More

    ಬಿಜೆಪಿ, ಜೆಡಿಎಸ್ ನಡುವಿನ ಒಳ ರಾಜಕೀಯದ ಒಪ್ಪಂದ

    ಬೆಟ್ಟದಪುರ: ತಾಲೂಕಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದದ ರಾಜಕೀಯವಿದೆ. ಕಳೆದ ಬಾರಿ ನನ್ನ ಸೋಲಿಗೆ ಇದೂ ಒಂದು ಕಾರಣವಾಗಿತ್ತು ಎಂದು ಶಾಸಕ ಕೆ.ವೆಂಕಟೇಶ್ ಆರೋಪಿಸಿದರು.


    ಬೆಟ್ಟದಪುರ ಸಮೀಪದ ಕೋಮಲಾಪುರ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನ ಶಾಸಕರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿ, ವಿಧಾನಸಭಾ ಚುನಾವಣೆಯಲ್ಲಿ ಅವರ ಬೆಂಬಲ ಪಡೆದುಕೊಂಡಿದ್ದಾರೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ತಾಲೂಕಿನ ಯಾವುದೇ ಕಾರ್ಯಕ್ರಮಗಳಿಗೆ ಬಂದ ಸಂದರ್ಭದಲ್ಲಿ ಶಾಸಕ ಕೆ.ಮಹದೇವ್ ಅವರನ್ನು ಹೊಗಳಿ ಅಟ್ಟಕ್ಕೆ ಏರಿಸುತ್ತಾರೆ. ಇದರ ಹಿಂದಿನ ಮರ್ಮವನ್ನು ತಾಲೂಕಿನ ಜನತೆ ಅರಿತುಕೊಂಡು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.


    ಸುಳ್ಳಿನ ಭರವಸೆ ನೀಡುವ ಬಿಜೆಪಿ ಹಾಗೂ ಕುಟುಂಬ ರಾಜಕಾರಣ ನಡೆಸುವ ಜೆಡಿಎಸ್ ಪಕ್ಷಗಳ ಮರುಳು ಮಾತಿಗೆ ಕರಗದೆ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು. ಜನರ ಸಮಸ್ಯೆ ಆಲಿಸಿ ಶಾಶ್ವತ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶಾಸಕರು ಶ್ರಮಿಸಬೇಕೇ ಹೊರತು ನರೇಗಾ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡಿ ಅಭಿವೃದ್ಧಿ ಮಾಡಿದ್ದೇನೆಂದು ಬೊಬ್ಬೆ ಹೊಡೆಯಬಾರದು. ನಾನು ಶಾಸಕನಾಗಿದ್ದ ಸಂದರ್ಭ ತಾಲೂಕಿಗೆ ಹಲವು ಶಾಶ್ವತ ಯೋಜನೆಗಳನ್ನು ಕೊಟ್ಟಿದ್ದೇನೆ. ಅಂತಹ ಯಾವುದಾರೂ ಒಂದು ಯೋಜನೆಯನ್ನು ಈಗಿನ ಶಾಸಕರು ನೀಡಿದ್ದರೆ ದಾಖಲೆ ತೋರಿಸಲಿ ಎಂದು ಸವಾಲು ಹಾಕಿದರು.
    ಶಾಸಕ ಕೆ.ಮಹದೇವ್ ಹಾಗೂ ಅವರ ಪುತ್ರ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಮುಂಬರುವ ಚುನಾವಣೆಯಲ್ಲಿ ಸೋಲಿನ ಭಯದಿಂದ ಹಣ ಹಿಡಿದುಕೊಂಡು ತಾಲೂಕಿನಾದ್ಯಂತ ಸುಳ್ಳು ಮಾತುಗಳನ್ನು ಆಡುತ್ತಾ ತಿರುಗುತ್ತಿದ್ದಾರೆ. ಅವರಿಗೆ ಮತದಾರರೇ ಸರಿಯಾದ ಉತ್ತರ ನೀಡಲಿದ್ದಾರೆ ಎಂದರು.


    ಭುವನಹಳ್ಳಿ ಟೋಲ್ ಗೇಟ್‌ನಿಂದ ಭುವನಹಳ್ಳಿ, ಬೆಕ್ಕರೆ ಹಾಗೂ ಕೋಮಲಾಪುರ ಗ್ರಾಮದವರೆಗೆ ರ‌್ಯಾಲಿ ನಡೆಯಿತು. ಈ ವೇಳೆ ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಗೆ ಉಚಿವಾಗಿ ತಟ್ಟೆ, ಲೋಟ ವಿತರಿಸಲಾಯಿತು.


    ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಟಟೇಶ್, ಅನಿಲ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಚ್.ಡಿ.ಗಣೇಶ್, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್‌ಬಾಬು, ಮುಖಂಡರಾದ ಕಾನೂರು ಗೋವಿಂದೇಗೌಡ, ಕೋಮಲಾಪುರ ಜೀವನ್, ಬಸವರಾಜ್, ನಾಗಣ್ಣ, ಕರೀಗೌಡ, ರಾಮಚಂದ್ರ, ಕೋಗಿಲವಾಡಿ ರಾಮಚಂದ್ರ, ಸಿಗೂರು ವಿಜಯ್‌ಕುಮಾರ್, ಕೆ.ಸಿ.ರಾಜಶೇಖರ್, ಆರ್.ತುಂಗ ಹರೀಶ್, ಪುಟ್ಟರಾಜು, ಪದ್ಮಲತಾ, ಈಚೂರು ಲೋಕೇಶ್, ಪುಟ್ಟಯ್ಯ, ಚೆನ್ನಕಲ್ ಶೇಖರ್, ಆಯತನಹಳ್ಳಿ ಮಹದೇವ್, ಸ್ವಾಮಿಗೌಡ, ರಘು, ಲೋಹಿತ್, ಹರೀಶ್, ಶಿವಪ್ಪ, ಮುಕುಂದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts