More

    ಬಿಜೆಪಿಗೆ ಹೈಕೋರ್ಟ್​ ಶಾಕ್​; ಹಳೆಯ ಮೀಸಲಾತಿಯಂತೆ ಮೇಯರ್​ ಚುನಾವಣೆ ನಡೆಸಲು ಸೂಚನೆ

    ಕಲಬುರಗಿ: ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿರುವ ಬಿಜೆಪಿಗೆ ಹೈಕೋರ್ಟ್​ ಕಲಬುರಗಿ ಪೀಠ ಶಾಕ್​ ನೀಡಿದ್ದು, ಈ ಹಿಂದಿನ ಮೀಸಲಾತಿಯಂತೆ ಮೇಯರ್​- ಉಪ ಮೇಯರ್​ ಚುನಾವಣೆ ನಡೆಸಲೂ ಆದೇಶ ನೀಡಿದೆ.

    ಮೇಯರ್​- ಉಪ ಮೇಯರ್​ ಸ್ಥಾನದ ಮೀಸಲಾತಿ ಬದಲಾವಣೆ ಹಾಗೂ ಐವರು ವಿಧಾನ ಪರಿಷತ್​ ಸದಸ್ಯರ ಹೆಸರನ್ನು ಸ್ಥಳೀಯ ಮತದಾರರ ಪಟ್ಟಿಯಲ್ಲಿ ಸೇರಿಸಿರುವುದನ್ನು ಪ್ರಶ್ನಿಸಿ ಯಲ್ಲಪ್ಪ ನಾಯ್ಕೋಡಿ ಹಾಗೂ ಹುಲಿಗೆಪ್ಪ ಕನಕಗಿರಿ ಎರಡು ರಿಟ್​ ಅರ್ಜಿಯನ್ನು ಹೈಕೋರ್ಟ್​ ಪೀಠಕ್ಕೆ ಸಲ್ಲಿಸಿದ್ದರು.

    ಶುಕ್ರವಾರ ವಿಚಾರಣೆ ಆರಂಭಿಸಿದ ಹೈಕೋರ್ಟ ಮಧ್ಯಾಹ್ನ 4.30ಕ್ಕೆ ತೀರ್ಪು ಕಾಯ್ದಿರಿಸಿತ್ತು. ನವೆಂಬರ್​ನಲ್ಲಿನ ಮತದಾರರ ಪಟ್ಟಿಯಂತೆ 63 ಮತದಾರರೊಂದಿಗೆ ಚುನಾವಣೆ ನಡೆಸಬೇಕು. ಜೊತೆಗೆ ಹಳೆಯ ಮೇಯರ್​ ಕೆಟಗರಿ (ಸಾಮಾನ್ಯ ಮಹಿಳೆ) ಯಂತೆ ಚುನಾವಣೆ ನಡೆಸಬೇಕು ಎಂದು ಪ್ರಾದೇಶಿಕ ಆಯುಕ್ತರಿಗೆ ಹೈಕೋರ್ಟ್​ ನಿರ್ದೇಶನ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts