More

    ಬಿಳಿಗಿರಿರಂಗನಬೆಟ್ಟದಲ್ಲಿ ತೆಪ್ಪೋತ್ಸವ ಸಂಪನ್ನ : ಸೋಮೇಶ್ವರ ಕೆರೆಯಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನ


    ಚಾಮರಾಜನಗರ : ಯಳಂದೂರು ತಾಲೂಕಿನ ಪೌರಾಣಿಕ ಯಾತ್ರಸ್ಥಳ ಬಿಳಿಗಿರಿರಂಗನಬೆಟ್ಟದಲ್ಲಿ ಒಂದು ವಾರ ಕಾಲ ನಡೆದ ತೆಪ್ಪೋತ್ಸವಕ್ಕೆ ಶನಿವಾರ ಸಂಜೆ ವಿಧ್ಯುಕ್ತವಾಗಿ ತೆರೆ ಎಳೆಯಲಾಯಿತು.


    ದೇಗುಲದಿಂದ 5-6 ಕಿಲೋಮೀಟರ್ ದೂರದಲ್ಲಿರುವ ಸೋಮೇಶ್ವರನ ಕೆರೆಯಲ್ಲಿ ತೆಪ್ಪೋತ್ಸವ ನಡೆಯಿತು. ಇದರ ನಿಮಿತ್ತ ಗ್ರಾಮದ ಗಂಗಾಧರೇಶ್ವರ ದೇಗುದಲ್ಲಿರುವ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಅಲಂಕೃತ ಬಿದಿರಿನಲ್ಲಿ ಮಾಡಿದ ತೆಪ್ಪದಲ್ಲಿ ಶಂಖ, ಜಾಗಟೆಗಳ ಸದ್ದಿನೊಂದಿಗೆ ಮೂರ್ತಿಯನ್ನು ತೆಪ್ಪದಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ, ಹವನಗಳನ್ನು ಮಾಡಿ ಕೆರೆಯಲ್ಲಿ ತೆಪ್ಪೋತ್ಸವ ನೆರವೇರಿಸಲಾಯಿತು.


    ಬಿಳಿಗಿರಿರಂಗನಬೆಟ್ಟದಲ್ಲಿ ದೊಡ್ಡ ಜಾತ್ರೆಯಾದ ಒಂದು ತಿಂಗಳ ನಂತರ ತೆಪ್ಪೋತ್ಸವ ನಡೆಸಲಾಗುತ್ತದೆ. ಅದರಂತೆ, 6 ದಿನಗಳ ಕಾಲ ಪ್ರತಿದಿನ ಸಂಜೆ ಬೆಟ್ಟದ ಉತ್ಸವಮೂರ್ತಿಯನ್ನು ಮೆರವಣಿಗೆ ಮೂಲಕ ಹೊತ್ತು ತಂದು ಅಲಂಕೃತ ತೆಪ್ಪದಲ್ಲಿ ಕುಳ್ಳಿರಿಸಿ, ಪೂಜಿಸಿ, ತೇಲಿಸಿ ಪೂಜಾವಿಧಿ ನೆರವೇರಿಸಲಾಯಿತು. 7ನೇ ದಿನ ಇಲ್ಲಿರುವ ಮತ್ತೊಂದು ಪೌರಾಣಿಕ ದೇಗುಲವಾದ ಗಂಗಾಧರೇಶ್ವರಸ್ವಾಮಿಯ ತೆಪ್ಪ ನಡೆಯುತ್ತದೆ. ಆ ದಿನ ಗಂಗಾಧರೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಇಟ್ಟು ತೆಪ್ಪೋತ್ಸವ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts