More

    ಬಿಜೆಪಿ ಅಭ್ಯರ್ಥಿ ಜೊಲ್ಲೆ ಕುಟುಂಬದಿಂದ ಹಕ್ಕು ಚಲಾವಣೆ

    ಚಿಕ್ಕೋಡಿ: ಮತದಾನ ಪ್ರತಿಯೊಬ್ಬರ ಹಕ್ಕು. ಸುಭದ್ರ ಪ್ರಜಾಪ್ರಭುತ್ವದಲ್ಲಿ ಸರ್ವರೂ ಪಾಲ್ಗೊಂಡು, ಉತ್ತಮ ಸಮಾಜ ಕಟ್ಟಲು ಎಲ್ಲರೂ ಅತ್ಯಮೂಲ್ಯವಾದ ಮತ ಚಲಾಯಿಸಬೇಕೆಂದು ಚಿಕ್ಕೋಡಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ಯಕ್ಸಂಬಾ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಮರಾಠಿ ಶಾಲೆಯ ಬೂತ್ ನಂಬರ್ 28ರಲ್ಲಿ ಶಾಸಕಿ ಶಶಿಕಲಾ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ ಅವರೊಂದಿಗೆ ಮತ ಚಲಾಯಿಸಿದ ನಂತರ ಮಾತನಾಡಿದರು. ನಿಪ್ಪಾಣಿ ಕ್ಷೇತ್ರದ ಭಿವಶಿ ಗ್ರಾಮದ ಸರ್ಕಾರಿ ಶಾಲೆಯಲ್ಲಿನ ಬೂತ್ ನಂಬರ್ 130ರಲ್ಲಿ ಬಸವಜ್ಯೋತಿ ಯೂತ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹಾಗೂ ಯಶಸ್ವಿನಿ ಜೊಲ್ಲೆ ಮತ ಚಲಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts