವ ಕಾರ್ಮಿಕರನ್ನು ತವರಿಗೆ ಕರೆಸಿಕೊಳ್ಳುವುದೇ ಸೂಕ್ತ ಎಂದು ನಿರ್ಧರಿಸಿದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ದೊಡ್ಡದಾದ ಸವಾಲು ಎದುರಿಸುವಂತಾಗಿದೆ. ಸೋಂಕು ಇದೀಗ ಗ್ರಾಮಗಳಿಗೂ ವಿಸ್ತರಿಸಿದೆ. ಸದ್ಯದ ವಾತಾವರಣ ಗಮನಿಸಿದರೆ ಮುಂದಿನ ದಿನಗಳಲ್ಲಿ ಸೋಂಕು ಹರಡುವಿಕೆ ನಿಯಂತ್ರಣ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದರೂ ಅಚ್ಚರಿಪಡಬೇಕಿಲ್ಲ.

    ಸರ್ಕಾರ ಏನೇ ಮಾಡಿದರೂ ಜನರ ಸಹಕಾರ ಇಲ್ಲದಿದ್ದರೆ ಸೋಂಕು ನಿಯಂತ್ರಿಸುವುದು ಕಷ್ಟ. ಸರ್ಕಾರ ನಾನಾ ವರ್ಗಗಳ ಜನರಿಗೆ ಆಹಾರ ಕಿಟ್ ಕೊಡುತ್ತಿದೆ. ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿ ಅನ್ಯ ರಾಜ್ಯಗಳಿಂದ ಬಂದವರಿಗೆ ಇಳಿದುಕೊಳ್ಳುವುದು ಸೇರಿ ಎಲ್ಲ ವ್ಯವಸ್ಥೆ ಮಾಡಿದೆ. ಹೊರಗಡೆ ತಿರುಗಬೇಡಿ ಎಂದು ಮನವಿ ಮಾಡುತ್ತಿದ್ದರೂ ಜನ ಕೇಳುತ್ತಿಲ್ಲ. ಜನರ ಅಸಹಕಾರದಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.
    | ಗೋವಿಂದ ಕಾರಜೋಳ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts