More

    ಬಿಕ್ಕಟ್ಟು ನಿವಾರಣೆಗೆ ಆರ್ಥಿಕ ಶಿಸ್ತು ಮದ್ದು

    ಹುಬ್ಬಳ್ಳಿ: ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಆರ್ಥಿಕ ಶಿಸ್ತು ಅತ್ಯಗತ್ಯ. 247 ಕೆಲಸ ಮಾಡಬೇಕು. ಸಮಯ, ಆರೋಗ್ಯದ ಕಡೆಗೂ ಲಕ್ಷ್ಯ ವಹಿಸಬೇಕು. ವ್ಯವಹಾರದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇದ್ದರೆ ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು

    ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ವಿಜಯ ಸಂಕೇಶ್ವರ ಅವರು ಅಭಿಪ್ರಾಯಪಟ್ಟರು.

    ನಗರದ ಡೆನಿಸನ್ಸ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾನ್ಪೆಡರೇನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಹು-ಧಾ ಜಿಲ್ಲಾ ವಾರ್ಷಿಕ ಸದಸ್ಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸಿಐಐ ಜಿಲ್ಲಾ ಕೌನ್ಸಿಲ್ ಅನ್ನು ಅವಿಭಜಿತ ಧಾರವಾಡ ಜಿಲ್ಲೆಯ ಹಾವೇರಿ ಮತ್ತು ಗದಗ ಜಿಲ್ಲೆಯನ್ನೊಳಗೊಂಡಂತೆ ರಚಿಸಬೇಕು. ಪ್ರತಿ ಜಿಲ್ಲೆಯಲ್ಲಿ ಇಂಥ ಶಾಖೆ ಆರಂಭಿಸುವುದಲ್ಲದೆ ಸದಸ್ಯರ ಸಂಖ್ಯೆಯನ್ನೂ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

    ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ಮಾರುಕಟ್ಟೆ ಮೌಲ್ಯ ಹಿಂದಿಗಿಂತಲೂ ಈಗ ಜಾಸ್ತಿ ಇದೆ. ಆದರೆ, ಸಾಮಾಜಿಕ, ಆರ್ಥಿಕ, ಪ್ರಾದೇಶಿಕ ಅಸಮತೋಲನ ನಿವಾರಣೆ ದೃಷ್ಟಿಯಿಂದ ಎಲ್ಲೆಡೆಯೂ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

    ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ, ಸಿಐಐ ಹು-ಧಾ ಜಿಲ್ಲಾ ಕೌನ್ಸಿಲ್ ನಿಗರ್ವಿುತ ಚೇರ್ಮನ್ ಡಾ. ಅಶೋಕ ಶೆಟ್ಟರ್ ಮಾತನಾಡಿ, ಸ್ಟಾರ್ಟ್​ಅಪ್​ಗಳು ಬೆಂಗಳೂರು ಕೇಂದ್ರಿತಗೊಳ್ಳದೇ ದ್ವಿತೀಯ ಸ್ತರದ ಸಿಟಿಗಳತ್ತ ಧಾವಿಸುವಂತೆ ಸಲಹೆ ನೀಡಿದರು.

    ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಡಾ. ವಿಜಯ ಸಂಕೇಶ್ವರ ಹಾಗೂ ಡಾಕ್ಟರೇಟ್ ಪದವಿ ಲಭಿಸಿದ ಪ್ರಯುಕ್ತ ಡಾ. ಪ್ರಭಾಕರ ಕೋರೆ ಅವರನ್ನು ಸಿಐಐ ವತಿಯಿಂದ ಸನ್ಮಾನಿಸಲಾಯಿತು.

    ಸಂಘಟನೆ ಹು-ಧಾ ಜಿಲ್ಲಾ ಕೌನ್ಸಿಲ್ ಚೇರ್ಮನ್ ಆಗಿ ಡಾ. ವಿ.ಎಸ್.ವಿ. ಪ್ರಸಾದ, ವೈಸ್ ಚೇರ್ಮನ್ ಆಗಿ ಗಿರೀಶ ಮಾನೆ ಅವರನ್ನು ನೇಮಕ ಮಾಡಲಾಯಿತು.

    ರಾಜ್ಯ ಉಪಾಧ್ಯಕ್ಷ ಸಂದೀಪ್ ಸಿಂಗ್, ವೋಲ್ವೊ ಗ್ರುಪ್ ಇಂಡಿಯಾ ಪ್ರೖೆ.ಲಿ. ಜನರಲ್ ಮ್ಯಾನೇಜರ್ ಬಿ. ಇಂದುಶೇಖರ, ಒರಿಗಾಮಿ ಕ್ರಿಯೇಟಿವ್ ಕಾನ್ಸೆಪ್ಟ್ಸ್ ಸಹ ಸಂಸ್ಥಾಪಕ ಲಾಯಿಕ್ ಅಲಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts