More

    ಬಿಐಇಟಿ ಕಾಲೇಜಿನಲ್ಲಿ ಪದವಿ ದಿನಾಚರಣೆ- ಇಂಜಿನಿಯರ್‌ಗಳಲ್ಲಿ ಬೇಡ ರಿಸ್ಕ್ ಹಿಂಜರಿಕೆ

    ದಾವಣಗೆರೆ: ಅನಕ್ಷರಸ್ಥರು, ಕಡಿಮೆ ಓದಿದ ಕೆಲವರು ಜೀವನದಲ್ಲಿ ರಿಸ್ಕ್ ತೆಗೆದುಕೊಂಡ ಕಾರಣಕ್ಕೆ ದೊಡ್ಡ ಉದ್ಯಮಿಗಳಾಗಿದ್ದಾರೆ. ಇಂಜಿನಿಯರ್‌ಗಳು ಕೂಡ ಮನೋಭಾವ ಬದಲಿಸಿಕೊಂಡರೆ ಮಾತ್ರ ಬೆಳವಣಿಗೆ ಸಾಧ್ಯ ಎಂದು ಬೆಂಗಳೂರು ನಗರ ಪೊಲೀಸ್ ವಿಭಾಗದ ಡಿ.ಸಿ.ಪಿ. ಜಿ.ಎಚ್.ಯತೀಶ್ ಚಂದ್ರ ತಿಳಿಸಿದರು.
    ನಗರದ ಬಿಐಇಟಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 40ನೇ ಪದವಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕೆಲ ಯುವ ಇಂಜಿನಿಯರ್‌ಗಳಲ್ಲಿ ಉತ್ತಮ ಯೋಜನೆಗಳಿರುತ್ತವೆ. ತಾವೇ ಕೈಗಾರಿಕೆ ಆರಂಭಿಸಿ ಯೋಜನೆಗಳನ್ನು ತಾವೇ ಕಾರ್ಯಗತಗೊಳಿಸಿದಲ್ಲಿ ಉತ್ತಮ ಆದಾಯ ಪಡೆಯುವ ಸಾಧ್ಯತೆಯಿದೆ. ಆದರೆ, ರಿಸ್ಕ್ ಸಹವಾಸದಿಂದ ದೂರ ಉಳಿದು ದೊಡ್ಡ ಕಂಪನಿಯ ಉದ್ಯೋಗ ಹುಡುಕಿಕೊಂಡು ಹೋಗುವ ಮನೋಭಾವದಿಂದ ಹಿಂದೆ ಬೀಳುತ್ತಿದ್ದಾರೆ ಎಂದು ವಿಷಾದಿಸಿದರು.
    ದೊಡ್ಡ ಸಾಧನೆ ಮಾಡುತ್ತಿರುವವರಲ್ಲಿ ಇಂಜಿನಿಯರ್‌ಗಳ ಪಾಲು ಶೇ.40ರಷ್ಟಿದೆ. ಇಂಜಿನಿಯರಿಂಗ್ ಮಾತ್ರವಲ್ಲದೆ ಎಲ್ಲ ವಲಯಗಳಲ್ಲಿ ಸಾಧಕರಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಮಸ್ಯೆ ಬಗೆಹರಿಸುವುದನ್ನು ಕಲಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಕಲೆ ಎಲ್ಲ ವಲಯಗಳಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಹೇಳಿದರು.
    ಯಶಸ್ಸು ಗಳಿಸಲು ಚಿಕ್ಕ ವಯಸ್ಸಿನಲ್ಲೇ ಉದ್ಯಮಶೀಲತಾ ಗುಣ ಬೆಳೆಸಿಕೊಳ್ಳಬೇಕು. ಕಂಪನಿಯೊಂದರ ಉದ್ಯೋಗಿಯಾಗುವ ಮನೋಭಾವ ಬಿಟ್ಟು, ಉದ್ಯಮ ಆರಂಭಿಸುವ ಸ್ಫೂರ್ತಿ ಹೊಂದಬೇಕು. ಮಾನಸಿಕ-ದೈಹಿಕ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ, ಕುಟುಂಬದಲ್ಲಿ ಉತ್ತಮ ಸಂಬಂಧ, ಜೀವನದಲ್ಲಿ ಹೆಚ್ಚು ಸ್ವಾತಂತ್ರ್ಯ ನೀಡುವಷ್ಟು ಆದಾಯ, ಉತ್ತಮ ಸ್ನೇಹಿತರು ಹಾಗೂ ಹವ್ಯಾಸಗಳು ಕೂಡ ಯಶಸ್ಸು ತರುತ್ತವೆ ಎಂದು ಹೇಳಿದರು.
    ದಾವಣಗೆರೆ ವಿ.ವಿ. ಮೌಲ್ಯಾಂಕನ ಕುಲಸಚಿವ ಡಾ. ಕೆ. ಶಿವಶಂಕರ್ ಮಾತನಾಡಿ, ಕೃತಕ ಬುದ್ಧಿವಂತಿಕೆ, ಬ್ಲಾಕ್‌ಚೈನ, ಸೈಬರ್, ಡಾಟಾ ಹಾಗೂ ಇಂಧನ ವಲಯಗಳು ಭವಿಷ್ಯವನ್ನು ರೂಪಿಸುತ್ತಿವೆ. ಈ ವಲಯಗಳಿಗೆ ಇಂಜಿನಿಯರ್‌ಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
    ಬಿ.ಐ.ಇ.ಟಿ. ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಎಚ್.ಬಿ. ಅರವಿಂದ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಎಸ್. ಕುಮಾರಪ್ಪ, ಎಸ್.ಸುರೇಶ್, ಸಿ.ಆರ್. ನಿರ್ಮಲಾ, ಮಾನವೇಂದ್ರ, ಬಿ. ಪೂರ್ಣಿಮಾ, ಜಿ.ಎಸ್. ಸುನಿತಾ, ದೇವೇಂದ್ರಪ್ಪ, ಸಿ.ಎಂ. ಕಲ್ಲೇಶಪ್ಪ ಇದ್ದರು. ದಿವ್ಯಾ ಹಿರೇಮಠ್ ಪ್ರಾರ್ಥಿಸಿದರು. ಎ.ಜಿ. ಶಂಕರಮೂರ್ತಿ ಸ್ವಾಗತಿಸಿದರು. ವಿಶ್ವನಾಥ್ ಹಾಗೂ ಶ್ರಾವಣಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts