More

    ಬಿತ್ತನೆಯಾದ ಬೀಜ ನೀರು ಪಾಲು

    ಧಾರವಾಡ: ರೋಹಿಣಿ ಮಳೆ ಗುರುವಾರ ಸಂಜೆ ಅಬ್ಬರಿಸಿದೆ. ಮುಂಗಾರು ಮೊದಲ ಮಳೆಯಿಂದ ಇಳೆ ತಂಪಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಮತ್ತೊಂದೆಡೆ ಹಳ್ಳಗಳ ನೀರಿನ ಸೆಳೆತಕ್ಕೆ ಸಿಲುಕಿದ ರಸ್ತೆ, ಸೇತುವೆಗಳು ಕಿತ್ತು ಹೋಗಿದೆ.
    ತಾಲೂಕಿನ ಯಾದವಾಡ- ಉಪ್ಪಿನಬೆಟಗೇರಿ ಮಾರ್ಗದಲ್ಲಿರುವ ದಾಸನಕೊಪ್ಪ ಹಳ್ಳದ ನೀರಿನ ಸೆಳವಿಗೆ ಸೇತುವೆ ಪಕ್ಕದ ಮಣ್ಣು ಸಂಪೂರ್ಣ ಕಿತ್ತು ಹೋಗಿದೆ. ಸೇತುವೆ ಹೂಳಿನಿಂದ ತುಂಬಿದ್ದು, ಸಣ್ಣ ಮಳೆಯಾದರೂ ಹಳ್ಳದ ನೀರು ರಸ್ತೆ ಮೇಲೆ ಹರಿಯುತ್ತದೆ. ಗುರುವಾರ ಸುರಿದ ಮಳೆಯಿಂದಾಗಿ ಭಾರಿ ಪ್ರಮಾಣದ ನೀರು ರಸ್ತೆ ಮೇಲೆ ಹರಿದಿದ್ದರಿಂದ ಒಂದು ಗಂಟೆಗೂ ಹೆಚ್ಚು ಹೊತ್ತು ಸಂಚಾರ ಬಂದ್ ಆಗಿತ್ತು. ಇಲ್ಲಿ ಎತ್ತರದ ಸೇತುವೆ ನಿರ್ವಿುಸಬೇಕು ಎನ್ನುವ ಹಲವು ವರ್ಷಗಳ ಬೇಡಿಕೆಗೆ ಲೋಕೋಪಯೋಗಿ ಇಲಾಖೆಯಿಂದ ಸ್ಪಂದನೆ ದೊರೆತಿಲ್ಲ.
    ಮತ್ತೊಂದೆಡೆ ಮುಂಗಡವಾಗಿ ಬಿತ್ತನೆ ಮಾಡಿದ ರೈತರು ಮಳೆಯ ಹೊಡೆತಕ್ಕೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಬಿತ್ತನೆಯಾದ ಶೇಂಗಾ, ಹೆಸರು, ಸೋಯಾಬೀನ್ ಬೀಜಗಳು ಕಿತ್ತು ಹಳ್ಳದ ಪಾಲಾಗಿವೆ. ಈಗಷ್ಟೇ ಮೊಳಕೆಯೊಡೆದ ಸಸಿಗಳು ಕಿತ್ತು ಬಿದ್ದಿವೆ. ಜಮೀನಿನ ಬದುವುಗಳು ಹಾಳಾಗಿವೆ. ಇದೇರೀತಿ ಜಿಲ್ಲೆಯ ವಿವಿಧೆಡೆ ಮೊದಲ ಮಳೆಯೇ ಅವಾಂತರ ಸೃಷ್ಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts