More

    ಬಿಜೆಪಿ ತೆಕ್ಕೆಗೆ ಚಿಂಚೋಳಿ ಎಪಿಎಂಸಿ

    ಚಿಂಚೋಳಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೂರನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿಗರು ಆಯ್ಕೆಯಾಗುವ ಮೂಲಕ, ಸ್ಥಳೀಯ ಸಂಸ್ಥೆಯಲ್ಲಿ ಕಮಲ ಪಡೆಯ ದರ್ಬಾರ ಶುರುವಾದಂತಾಗಿದೆ.
    ಬುಧವಾರ ಆಯೋಜಿಸಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಿಂದ ಅಶೋಕ ಪಡಶೆಟ್ಟಿ, ಕಾಂಗ್ರೆಸ್ನ ಚಂದ್ರಸಿಂಗ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅಣ್ಣಾರಾವ ಪೆದ್ದಿ ಮತ್ತು ಕಾಂಗ್ರೆಸ್ನ ಖಾಜಾಪಟೇಲ್ ಸ್ಪರ್ಧಿಸಿದ್ದರು.
    ಎಪಿಎಂಸಿಯಲ್ಲಿ 13 ಚುನಾಯಿತ ಹಾಗೂ 3 ನಾಮನಿರ್ದೇಶಿತ ಸದಸ್ಯರಿದ್ದಾರೆ. ಬಿಜೆಪಿಯ ಅಶೋಕ, ಅಣ್ಣಾರಾವ್ ತಲಾ 8 ಮತ ಪಡೆದು ಜಯಗಳಿಸಿದರೆ, ಕಾಂಗ್ರೆಸ್ನ ಚಂದ್ರಸಿಂಗ್, ಖಾಜಾ ಪಟೇಲ್ ತಲಾ 6 ಮತ ಪಡೆದು ಸೋಲನುಭವಿಸಿದರು. 16 ವೋಟ್ಗಳಲ್ಲಿ 1 ತಿರಸ್ಕೃತಗೊಂಡರೆ, ಸಾಮಾಜಿಕ ಕಾರ್ಯಕರ್ತ ರಮೇಶ ಯಾಕಾಪುರ ಮತದಾನ ಮಾಡದೆ ತಟಸ್ಥರಾಗಿದ್ದರು. ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

    ಕಮಲ ಪಡೆಯಿಂದ ವಿಜಯೋತ್ಸವ
    ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬಿಜೆಪಿ ಬೆಂಬಲಿಗರಾದ ಅಶೋಕ ಪಡಶೇಟ್ಟಿ, ಅಣ್ಣಾರಾವ ಪೆದ್ದಿ ಆಯ್ಕೆಯಾಗುತ್ತಿದ್ದಂತೆ ಶಾಸಕ ಡಾ. ಅವಿನಾಶ ಜಾಧವ್ ನೇತೃತ್ವದಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಸಂತೋಷ ಗಡಂತಿ, ಜಗನ್ನಾಥ ಇಟಗಿ, ರಾಮಚಂದ್ರ ಜಾಧವ್, ಶ್ರೀಮಂತ ಕಟ್ಟಿಮನಿ, ಜಗದೀಶಸಿಂಣ್ ಠಾಕೂರ್, ಅಶೋಕ ಚವ್ಹಾಣ್, ಲಕ್ಷ್ಮಣ ಅವಂಟಿ, ಈಶ್ವರ ನಾಯಕ, ಅಜೀತ ಪಾಟೀಲ್, ರಾಜು ಪವಾರ, ರಮೇಶ ಪಡಶೇಟ್ಟಿ, ಪ್ರೇಮಸಿಂಗ್ ಜಾಧವ್, ಶಿವಯೋಗಿ ರುಸ್ತಂಪುರ್, ಆಕಾಶ ಕೊಳ್ಳೂರ್, ರಾಮರೆಡ್ಡಿ, ಕಾಶಿನಾಥ ನಾಟೀಕಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts